September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಸಾಲಿಗ್ರಾಮ : ಶ್ರೀ ಗುರು ನರಸಿಂಹನ ಸನ್ನಿಧಿಯಲ್ಲಿ ತೃತೀಯ ಶ್ರಾವಣ, ಶನಿವಾರದ ಸಂಭ್ರಮ :25 ಸಾವಿರಕ್ಕೂ ಮಿಕ್ಕಿ ಜನರಿಂದ ಸಾಲಿಗ್ರಾಮ ದೇವರ ದರ್ಶನ ;

ವರದಿ /ಚಿತ್ರ :ಈ ಮೀಡಿಯಾ

ಸಾಲಿಗ್ರಾಮ : ಶ್ರಾವಣ ಮಾಸದ 3ನೇ ಶನಿವಾರದ ಅಂಗವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 25 ಸಾವಿರಕ್ಕೂ ಮಿಕ್ಕಿ ಜನರು ಸಾಲಿಗ್ರಾಮ ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು.ಮಧ್ಯಾಹ್ನ ಸುಮಾರು ಆರು ಸಾವಿರಕ್ಕೂ ಭಕ್ತಾದಿಗಳು ಬೋಜನ ಪ್ರಸಾದವನ್ನು ಸ್ವೀಕರಿಸಿದರು.

ಬೆಳಿಗ್ಗೆ 10-30ರಿಂದ ಶ್ರೀಮತಿ ಪ್ರಕೃತಿ ಉರಾಳ ಮತ್ತು ಬಳಗದವರಿಂದ ವೀಣಾವಾದನ, ಶ್ರೀಮತಿ ಮೀನಾ ಕಾರಂತ ಮತ್ತು ಬಳಗದವರಿಂದ ಭಕ್ತಿ ಸಂಗೀತ, ರಸರಂಗ ಮಹಿಳಾ ತಂಡದವರಿಂದ ಯಕ್ಷಗಾನ ತಾಳಮದ್ದಲೆಭಕ್ತ ಸುಧಾಮ ಕಾರ್ಯಕ್ರಮ ನಡೆಯಿತು ಸಂಜೆ ಸಮಾಜದಲ್ಲಿ ಸೇವೆ ಸಲ್ಲಿಸಿದ ಋತ್ವಿಜರನ್ನು ಸನ್ಮಾನಿಸಲಾಯಿತು.

ಪುರೋಹಿತರು ಮತ್ತು ಅಧ್ಯಾಪನ ಮಾಡುತ್ತಿರುವ ಮಣೂರು ವೇ. ಮೂ. ಚಂದ್ರಶೇಖರ ಅಡಿಗರು, ಶ್ರೀ ದೇವಳದ ಸರತಿ ಅರ್ಚಕರಾದ ಪಾರಂಪಳ್ಳಿ ವೇ. ಮೂ ಚಂದ್ರಶೇಖರ ಅಡಿಗರು, ಪುರೋಹಿತರಾದ ಕಟೈರೆ ವೇ. ಮೂ. ವಿಶ್ವನಾಥ ಐತಾಳರು, ಅರ್ಚಕರು, ಪುರೋಹಿತರಾದ ಹಂದಟ್ಟು ವೇ. ಮೂ. ಸೀತಾರಾಮ ಭಟ್, ಶ್ರೀದೇವಳದ ಪವಿತ್ರಪಾಣಿ ಪಾರಂಪಳ್ಳಿ ಗಣೇಶ ಐತಾಳ ಇವರನ್ನು ದಂಪತಿ ಸಮೇತರಾಗಿ ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚಂದ್ರಶೇಖರ ಉಪಾಧ್ಯಾಯರು, ಸದಸ್ಯರಾದ ಕೆ.ತಾರಾನಾಥ ಹೊಳ್ಳ, ಕೋಶಾಧಿಕಾರಿ ಶ್ರೀ ಲಕ್ಷ್ಮೀನಾರಾಯಣ ಹೊಳ್ಳ, ಸದಸ್ಯರಾದ ಜಿ. ಪ್ರಕಾಶ್ ಮಯ್ಯ, ಪ್ರಸನ್ನ ತುಂಗರು, ಪ್ರಭಾರ ವ್ಯವಸ್ಥಾಪಕರಾದ ಗಣೇಶ ಭಟ್ಟ ಉಪಸ್ಥಿತರಿದ್ದರು.

ಶ್ರೀಮತಿ ನಾಗರತ್ನ ಹೇರಳೆಯವರು ಕಾರ್ಯಕ್ರವನ್ನು ನಿರೂಪಿಸಿದರು.ನಂತರ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಕುಂಭಾಶಿ ಇವರು, “ದಮಯಂತಿ ಪುನಃ ಸ್ವಯಂವರ” ಯಕ್ಷಗಾನ ಪ್ರಸಂಗವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Related posts

ಪಡುಬಿದ್ರಿ ಕಡಲು ಕೊರೆತ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ ವಿ ಅಮೀನ್ ಮನವಿ: ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್;

Voiceoftulunadu

ಕೊಂಕಣ ರೈಲ್ವೆಗೆ ರೂ. 199.63 ಕೋಟಿ ನಿವ್ವಳ ಲಾಭ ;

Voiceoftulunadu

ತುಳುನಾಡ ಸಾಂಸ್ಕೃತಿಕ ಪತ್ರಿಕೋದ್ಯಮದ ವಿಶಿಷ್ಟ ಧ್ವನಿ ಪರಮಾನಂದ ಸಾಲ್ಯಾನ್ ಇನ್ನಿಲ್ಲ;

Voiceoftulunadu

Leave a Comment