ವರದಿ/ ಚಿತ್ರ: ರೋನ್ಸ್ ಬಂಟ್ವಾಳ
ಮುಂಬಯಿ : ಮುಂಬಯಿ ಸಾಹಿತ್ಯ, ಸಾಂಸ್ಕೃತಿಕ, ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾ ಗಿದ್ದು ಮುಂಬಯಿಯ ಕನ್ನಡ ಸಾಹಿತ್ಯ ಲೋಕ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾಗಲೇ ಇಹಯಾತ್ರೆಯನ್ನು ಮುಗಿಸಿದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಅವರ ಸ್ಮರಣಾರ್ಥ ಬೃಹನ್ಮುಂಬಯಿ ಇದರ ಉಪನಗರ ಡೊಂಬಿವಿಲಿ ಇಲ್ಲಿನ ಜಗಜ್ಯೋತಿ ಕಲಾವೃಂದ ನಾಡಿನ ಕನ್ನಡದ ಸಮಸ್ತ ಮಹಿಳೆಯರಿಗಾಗಿ ಕಳೆದ ೨೮ ವರ್ಷಗಳಿಂದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಮತ್ತು ಕವಿತಾ ಪ್ರಶಸ್ತಿ-೨೦೨೬ ಸ್ಪರ್ಧೆ ಆಯೋಜಿಸುತ್ತಿದ್ದು, ವರ್ಷಂಪ್ರತಿಯಂತೆ ಈ ಬಾರಿಯೂ ಅಖಿಲ ಭಾರತ ಮಟ್ಟದ ಸ್ಪರ್ಧೆಯನ್ನು ಏರ್ಪಾಡಿಸಿದೆ.
ಕಥೆ ಹಾಗೂ ಕವಿತಾ ಪ್ರಶಸ್ತಿಗಳ ಎರಡು ವಿಭಾಗಗಳಲ್ಲೂ ಪ್ರತ್ಯೇಕವಾಗಿ ರೂಪಾಯಿ ೧೦,೦೦೦/- ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರಗಳು ಒಳಗೊಂಡಿರುತ್ತದೆ. ಸ್ಪರ್ಧೆ ರಾಷ್ಟ್ರದಾದ್ಯಂತದ ಸಮಸ್ತ ಕನ್ನಡದ ಮಹಿಳೆಯರಿಗಾಗಿ ಮುಕ್ತವಾಗಿದ್ದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಸಂಸ್ಥೆಯ ನಿಯಮಗಳಂತೆ ಭಾಗವಹಿಸಲು ಕೋರಲಾಗಿದೆ.ಪ್ರಕಟಣೆಗೆ ಸಿದ್ದವಾದ ಸ್ವರಚಿತ ಕಥಾ ಯಾ ಕವಿತಾ ಸಂಗ್ರಹವಾಗಿರಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವವರು ಕಥಾ ಪ್ರಶಸ್ತಿಗೆ ಒಂದು ಕಥಾ ಸಂಕಲನ ಅಥವಾ ಕವಿತಾ ಪ್ರಶಸ್ತಿಗೆ ಒಂದು ಕವನ ಸಂಕಲನವನ್ನು ಕಳುಹಿಸಬೇಕು. ಒಬ್ಬರೇ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕಥೆ ಯಾ ಕವಿತೆಗಳನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು ಅಥವಾ ಟೈಪ್ ಮಾಡಿರಬೇಕು. ಕಾರ್ಬನ್ ಪ್ರತಿ, ಝರಾಕ್ಸ್ ಹಾಗೂ ಪ್ರಕಟಗೊಂಡ ಹಾಳೆಯ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಕಥಾ ಪ್ರಶಸ್ತಿಗೆ ಹಸ್ತ ಪ್ರತಿಯು ಫುಲ್‌ಸ್ಕೆಪ್ ಹಾಳೆಯಲ್ಲಿ ೧೦೦ ಪುಟಗಳಿಂದ ೧೩೦ ಪುಟಗಳ ಮಿತಿಯಲ್ಲಿರಬೇಕು. ಕವನ ಸಂಕಲನದಲ್ಲಿ ಕಡಿಮೆಯೆಂದರೂ ೩೦ ಕವಿತೆಗಳಿರಬೇಕು. ಖಂಡಕಾವ್ಯ ಅಥವಾ ಚುಟುಕು ಯಾ ಹನಿಗವನ ಅಥವಾ ಕವಿತೆಗಳಾಗಿರಬಾರದು. ಹಸ್ತ ಪ್ರತಿಯಲ್ಲಿ ಹೆಸರು ನಮೂದಿಸಿರಬಾರದು. ಹೆಸರು, ವಿಳಾಸ, ಪರಿಚಯ, ದೂರವಾಣಿ ಸಂಖ್ಯೆ, ಇತ್ತೀಚಿನ ಭಾವ ಚಿತ್ರದೊಂದಿಗೆ ಹಸ್ತಪ್ರತಿಯ ಜೊತೆಗೆ ಪ್ರತ್ಯೇಕವಾಗಿ ಕಳುಹಿಸಬೇಕು.
