27.7 C
ಮಂಗಳೂರು
July 6, 2026
Uncategorizedಆರೋಗ್ಯಕ್ರೀಡೆಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಪುತ್ತೂರು ಕಲಿಮಾರ್ ನಿವಾಸಿ ಖ್ಯಾತ ಜಿಮ್ ಟ್ರೈನರ್ ಸಚಿನ್ ರೈ ಹಠಾತ್ ಸಾವು;

ಪುತ್ತೂರು: ಇಲ್ಲಿನ ಕಲಿಮಾರ್ ನಿವಾಸಿಯಾದ, ಪ್ರಸಿದ್ಧ ಜಿಮ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ ಸಚಿನ್ ರೈ ಅವರು ಇಂದು ಮುಂಜಾನೆ ಆಕಸ್ಮಿಕವಾಗಿ ನಿಧನರಾದ ಘಟನೆ ನಡೆದಿದೆ.

ಮೂಲತಃ ಮಡಂತ್ಯಾರ್ ನಿವಾಸಿಯಾಗಿದ್ದ ಸಚಿನ್ ರೈ ಅವರು ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ಕಲಿಮಾರ್‌ನಲ್ಲಿ ವಾಸವಾಗಿದ್ದರು. ಕರಾವಳಿ ಭಾಗದಲ್ಲಿ ಉತ್ತಮ ಜಿಮ್ ಟ್ರೈನರ್ ಆಗಿ ಅವರು ಗುರುತಿಸಿಕೊಂಡಿದ್ದರು.

ಇಂದು ಮುಂಜಾನೆ ಅವರು ತಮ್ಮ ನಿವಾಸದಲ್ಲಿ ಹಠಾತ್ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ನಿಧನಕ್ಕೆ ನಿಖರ ಕಾರಣಗಳು ಸ್ಪಷ್ಟವಾಗಿ ಇನ್ನು ತಿಳಿದುಬರಬೇಕಿದೆ. ಮೃತರು ಅಪಾರ ಬಂಧುಬಳಗ ಹಾಗೂ ಸ್ನೇಹಿತವರ್ಗವನ್ನು ಅಗಲಿದ್ದಾರೆ.

Related posts

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ : “ಏಕ್ ಫೆಡ್ ಮಾ ಕೆ ನಾಮ್” ಕಾರ್ಯಕ್ರಮಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ ;

Voiceoftulunadu

ಕೇರಳದ ಕೊಟ್ಟಿಯೂರು ಶಿವಕ್ಷೇತ್ರದ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ

voiceoftulunadu

ಬಿಪಿಸಿಎಲ್ ಗ್ಯಾಸ್ ವಿತರಣೆ; ಮಂಗಳೂರಿನ ಬಿಪಿಸಿಎಲ್ ಕಾಮಧೇನು ಗ್ಯಾಸ್ ಏಜೆನ್ಸಿ ಯಲ್ಲಿ ಗ್ರಾಹಕರ ಜೊತೆ ಅಧಿಕಾರಿಗಳ ಮಾತುಕತೆ

rohankotekar123@gmail.com

Leave a Comment