28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟವಾಳ ಬಂಟರ ಸಂಘದ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವಕ್ಕೆ ಚಾಲನೆ:

ಬಂಟ್ವಾಳ :ಬಂಟರ ಸಂಘ ಬಂಟವಾಳ ತಾಲೂಕು(ರಿ) ಇದರ ನೇತೃತ್ವದಲ್ಲಿ ಮಹಿಳಾ ವಿಭಾಗ, ಯುವವಿಭಾಗ ಹಾಗೂ ವಲಯ ಬಂಟರ ಸಂಘಗಳ ಸಹಯೋಗದೊಂದಿಗೆ ನಡೆಯುವ ಸಂಘದ ವಾರ್ಷಿಕೋತ್ಸವದ ಅಂಗವಾಗಿ  ಸಾಂಸ್ಕೃತಿಕ ವೈಭವಕ್ಕೆ ವಲವೂರು ಬಂಟವಾಳದ ಬಂಟರ ಭವನದಲ್ಲಿ ಚಾಲನೆ ದೊರೆಯಿತು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ನಿರಂಜನ್ ಸೇಮಿತ ಕುಂದಬೆಟ್ಟು ಉದ್ಘಾಟಿಸಿ ಮಾತನಾಡಿ,ನನಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲು ಅವಕಾಶ ನೀಡಿದ್ದು ಅದು ಬಂಟ್ವಾಳದ ರೈತರಿಗೆ ಕೊಟ್ಟ ಗೌರವ, ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಮೂಡಿಬರಲಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟವಾಳ ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ ವಹಿಸಿದರು,

ವೇದಿಕೆಯಲ್ಲಿ ಬಂಟವಾಳ ಬಂಟರ ಸಂಘದ ಉಪಾಧ್ಯಕ್ಷ ಐತಪ್ಪ ಆಳ್ವ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ,ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸಜಿಪ,ಕಲೆ ಸಾಂಸ್ಕೃತಿಕ ವಿಭಾಗದ ಸಂಚಾಲಕ ಗಣೇಶ್ ಶೆಟ್ಟಿ ಗೋಳ್ತಮಜಲು, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ ರೈ ಕಲ್ಲಡ್ಕ, ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರುಗುತ್ತು,  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು ಶ್ರಾವ್ಯ ಪ್ರಾರ್ಥಿಸಿ, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀ ವಿದ್ಯಾ ಎ ರೈ ಬಿ ಸಿ ರೋಡ್ ಧನ್ಯವಾದವಿತ್ತು, ಬಾಲಕೃಷ್ಣ ಶೆಟ್ಟಿ ಕೊಡಾಜೆ ನಿರೂಪಿಸಿದರು

Related posts

ಬ್ಯಾಂಕ್‌ ಆಫ್‌ ಬರೋಡಾದಿಂದ ಡಿಜಿಟಲ್, ರಿಟೇಲ್ ಮತ್ತು ಎಂಎಸ್‌ಎಂಇ ಉಪಕ್ರಮಗಳ ಸಮಗ್ರ ಶ್ರೇಣಿಯೊಂದಿಗೆ 119ನೇ ಸಂಸ್ಥಾಪನಾ ದಿನಾಚರಣೆ;

Voiceoftulunadu

ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಟಿಎಂಸಿ ಕಚೇರಿಯಲ್ಲಿ ಶವವಾಗಿ ಪತ್ತೆ ;

Voiceoftulunadu

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಧಾರ್ಮಿಕ ಕ್ಷೇತ್ರ ಸಂದರ್ಶನಉಳಿ ಗೋಶಾಲೆಗೆ ಸಮಿತಿಯ ವತಿಯಿಂದ ಗೋಗ್ರಾಸ ಕಾಣಿಕೆ ಸಮರ್ಪಣೆ;

Voiceoftulunadu

Leave a Comment