27 C
ಮಂಗಳೂರು
July 6, 2026
ಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಿನಿಮಾ

ಬೆಂಗಳೂರು ಅಲೆಯನ್ಸ್ ವಿಶ್ವವಿದ್ಯಾಲಯದಲ್ಲಿ ತುಳು ಯಕ್ಷಗಾನ ಕಾರ್ಯಾಗಾರ ಮತ್ತು ಪ್ರದರ್ಶನ;ಸಂಶೋಧನಾ ಪ್ರಬಂಧ ಮಂಡನೆಗೆ ಅವಕಾಶ:

ಬೆಂಗಳೂರು, ಜೂನ್ 2026: ತುಳುನಾಡಿನ ಸಾಂಪ್ರದಾಯಿಕ ಜನಪದ ನಲಿಕೆ, ಆಚರಣೆ, ಜಾಲಾಟ ಹಾಗೂ ಯಕ್ಷಗಾನದವರೆಗೆ ಬೆಳೆದು ಬಂದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಕಲಾಸಕ್ತರಿಗೆ ಪರಿಚಯಿಸುವ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್ ಮತ್ತು ತುಳುವೆರೆ ಚಾವಡಿ ತೆಂಕೈ, ಬೊಮ್ಮಸಂದ್ರ, ಬೆಂಗಳೂರು ಸಂಸ್ಥೆಗಳು ಜಂಟಿಯಾಗಿ, ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್, ಅಲೆಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರು ಸಹಯೋಗದೊಂದಿಗೆ “ತುಳುವೆರೆ ಜಾಲಾಟರ್ಡ್ ಯಕ್ಷಗಾನೊ ಮುಟ್ಟ – ಯಕ್ಷಗಾನ ಕಳರಿ ಬೊಕ್ಕ ತೂಪರಿಕೆ” (ತುಳು ಯಕ್ಷಗಾನ ಕಾರ್ಯಾಗಾರ ಮತ್ತು ಪ್ರದರ್ಶನ) ಕಾರ್ಯಕ್ರಮವನ್ನು ಆಯೋಜಿಸಿವೆ.

ಈ ಕಾರ್ಯಕ್ರಮವು 2026ರ ಜುಲೈ 11ರಂದು ಬೆಳಿಗ್ಗೆ 11.00 ಗಂಟೆಗೆ ಅಲೆಯನ್ಸ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ತುಳು ಯಕ್ಷಗಾನದ ಇತಿಹಾಸ, ವಿಕಾಸ ಮತ್ತು ಸಾಂಸ್ಕೃತಿಕ ಮಹತ್ವದ ಕುರಿತು ಉಪನ್ಯಾಸ ನಡೆಯಲಿದ್ದು, ಯಕ್ಷಗಾನದ ಸಂಗೀತ, ನೃತ್ಯ, ಅಭಿನಯ, ಸಂಭಾಷಣೆ, ವೇಷಭೂಷಣ ಹಾಗೂ ಮುಖವರ್ಣಿಕೆ ಕುರಿತ ಕಾರ್ಯಾಗಾರ ಆಯೋಜಿಸಲಾಗುತ್ತದೆ. ಇದರೊಂದಿಗೆ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನವೂ ನಡೆಯಲಿದೆ.ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಪುರುಷೋತ್ತಮ ಬಿಳಿಮಲೆ (ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ), ಶಿವರಾಮ ಶೆಟ್ಟಿ ತಲ್ಲೂರು (ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ), ಡಾ. ಚಿನ್ನಪ್ಪ ಗೌಡ (ವಿಶ್ರಾಂತ ಕುಲಪತಿಗಳು, ಜಾನಪದ ವಿಶ್ವವಿದ್ಯಾನಿಲಯ) ಹಾಗೂ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಭಾಗವಹಿಸಲಿದ್ದಾರೆ.

