September 4, 2026
Uncategorizedಕೃಷಿ/ಭೌಗೋಳಿಕಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನ

ಕರ್ನಾಟಕ ಪ್ರವಾಸಿ ತಾಣಗಳಿಗೆ ಆಕಾಶ ಮಾರ್ಗದ ಸಂಪರ್ಕ :13 ಕೇಂದ್ರಗಳಲ್ಲಿ ಬೃಹತ್ ‘ಕೇಬಲ್ ಕಾರ್’ ವ್ಯವಸ್ಥೆಗೆ ಸರ್ಕಾರ ಗ್ರೀನ್ ಸಿಗ್ನಲ್! ;

ವರದಿ /ಚಿತ್ರ :ರವಿರಾಜ್ ಕಾವೂರು

ಬೆಂಗಳೂರು : ರಾಜ್ಯದ ಪ್ರವಾಸಿ ತಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಮೆಗಾ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ. ಬೆಟ್ಟ-ಗುಡ್ಡಗಳು ಹಾಗೂ ಜಲಪಾತಗಳ ಸೌಂದರ್ಯವನ್ನು ಆಕಾಶ ಮಾರ್ಗದಿಂದ ವೀಕ್ಷಿಸಲು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯದ 13 ಪ್ರಮುಖ ತಾಣಗಳಲ್ಲಿ ಸುಸಜ್ಜಿತ ರೋಪ್‌ವೇ (Ropeway) ಕಲ್ಪಿಸಲು ಸರ್ಕಾರ ವೇಗವಾಗಿ ಹೆಜ್ಜೆ ಇಟ್ಟಿದೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಿರುವ ಈ ಯೋಜನೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರು ಜುಲೈ 13, 2026 ರಂದು ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತ್ವರಿತ ಕಾಮಗಾರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಎಲ್ಲೆಲ್ಲಿ ಬರಲಿದೆ ಈ ಹೊಸ ತಾಂತ್ರಿಕ ಸೌಲಭ್ಯ?

ಸರ್ಕಾರವು ಮೊದಲ ಹಂತದಲ್ಲಿ ಸಮೀಕ್ಷೆ ನಡೆಸಿ ರೋಪ್‌ವೇ ಸ್ಥಾಪನೆಗಾಗಿ ಗ್ರೀನ್ ಸಿಗ್ನಲ್ ನೀಡಿರುವ ಪ್ರಮುಖ13 ಪ್ರವಾಸಿ ತಾಣಗಳ ಅಧಿಕೃತ ಪಟ್ಟಿ :

ಮುಳ್ಳಯ್ಯನಗಿರಿ ಶಿಖರ (ಚಿಕ್ಕಮಗಳೂರು)

ಗೋಕಾಕ್ ಜಲಪಾತ (ಬೆಳಗಾವಿ)

ಸವದತ್ತಿ ಯಲ್ಲಮ್ಮನ ಗುಡ್ಡ (ಬೆಳಗಾವಿ)

ಅಂಜನಾದ್ರಿ ಬೆಟ್ಟ (ಕೊಪ್ಪಳ)

ಮಧುಗಿರಿ ಕೋಟೆ (ತುಮಕೂರು)

ಮಲ್ಲಳ್ಳಿ ಜಲಪಾತ (ಕೊಡಗು)

ಬಳ್ಳಾರಿ ಕೋಟೆ (ಬಳ್ಳಾರಿ)

ನೃಪತುಂಗ ಬೆಟ್ಟ (ಧಾರವಾಡ)

ಯಾದಗಿರಿ ಕೋಟೆ (ಯಾದಗಿರಿ)

ಮೈಲಾರ ಲಿಂಗೇಶ್ವರ ದೇವಸ್ಥಾನ (ಯಾದಗಿರಿ)

ಹೊಳಲಮ್ಮ ದೇವಸ್ಥಾನ (ಗದಗ)

ಕಾಲಕಾಲೇಶ್ವರ ದೇವಸ್ಥಾನ (ಗದಗ)

ದೇವರಗುಡ್ಡ ಮಾಲತೇಶ ದೇವಸ್ಥಾನ (ಹಾವೇರಿ).

Related posts

ಮೀನುಗಾರಿಕಾ ಋತು ಆರಂಭ ಹಿನ್ನೆಲೆ ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ:ಬಂದರಿನ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಶಾಸಕ ಯಶ್ಪಾಲ್;

Voiceoftulunadu

ಕುಂತಳನಗರ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ :ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಅ. 9 ರಂದು ಎಂಆರ್ ಜಿ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ;

Voiceoftulunadu

ಪಟ್ಲ ಯು.ಎಸ್. ನಾಯಕ್ ಪ್ರೌಢ ಶಾಲೆಲ್ಲಿ ಇಂಟರಾಕ್ಷ ಪದಗ್ರಹಣ ಸಮಾರಂಭ : ರೂರಲ್ ಎಜುಕೇಶನ್ ಸೊಸೈಟಿ ಆಶ್ರಿತ ವಿದ್ಯಾ ಸಂಸ್ಥೆ;

Voiceoftulunadu

Leave a Comment