27 C
ಮಂಗಳೂರು
July 6, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಅದಮಾರು: ವಿದ್ಯಾರ್ಥಿ ವೇತನ, ಸಹಾಯ ಧನ ವಿತರಣೆ : ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ನೀಡಿದ ಆದರ್ಶ ಸಂಘಗಳ ಒಕ್ಕೂಟ;

ವರದಿ /ಚಿತ್ರ: ಈ ಮೀಡಿಯಾ

ಅದಮಾರು: ಅದಮಾರು ಆದರ್ಶ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಣೆ ಅದಮಾರಿನ ಸರ್ವೋದಯ ಸಮುದಾಯ ಭವನದಲ್ಲಿ ನೆರವೇರಿತು. ಕಮಲಾ ಕೆ. ಶೆಟ್ಟಿ ಸ್ಮಾರಕ ದತ್ತಿ ನಿಧಿ, ಎ.ಎಸ್. ಭಟ್ ಸ್ಮಾರಕ ದತ್ತಿ ನಿಧಿ, ಸುಂದರಿ ಕಾಂತರ ಶೆಟ್ಟಿ ಸ್ಮಾರಕ ನಿಧಿ ಇವರು ವಿದ್ಯಾರ್ಥಿವೇತನ ಹಾಗೂ ಸಹಾಯ ನಿಧಿಗಳ ಪ್ರಾಯೋಜಕರು.

ದತ್ತಿ ನಿಧಿ ಕಳೆದ ಇಪ್ಪತ್ತೈದು ವರ್ಷಗಳಿಂದ ನೀಡಲಾಗುತ್ತಿದೆ. ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಿತ ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಆರೋಗ್ಯ ಸಹಾಯ ವಿತರಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ವಹಿಸಿದ್ದರು.

ಪ್ರಾಯೋಜಕರಾದ ಉದಯ‌‌ ಕೆ.ಶೆಟ್ಟಿಯವರು ದತ್ತಿ ನಿಧಿ ಹಾಗೂ ವಿದ್ಯಾರ್ಥಿ ವೇತನ ವಿತರಿಸಿದರು. ಈ ಸಂದರ್ಭ ಉದ್ಯಮಿ ನೈಮಾಡಿ ನಾರಾಯಣ ಕೆ.ಶೆಟ್ಟಿ ಉಪಸ್ಥಿತರಿದ್ದರು. ಗಣೇಶ ಸಾಲಿಯಾನ್ ಸ್ವಾಗತಿಸಿದರು. ಸುದರ್ಶನ ವೈ. ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಆರ್.ಶೆಟ್ಟಿ ಫಲಾನುಭವಿಗಳ ಪಟ್ಟಿ ಓದಿದರು. ಬರ್ಪಾಣಿ ಸಂತೋಷ ಜೆ.ಶೆಟ್ಟಿ ವಂದಿಸಿದರು.

Related posts

ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ಮಹಾಸಭೆ : ಕೇಂದ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ;

Voiceoftulunadu

ಅಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬೈ (ಎಬಿಸಿಎ)ನೂತನ ಅಧ್ಯಕ್ಷರಾಗಿ ಸಿಎ ಜಗದೀಶ್ ಬಿ. ಶೆಟ್ಟಿ ಸುರತ್ಕಲ್ ಆಯ್ಕೆ:

Voiceoftulunadu

ವಿ ವಿ ಕಾಲೇಜು ಪ್ರಾಂಶುಪಾಲರಾಗಿ ಡಾ. ಜಯವಂತ ನಾಯಕ್:

voiceoftulunadu

Leave a Comment