September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಸಿನಿಮಾಸ್ಥಳೀಯ/ಪ್ರಾದೇಶಿಕ ಸುದ್ದಿ

ವೇಳ್ ಘಡಿ’ ಕೊಂಕಣಿ ಸಿನಿಮಾಕ್ಕೆ ಮುಹೂರ್ತ* ಸಿನಿಮಾ ಮನರಂಜನೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡಲಿ : ಫಾ. ಓಸ್ವಾಲ್ಡ್ ಮೊಂತೇರೋ;

ಜನರನ್ನು ಬಹುಬೇಗ ಆಕರ್ಷಿಸುವ ಸಿನಿಮಾವು ಮನರಂಜನೆ ಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವಂತಾಗಬೇಕು, ಕೊಂಕಣಿ ಭಾಷಾ ಸಿನಿಮಾಕ್ಕೆ ಉತ್ತಮ ಭವಿಷ್ಯ ವಿದೆ. ತಂತ್ರಜ್ಞರು, ಕಲಾವಿದರು ಜೊತೆ ಯಾಗಿ ಉತ್ತಮ ಸಿನಿಮಾವನ್ನು ನಿರ್ಮಿಸಿದಲ್ಲಿ ಪ್ರೇಕ್ಷಕರು ಸಹ ಅವರಿಗೆ ಮುಕ್ತ ಬೆಂಬಲ ನೀಡುತ್ತಾರೆ.

“ವೇಳ್‌ ಘಡಿ” ಕೊಂಕಣಿ ಸಿನಿಮಾವು ಉತ್ತಮವಾಗಿ ಮೂಡಿಬರಲಿ ಎಂದು ದಾಮಸ್‌ ಕಟ್ಟೆಯ ಕಿರೆಂ ಚರ್ಚ್‌ ಧರ್ಮಗುರು ಫಾ. ಒಸ್ವಾಲ್ಡ್ ಮೊಂತೇರೋ ಹೇಳಿದರು.ಅವರು ಕಿನ್ನಿಗೋಳಿ ಬಳಿಯ ದಾಮಸ್‌ ಕಟ್ಟೆಯ ಕಿರೆಂ ಚರ್ಚ್‌ನ ಶಾಲೋಮ್ ಹಾಲ್‌ನ ಕಿರು ಸಭಾಂಗಣದಲ್ಲಿ ರೋಶನ್ ನೆಲ್ಲಿಗುಡ್ಡೆ ಅವರ ಸೋನುಲವಿ ಸಿನೆ ಕ್ರಿಯೇಶನ್ಸ್‌ನ ಬ್ಯಾನರ್ ಅಡಿಯಲ್ಲಿ, ಜಾನ್ ವಿಲ್ಸನ್ ಲೋಬೋ ಅವರ ನಿರ್ಮಾಣದ ನೋರ್ಬಾರ್ಟ್ ಜಾನ್ ನಿರ್ದೇಶನದ “ವೇಳ್‌ಘಡಿ” ಕೊಂಕಣಿ ಸಿನಿಮಾದ ಮುಹೂರ್ತವನ್ನು ನೆರವೇರಿಸಿ ಆಶೀರ್ವಚನ ನೀಡಿದರು.

ಚಿತ್ರ ನಿರ್ಮಾಪಕ ಜಾನ್ ವಿಲ್ಸನ್ ಲೋಬೋ ಮಾತನಾಡಿ, ಕೊಂಕಣಿ ಸಿನಿಮಾವೊಂದನ್ನು ನಿರ್ಮಿಸಬೇಕುಎಂಬ ಕನಸು ಈಗ ಈಡೇರುತ್ತಿದೆ. ಒಂದು ಉತ್ತಮ ಕಥೆಯುಳ್ಳ, ಸಮಾ ಜದ ಯುವ ಪೀಳಿಗೆಗೆ ಜಾಗೃತಿ ಸಂದೇಶವನ್ನು ನೀಡುವ ಸಿನಿಮಾವಾಗಿ ನಿರ್ಮಾಣವಾಗಲಿದೆ, ಎಲ್ಲರ ಪ್ರೋತ್ಸಾಹ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಮುಂಬೈ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮಾತ ನಾಡಿ, ಸಮಾಜವು ಬದಲಾವಣೆಯಾಗಲು ಸಿನಿಮಾ ಕ್ಷೇತ್ರ ಬಹಳಷ್ಟು ಕೊಡುಗೆಯನ್ನು ನೀಡಿದೆ. ಪ್ರಾದೇಶಿಕ ಭಾಷೆಯಾದ ಕೊಂಕಣಿಯ ಪ್ರೇಕ್ಷಕರು ವಿಶ್ವ ಮಟ್ಟದಲ್ಲಿದ್ದು, ಎಲ್ಲರೂ ಈ ಸಿನಿಮಾವನ್ನು ನೋಡುವಂತಹವಾತಾವರಣ ನಿರ್ಮಾಣವಾಗಲಿ ಎಂದರು.

ಸೋನುಲವಿ ಸಿನೆ ಕ್ರಿಯೇಶನ್ಸ್‌ ನ ಪ್ರವರ್ತಕ ರೋಶನ್ ನೆಲ್ಲಿಗುಡ್ಡೆ ಸಿನಿಮಾ ಹಾಗೂ ಅದರ ತಂತ್ರಜ್ಞನರ, ಕಲಾವಿದರ ಪರಿಚಯಿಸಿ, ಸ್ವಾಗತಿ ಸಿದರು. ಮಂಗಳೂರಿನ ಹಿರಿಯ ಕಲಾವಿದ ಡೊಲ್ಲಂ, ಎಂಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ನ್ಯಾಯವಾದಿ ಜೆ.ಬಿ. ಮೋಂತೆರೋ, ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಹನ್ ಡಿ.ಕೋಸ್ತ ಶುಭ ಹಾರೈಸಿದರು.

