September 5, 2026
Uncategorizedಕೃಷಿ/ಭೌಗೋಳಿಕಜಿಲ್ಲಾ ಸುದ್ದಿರಾಜ್ಯ/ದೇಶವಿಜ್ಞಾನ/ತಂತ್ರಜ್ಞಾನಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕದಿಂದ ಶಾಶ್ವತ ಯೋಜನೆ ಲೋಕಾರ್ಪಣೆ :ಅಧ್ಯಕ್ಷತೆ ವಹಿಸಿದ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ;

ವರದಿ /ಚಿತ್ರ :ಈ ಮೀಡಿಯಾ

ಕಾಪು: ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ RPP ಭರತ್ ಎನ್. ಆಚಾರ್ಯ ಅವರು ಭಾನುವಾರ ಕಾಪು ಲೈಟ್ ಮುಂಭಾಗ ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕ ಮತ್ತು ಅಕ್ಷರ ಪ್ರಿಂಟ್ಸ್ ಕಾಪು ಇವರ ಪ್ರಾಯೋಜಕತ್ವದಲ್ಲಿ ನೀಡಲಾದ “ಐ ಲವ್ ಕಾಪು” ಎಲ್‌ಈಡಿ ಫಲಕವನ್ನು ಲೋಕಾರ್ಪಣೆ ಗೈದು ಯೋಜನೆಯನ್ನು ಕಾಪು ಬೀಚ್ ನಿರ್ವಾಹಕರಿಗೆ ಹಸ್ತಾಂತರಿಸಿದರು.

ಭರತ್ ಎನ್ ಆಚಾರ್ಯ ಘಟಕವನ್ನು ಉದ್ದೇಶಿಸಿ ಮಾತನಾಡಿ, 29 ವರ್ಷಗಳನ್ನು ಪೂರೈಸಿರುವ ಕಾಪು ಘಟಕ, ಜೇಸಿಐ ಗೆ ಬಹಳಷ್ಟು ಕೊಡುಗೆಯನ್ನು ನೀಡಿದೆ. ಪ್ರತೀಸಾರ್ವಜನಿಕರಿಗೆ ವರ್ಷ ಶಾಶ್ವತ ಯೋಜನೆಯನ್ನು ನೀಡುತ್ತಿರುವ ಈ ಘಟಕ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಹೇಳಿದರು.

ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಕಾಪು ಘಟಕ ಬಹಳಷ್ಟು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಇದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ವಲಯ 15ರ ನಂದಿನಿ ಪ್ರಾಂತ್ಯದ ಉಪಾಧ್ಯಕ್ಷ JFD ಅರುಣ್ ಮಂಜ, ಆಡಳಿತ ವಿಭಾಗದ ನಿರ್ದೇಶಕ JCI Sen ಸುಹಾಸ್ ಮರಿಕೆ, ಶಾಶ್ವತ ಯೋಜನೆಯ ವಲಯ ಸಂಯೋಜಕ ಸುನಿಲ್ ಕುಮಾರ್, ವಲಯ ಉಪಾಧ್ಯಕ್ಷರುಗಳು,ವಲಯಧಿಕಾರಿಗಳು, ಕಾಪು ಪುರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ ಪಾದೂರು, అనిలో ಕುಮಾರ್ ಕಾಪು, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಕರ ಸಾಲ್ಯಾನ್, ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಸ್ವಾಗತಿಸಿದರು. ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದರು. ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ ವಂದಿಸಿದರು.

Related posts

ಆಸಕ್ತಿ ಮತ್ತು ವೃತ್ತಿಯ ನಡುವೆ ಸಮತೋಲನ ಅಗತ್ಯ: ಯುವಜನತೆಗೆ ನಮೃತಾ ಮೋಹನ್ ಕಿವಿಮಾತು:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಹಮ್ಮಿಕೊಂಡ ಕಾರ್ಯಕ್ರಮ;

Voiceoftulunadu

ಅನ್ನಬ್ರಹ್ಮ ಸೇವಾ ಸಮಿತಿ ಉಡುಪಿಯಿಂದ ಬಡ ಹೆಣ್ಣುಮಗಳ ಮದುವೆಗೆ ಸೀರೆಗಳ ನೆರವು ;

Voiceoftulunadu

ಫುಟ್ಬಾಲ್ ಫಿವರ್‌ಗೆ ಪಿದಾನಾದ ಶಿವಾ-ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ವರ್ಲ್ಡ್ ಕಪ್ ಹವಾ ಆನಂದಿಸಿ ಫಿಫಾಕ್ಕೆ ಸಾಕ್ಷಿಯಾದ ಶಿವರಾಮ ಭಂಡಾರಿ;

Voiceoftulunadu

Leave a Comment