ಪ್ರವೇಶ ಶುಲ್ಕವಿರುವುದಿಲ್ಲ.ಸ್ಪರ್ಧೆಗೆ ಬಂದ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಪ್ರಶಸ್ತಿ ಪಡೆದ ಪ್ರತಿಗಳನ್ನು ಮುದ್ರಿಸುವಾಗ ರಕ್ಷಾ ಪುಟದ ಮೇಲ್ಗಡೆ ಹಾಗೂ ಪ್ರಥಮ ಒಳಪುಟದಲ್ಲಿ ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಯಾ ಕವಿತಾ ಪ್ರಶಸ್ತಿ ವಿಜೇತ ಕೃತಿ ೨೦೨೬ ಎಂದು ಮುದ್ರಿಸತಕ್ಕದ್ದು. ಒಮ್ಮೆ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದವರು ಅದೇ ವಿಭಾಗದ ಸ್ಪರ್ಧೆಗೆ ಮತ್ತೆ ಭಾಗವಹಿಸುವಂತಿಲ್ಲ. ಸ್ಪರ್ಧೆಯ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ವೃಂದವು ಕಾಯ್ದಿರಿಸಿಕೊಂಡಿದೆ. ಅನಾವಶ್ಯಕ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ ಹಾಗೂ ನಿರ್ಣಾಯಕರ ತೀರ್ಮಾನವೇ ಅಂತಿಮ ಆಗಿದ್ದು, ಕೃತಿಗಳನ್ನು ದಿನಾಂಕ ೩೦.೦೯.೨೦೨೬ ಒಳಗಾಗಿ ಕಳುಹಿಸಿ ಕೊಡುವಂತೆ ಕೋರಲಾಗಿದೆ.ತಿಳಿಸಿದ ವಿಳಾಸವನ್ನು ಇಂಗ್ಲೀಷನಲ್ಲೇ ಸ್ಪುಟವಾಗಿ ಬರೆದು ಕಳುಹಿಸತಕ್ಕದ್ದು.
ಸ್ಪರ್ಧೆಯ ನಿಯಮಗಳು :
1.ಸ್ಪರ್ಧೆ ರಾಷ್ಟ್ರದಾದ್ಯಂತದ ಸಮಸ್ತ ಕನ್ನಡದ ಮಹಿಳೆಯರಿಗಾಗಿ, ಪ್ರಕಟಣೆಗೆ ಸಿದ್ದವಾದ ಸ್ವರಚಿತ ಕಥಾ/ಕವಿತಾ ಸಂಗ್ರಹವಾಗಿರಬೇಕು.
2.ಸ್ಪರ್ಧೆಗಳಲ್ಲಿ ಭಾಗವಹಿಸುವವರು ಕಥಾ ಪ್ರಶಸ್ತಿಗೆ ಒಂದು ಕಥಾ ಸಂಕಲನ/ ಅಥವಾ ಕವಿತಾ ಪ್ರಶಸ್ತಿಗೆ ಒಂದು ಕವನ ಸಂಕಲನವನ್ನು ಕಳುಹಿಸಬೇಕು. ಒಬ್ಬರೇ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
3.ಕಥೆ/ ಕವಿತೆಗಳನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು / ಟೈಪ್ ಮಾಡಿರಬೇಕು. ಕಾರ್ಬನ್ ಪ್ರತಿ, ಝರಾಕ್ಸ್ ಹಾಗೂ ಪ್ರಕಟಗೊಂಡ ಹಾಳೆಯ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
4.ಕಥಾ ಪ್ರಶಸ್ತಿಗೆ ಹಸ್ತ ಪ್ರತಿಯು ಫುಲ್‌ಸ್ಕೆಪ್ ಹಾಳೆಯಲ್ಲಿ 100 ಪುಟಗಳಿಂದ 130 ಪುಟಗಳ ಮಿತಿಯಲ್ಲಿರಬೇಕು.
