September 5, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಹಿಂದೂಗಳ ಧ್ವನಿ ಅಡಗಿಸುವ ಪ್ರಯತ್ನ ಖಂಡನೀಯ : ರಮಿತಾ ಸೂರ್ಯವಂಶಿ : ಪಂಜಿನ ಮೆರವಣಿಗೆಗೆ ಪುನೀತ್ ಅತ್ತಾವರ, ನರಸಿಂಹ ಮಾಣಿಯವರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ ;

ವರದಿ ಚಿತ್ರ ಈ ಮೀಡಿಯಾ

ಉಡುಪಿ: ಹಿಂದೂ ಸಂಘಟನೆಯ ವತಿಯಿಂದ ನಡೆಯುವ ಅಖಂಡ ಭಾರತ ಪಂಜಿನ ಮೆರವಣಿಗೆ ಕಾರ್ಯಕ್ರಮಕ್ಕೆ ಪ್ರಮುಖ ಭಾಷಣಕಾರರಾಗಿ ಬರಬೇಕಾಗಿದ್ದ ಬಜರಂಗದಳದ ಮುಖಂಡ ಪುನೀತ್ ಅತ್ತಾವರ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡ ನರಸಿಂಹ ಮಾಣಿ ಅವರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿರುವ ಜಿಲ್ಲಾಡಳಿತದ ನಡೆ ತೀವ್ರ ಖಂಡನೀಯ ಎಂದು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ರಮಿತಾ ಸೂರ್ಯವಂಶಿ ಆಕ್ರೋಶಿತರಾಗಿ ಹೇಳಿದ್ದಾರೆ.

ರಾಜ್ಯ ಸರ್ಕಾರವು ಜಿಲ್ಲಾಡಳಿತವನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು, ತನ್ನ ಹಿಂದೂ ವಿರೋಧಿ ನೀತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತಿದೆ. ಸರ್ಕಾರವು ಪದೇ ಪದೇ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದು, ಇಂತಹ ದುಷ್ಟ ಯತ್ನಗಳನ್ನು ಕೈಬಿಟ್ಟು, ಈ ತಕ್ಷಣವೇ ಪ್ರವೇಶ ನಿರ್ಬಂಧದ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದೆ ಹಿಂದೂ ಬಲವನ್ನು ನೋಡಬೇಕಾದಿತು.

ಯಾರನ್ನೋ ಮೆಚ್ಚಿಸುವ ಬರದಲ್ಲಿ ತಮ್ಮ ಹಳ್ಳವನ್ನು ತಾವೇ ತೋಡಿಕೊಳ್ಳುತ್ತಿದ್ದು, ಮುಂದೆ ಪಶ್ಚತ್ತಾಪ ಪಡಬೇಕಾದಿತು. ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಬೇಡಿ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿಯವರು ಪತ್ರಿಕಾ ಪ್ರಕಟಣೆಯಿ ತಿಳಿಸಿದ್ದಾರೆ.

Related posts

ಯುಎಇಯಲ್ಲಿ 30ನೇ ವರ್ಷಕ್ಕೆ ಕಾಲಿಟ್ಟ ತುಂಬೆ ಗ್ರೂಪ್;

Voiceoftulunadu

ಮಣಿಪಾಲ ಕೆಎಂಸಿಯಲ್ಲಿ ಪ್ರಣವ್ ಹೆಗ್ಡೆ ಕುಟುಂಬದಿಂದ ಅಂಗಾಂಗ ದಾನ, ಹಲವರಿಗೆ ಜೀವದಾನ ಪ್ರಣವ್‌ ಹೆಗ್ಡೆ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ;

Voiceoftulunadu

ದೇಶದ ಪ್ರಮುಖ 3 ಆರ್ಥಿಕ ವ್ಯವಸ್ಥೆಗಳು – ಜನರ ಗೆಲುವು ಎಲ್ಲಿದೆ?ಸಹಕಾರ ಭಾರತಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಸಾಣೂರು ನರಸಿಂಹ ಕಾಮತ್ ರವರ ಲೇಖನ ;

Voiceoftulunadu

Leave a Comment