ವಿಶೇಷವಾಗಿ, ತುಳು ಜಾಲಾಟ, ತುಳು ಯಕ್ಷಗಾನ, ತುಳು ಜನಪದ ಪರಂಪರೆ ಮತ್ತು ಯಕ್ಷಗಾನ, ತುಳು ಪಾಡ್ದನ, ಸಂಧಿ ಮತ್ತು ಓರಲ್‌ನಿಂದ ಭಾಗವತಿಕೆಗೆ, ತುಳು ಪೌರಾಣಿಕ ಪ್ರಸಂಗಗಳು, ತುಳು ಸಾಮಾಜಿಕ ಪ್ರಸಂಗಗಳು, ತುಳು ಜನಪದೀಯ ಪ್ರಸಂಗಗಳು, ತುಳು ಸಂಸ್ಕೃತಿ, ಭಾರತೀಯ ಜ್ಞಾನ ಪರಂಪರೆಗೆ ಯಕ್ಷಗಾನದ ಕೊಡುಗೆ ಹಾಗೂ ಸಂಬಂಧಿತ ವಿಷಯಗಳ ಕುರಿತು ಸಂಶೋಧನಾ ಪ್ರಬಂಧ ಮಂಡನೆಗೆ ಅವಕಾಶ ಕಲ್ಪಿಸಲಾಗಿದೆ.ಆಸಕ್ತ ಸಂಶೋಧಕರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ವಿದ್ವಾಂಸರು ತಮ್ಮ ಪ್ರಬಂಧಗಳನ್ನು 2026ರ ಜೂನ್ 30ರೊಳಗೆ ಸಲ್ಲಿಸಬಹುದಾಗಿದೆ. ಪ್ರಬಂಧಗಳನ್ನು tuluworld@gmail.com ವಿಳಾಸಕ್ಕೆ ಕಳುಹಿಸಬೇಕು.ಆಯ್ಕೆಯಾದ ಪ್ರಬಂಧಗಳಿಗೆ ಕಾರ್ಯಕ್ರಮದಲ್ಲಿ ಮಂಡನೆಗೆ ಅವಕಾಶ ನೀಡಲಾಗುವುದು. ಪ್ರತಿ ಸಂಶೋಧಕರಿಗೆ ತಮ್ಮ ಪ್ರಬಂಧವನ್ನು ಮಂಡಿಸಲು ಮೂರರಿಂದ ಐದು ನಿಮಿಷಗಳ ಕಾಲಾವಕಾಶ ನೀಡಲಾಗುವುದು.

ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸುವ ಎಲ್ಲ ಸಂಶೋಧಕರು ಮತ್ತು ವಿದ್ವಾಂಸರನ್ನು ಅಭಿನಂದಿಸಿ ಗೌರವಿಸಲಾಗುವುದು.ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು, ಕಲಾವಿದರು ಹಾಗೂ ಸಾಂಸ್ಕೃತಿಕ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ:📞 9061086101 / 8075350491📧 tuluworld@gmail.com

Related posts

ಗ್ರಾಹಕರಿಗೆ ನೀಡುವ ಪ್ರಾಮಾಣಿಕ ಸೇವೆಯಿಂದ ಆತ್ಮತೃಪ್ತಿ ಲಭಿಸಲಿದೆ: ಪ್ರಭಾಕರ ಪ್ರಭು.

Voiceoftulunadu

ನಂದಿಕೂರು : 73 ಕೆ.ಜಿ ಗೂ ಅಧಿಕ ತೂಕದ ಗಾಂಜಾ ನಾಶಉಡುಪಿ ಜಿಲ್ಲಾ ಎಸ್ಪಿ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಂ ಶಂಕರ್ ನೇತೃತ್ವ;

Voiceoftulunadu

ಶ್ರೀವಿದ್ಯಾ ತಂತ್ರ ಸಾರ; ‘ಮೈಂಡ್ ಮೆಕ್ಯಾನಿಸಂ’ ಪ್ರಸ್ತುತ ಪಡಿಸುವ, ಶ್ರೀ ವಿದ್ಯಾ ತಂತ್ರ ಸಾರ | ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಲಲಿತಾ ತ್ರಿಪುರ ಸುಂದರಿ ಸಹಸ್ರನಾಮ ಪ್ರಯೋಗ :

voiceoftulunadu

Leave a Comment