ಸಿನಿಮಾ ನಿರ್ದೇಶಕ ನೋರ್ಬಾ ರ್ಟ್ ಜಾನ್, ಪ್ರೊಡಕ್ಷನ್ ಎಂಜಿನಿಯರ್ ಆಲ್ವಿನ್ ಸಿಕ್ವೇರಾ, ಡಿಒಪಿ ಫೆಸ್ ವಿತ್ ಮಂಗಳೂರI, ಸಹಾಯಕ ರಾಯನ್, ಸಿನಿಮಾ ಪಿ ಆರ್ ಒ ಸುನಿಲ್ ನೆಲ್ಲಿಗುಡ್ಡೆ, ಕಲಾವಿದರು ಮತ್ತಿತರರು ಉಪಸ್ಥಿತರಿದ್ದರು.“ಸೆನೆಟ್ ಡಿಕೋನ್ನ ಕಾರ್ಯಕ್ರಮ ನಿರೂಪಿಸಿದರು.

ನಿರ್ಮಾಣದಲ್ಲಿ ಜಾನ್ ವಿಲ್ಸನ್ ಲೋಬೋ ಸಹಕಾರ ನೀಡಲಿದ್ದಾರೆ. ಸಿನಿಮಾ ಕ್ಷೇತ್ರದ ತಂತ್ರಜ್ಞವಾಗಿ ಸಾಕಷ್ಟು ಅನುಭವ ಇರುವ ನೋರ್ಬಾರ್ಟ್ ಜಾನ್ ನಿರ್ದೇಶನದ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ.

ಯುವ ಸಂಗೀತಗಾರ ರಸ್ಸೆಲ್ ರೋಡ್ರಿಗಸ್ ಸಂಗೀತ ನೀಡಲಿದ್ದಾರೆ. ಪ್ರೊಡಕ್ಷನ್ ಇಂಜಿನಿಯರ್ ಆಗಿ ಆಲ್ವಿನ್ ಸಿಕ್ಖೇರಾ, ಡಿಒಪಿಯಲ್ಲಿ ಫೆಸ್‌ತ್ ಮಂಗಳೂರು ಸಹಾಯಕರಾಗಿ రాయనా, కాపి విలన్ ఈ ಮತ್ತು ವಿಲ್ಲೇಡ್ ಪಾಂಗಳ ಸಿನಿಮಾ ತಂಡದಲ್ಲಿದ್ದು, ಸುನಿಲ್ ನೆಲ್ಲಿಗುಡ್ಡೆ ಪಿಆರ್ಒ ಆಗಿದ್ದಾರೆ. ಕಲಾವಿದರಾಗಿ ಹೊಸ ಮುಖಗಳೊಂದಿಗೆ ಅನುಭವಿ ಕಲಾವಿದರಿದ್ದಾರೆ.ಕಿನ್ನಿಗೋಳಿ, ಮಂಗಳೂರು, ಬಜಪೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ.

ಸಮಾಜದಲ್ಲಿ ಒಂದು ಘಟನೆ ಕ್ಷಣಿಕವಾಗಿ ನಡೆದಾಗ ಅದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ರೋಚಕ ಕಥೆಯ ಎಳೆ ಯೊಂದಿಗೆ ನಡೆಯುವ ತಾಕಲಾಟದ ಚಿತ್ರಣವೇ `ವೇಳ್ ಘಡಿ” ಕೊಂಕಣಿ ಸಿನಿಮಾದ ಕಥಾ ಸಾರಾಂಶವನ್ನು ರೋಶನ್ ನೆಲ್ಲಿಗುಡ್ಡೆ ಅವರು ರಚಿ ಸಿದ್ದು, ಸಹ ನಿರ್ದೇಶನ ಹಾಗೂ ತಮ್ಮದೇ ಸೋನುಲವಿ ಸಿನೆ ಕ್ರಿಯೇ ಕನ್ಸ್‌ನ ಮೂಲಕ ತೆರೆಗೆ ತರಲಿದ್ದಾರೆ.

Related posts

ಮಹಿಳಾ ಸಮಾಜ ಮಣಿಪಾಲದಿಂದ ಸಂಸ್ಥಾಪಕರ ದಿನಾಚರಣೆ: ಶ್ರೀಮತಿ ಶಾರದಾ ಎಂ. ಪೈ ಹಾಗೂ ಡಾ. ಎ. ಪದ್ಮರಾವ್ ಅವರ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆ ;

Voiceoftulunadu

ಕಟೀಲಿನ ಯಕ್ಷಗಾನ ಕಲಾವಿದರೊಂದಿಗೆ ಯಕ್ಷಕುಶಲೋಪರಿಕಟೀಲು ದೇಗುಲದ ಗಂಧಪ್ರಸಾದ, ಶೇಷವಸ್ತ್ರ ದಿನಸಿ ಸಾಮಾಗ್ರಿ, ಕಿರು ಗೌರವ ಧನ ಕೊಡುಗೆ ;

Voiceoftulunadu

ಕೇಂದ್ರದಿಂದ ರಾಜ್ಯಗಳಿಗೆ 1.09 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಹಂಚಿಕೆ : ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

Voiceoftulunadu

Leave a Comment