November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಅ.11 ರಿಂದ ಸುಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವ : ಅ.12 ರಂದು ಮುಖ್ಯಮಂತ್ರಿಗಳಿಂದ ಅದ್ದೂರಿ ಚಾಲನೆ ;

ಮಂಗಳೂರು : ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾದ ಐತಿಹಾಸಿಕ ‘ಮಂಗಳೂರು ದಸರಾ-2026’ ಮಹೋತ್ಸವವು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 22ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಬಾರಿಯ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ.

ಅಕ್ಟೋಬರ್ 11ರಂದು ಮಧ್ಯಾಹ್ನ 12 ಗಂಟೆಗೆ ವೈದಿಕ ಕಾರ್ಯಕ್ರಮಗಳೊಂದಿಗೆ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಅಕ್ಟೋಬರ್ 12ರಂದು ಸಂಜೆ 6.30ಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸಚಿವರ ಸಮ್ಮುಖದಲ್ಲಿ ಮಹೋತ್ಸವಕ್ಕೆ ಅಧಿಕೃತವಾಗಿ ಅದ್ದೂರಿ ಚಾಲನೆ ನೀಡಲಿದ್ದಾರೆ.

ಉತ್ಸವದ ಅಂಗವಾಗಿ ಅಕ್ಟೋಬರ್ 12ರಿಂದ 20ರವರೆಗೆ ನಿತ್ಯ ಬೆಳಗ್ಗೆ 8.30ಕ್ಕೆ ಕ್ಷೇತ್ರದಲ್ಲಿ ಚಂಡಿಕಾಹೋಮ ನಡೆಯಲಿದ್ದು, ಅಕ್ಟೋಬರ್ 17ರಂದು ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಶೇಷ ಸಾಮೂಹಿಕ ಚಂಡಿಕಾಹೋಮ ಮತ್ತು ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಅಕ್ಟೋಬರ್ 20ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ.

ಇದೇ ವೇಳೆ ಸಂತೋಷಿ ಕಲಾಮಂಟಪದಲ್ಲಿ ನಿತ್ಯ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ‘ದಸರಾ ಕಲಾಝೇಂಕಾರ’ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಧಕ ಮಹಿಳೆಯರಿಗೆ ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ಪ್ರದಾನ ನಡೆಯಲಿದೆ.

ಇದರೊಂದಿಗೆ ರಾಜ್ಯಮಟ್ಟದ ಕವಿಗೋಷ್ಠಿ, ‘ರುದ್ರತಾಂಡವಮ್’ ನೃತ್ಯ ಸ್ಪರ್ಧೆ, ಮಕ್ಕಳ ದಸರಾ, ‘ಮುದ್ದು ಶಾರದೆ’, ದಸರಾ ಮ್ಯಾರಥಾನ್, ‘ಕಿನ್ನಿಪಿಲಿ’, ಮಹಿಳಾ ದಸರಾ, ದಾಂಡಿಯಾ ನೃತ್ಯ ಹಾಗೂ ‘ದಸರಾ ರಂಗಾಂತರಂಗ’ ಸ್ಪರ್ಧೆಗಳು ಆಯೋಜನೆಗೊಂಡಿವೆ.

ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಶ್ವವಿಖ್ಯಾತ ವೈಭವದ ಮಂಗಳೂರು ದಸರಾ ಶೋಭಾಯಾತ್ರೆಗೆ ಅಕ್ಟೋಬರ್ 21ರಂದು ಸಂಜೆ 4 ಗಂಟೆಗೆ ಅದ್ಧೂರಿ ಚಾಲನೆ ಸಿಗಲಿದೆ.

Related posts

ಉಡುಪಿ ಪತಂಜಲಿ ಯೋಗ ಸಮಿತಿ, ಶ್ರೀ ಪುತ್ತಿಗೆ ಮಠದ ಸಹಭಾಗಿತ್ವದಲ್ಲಿ ಸ್ವಚ್ಛ ಭಾರತ್‌ ಅಭಿಯಾನ : ಗೀತಾ ಮಂದಿರ, ರಾಜಾಂಗಣ ಹಾಗೂ ಪತಂಜಲಿ ಕಾರ್ಯಾಲಯದ ಪರಿಸರದಲ್ಲಿ ಅಭಿಯಾನ;

Voiceoftulunadu

ದೇಶದ ಪ್ರಮುಖ 3 ಆರ್ಥಿಕ ವ್ಯವಸ್ಥೆಗಳು – ಜನರ ಗೆಲುವು ಎಲ್ಲಿದೆ?ಸಹಕಾರ ಭಾರತಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಸಾಣೂರು ನರಸಿಂಹ ಕಾಮತ್ ರವರ ಲೇಖನ ;

Voiceoftulunadu

ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ಟೋಕನ್ ವ್ಯವಸ್ಥೆ: ಆಗಸ್ಟ್ 1ರಿಂದ ಜಾರಿ ;

Voiceoftulunadu

Leave a Comment