5.ಕವನ ಸಂಕಲನದಲ್ಲಿ ಕಡಿಮೆಯೆಂದರೂ 30 ಕವಿತೆಗಳಿರಬೇಕು. ಖಂಡಕಾವ್ಯ ಅಥವಾ ಚುಟುಕು/ ಹನಿಗವನ/ಕವಿತೆಗಳಾಗಿರಬಾರದು.
3. ಹಸ್ತ ಪ್ರತಿಯಲ್ಲಿ ಹೆಸರು ನಮೂದಿಸಿರಬಾರದು. ಹೆಸರು, ವಿಳಾಸ, ಪರಿಚಯ, ದೂರವಾಣಿ ಸಂಖ್ಯೆ, ಇತ್ತೀಚಿನ ಭಾವ ಚಿತ್ರದೊಂದಿಗೆ ಹಸ್ತಪ್ರತಿಯ ಜೊತೆಗೆ ಪ್ರತ್ಯೇಕವಾಗಿ ಕಳುಹಿಸಬೇಕು.
7.ಪ್ರವೇಶ ಶುಲ್ಕವಿಲ್ಲ.ε. ಸ್ಪರ್ಧೆಗೆ ಬಂದ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ.
8. ಪ್ರಶಸ್ತಿ ಪಡೆದ ಪ್ರತಿಗಳನ್ನು ಮುದ್ರಿಸುವಾಗ ರಕ್ಷಾಪುಟದ ಮೇಲ್ಗಡೆ ಹಾಗೂ ಪ್ರಥಮ ಒಳಪುಟದಲ್ಲಿ ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ/ಕವಿತಾ ಪ್ರಶಸ್ತಿ ವಿಜೇತ ಕೃತಿ 2026 ಎಂದು ಮುದ್ರಿಸತಕ್ಕದ್ದು.
9. ಪ್ರಶಸ್ತಿ ಪ್ರದಾನ ಸಮಾರಂಭ ವೃಂದದ ವಾರ್ಷಿಕೋತ್ಸವದಂದು ನೆರವೇರಲಿರುವುದು ಪ್ರಶಸ್ತಿ ವಿಜೇತರನ್ನು ದೂರವಾಣಿ/ ಪತ್ರದ ಮೂಲಕ ಸಂಪರ್ಕಿಸಲಾಗುವುದು.
10. ಒಮ್ಮೆ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದವರು ಅದೇ ವಿಭಾಗದ ಸ್ಪರ್ಧೆಗೆ ಮತ್ತೆ ಭಾಗವಹಿಸುವಂತಿಲ್ಲ.
11. ಸ್ಪರ್ಧೆಯ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ವೃಂದವು ಕಾಯ್ದಿರಿಸಿಕೊಂಡಿದೆ.
12. ಅನಾವಶ್ಯಕ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ : ನಿರ್ಣಾಯಕರ ತೀರ್ಮಾನವೇ ಅಂತಿಮ.
ಕೃತಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 30.09.2026೧೬. ಕೃತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು (ವಿಳಾಸವನ್ನು ಇಂಗ್ಲೀಷನಲ್ಲಿ ಸ್ಪುಟವಾಗಿ ಬರೆದಿರಬೇಕುSUKUMAR
N. SHETTY,C/o.S. N. Shetty Associates, Ground Floor, Room No.5, Neelkanth Sagar CHS, Mahatma Phule Road, Opp. Jadhavwadi, Dombivli West -421202 | Email: mail.sukumar@yahoo.inដ ឯដថ : Santosh P. Shetty: 9892110826/9869824709 Vasant Suvarna: 9892833623 Email: santoshpshetty@gmail.com
