September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಹೆಬ್ರಿಯ ಚಾಣಕ್ಯ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಚೆಸ್ ತರಗತಿ ಉದ್ಘಾಟನೆ : ಚೆಸ್‌ ತರಗತಿ ಉದ್ಘಾಟಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ;

ವರದಿ/ ಚಿತ್ರ : ಈ ಮೀಡಿಯಾ

ಹೆಬ್ರಿ : ಚೆಸ್ ಆಟವು ವಿದ್ಯಾರ್ಥಿಗಳ ಏಕಾಗ್ರತೆ, ತಾರ್ಕಿಕ ಚಿಂತನೆ, ಕೈಗೊಳ್ಳುವ ಸಾಮರ್ಥ್ಯ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 7 ವರ್ಷಗಳಿಂದ ಉಚಿತ ಚೆಸ್ ತರಬೇತಿಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಎಸ್. ಆರ್. ಸ್ಕೂಲ್ ಬಳಿಯ ಗುರುಕೃಪಾ ಬಿಲ್ಡಿಂಗ್ನಲ್ಲಿರುವ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಉಚಿತ ಚೆಸ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಕಳೆದ 12 ವರ್ಷಗಳಿಂದ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ತರಬೇತಿಗಳನ್ನು ನೀಡುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಯಕ್ಷಗಾನ, ಕರಾಟೆ, ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಭರತನಾಟ್ಯ, ಫಿಲಂ ಡ್ಯಾನ್ಸ್, ಕೀಬೋರ್ಡ್, ತಬಲಾ, ಕೊಳಲು ಮೊದಲಾದ ತರಗತಿಯನ್ನು ನೀಡಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳಿಗೆ ತರಬೇತಿ ನೀಡುವುದರ ಮೂಲಕ ಪ್ರೋತ್ಸಾಹಿಸಿದರೆ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ ಇಂತಹಎಂದರು.

ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಆರು ವರ್ಷಗಳ ಕಾಲ ಉಚಿತ ಚಿತ್ರಕಲಾ ತರಗತಿಯನ್ನು ನೀಡಿದ್ದು ಕಳೆದ 7 ವರ್ಷಗಳಿಂದ ಉಚಿತ ಚೆಸ್‌ ತರಗತಿಯನ್ನು ನೀಡಲಾಗುತ್ತಿದೆ. ಪ್ರತಿ ಭಾನುವಾರ ಬೆಳಿಗ್ಗೆ 8:30 ರಿಂದ 9:30 ថថ ತರಗತಿ ನಡೆಯಲಿದ್ದು ಸೀಮಿತ ಪ್ರವೇಶಾತಿಗೆ ಅವಕಾಶವಿದ್ದು, ಕೂಡಲೇ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದರು.

ಸಮಾರಂಭದಲ್ಲಿ ಚಾಣಕ್ಯ ಚಿತ್ರಕಲಾ ಕೇಂದ್ರದ ಶಿಕ್ಷಕ ರಾಧಾಕೃಷ್ಣ, ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

ಶ್ರೀಕೇತ್ರ ಪೊಳಲಿಗೆ ಶೃಂಗೇರಿ ಮಠದ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳ ಭೇಟಿ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ಆಡಳಿತ ಮಂಡಳಿ;

Voiceoftulunadu

ಕೆಥೋಲಿಕ್ ಸಭಾ ಉಡುಪಿ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ಸಂಘಟನೆಗಳಿಂದ ಸನ್ಮಾನ ಕೆಥೋಲಿಕ್ ಸಂಘಟನೆಯನ್ನು ಬಲಿಷ್ಠ ಗೊಳಿಸೋಣ : ವಂ. ಅನಿಲ್ ಡಿಸೋಜಾ ;

Voiceoftulunadu

ಆಗಲಿದ ‘ಸಂಗೀತ ಸಾಮ್ರಾಟ್’-‘ಕಲಾ ರತ್ನ’ ಹೆನ್ರಿ ಡಿ’ಸೋಜಾ ಅವರಿಗೆ ಸಂತಾಪ ಸಭೆ : ಕೊಂಕ್ಣಿ ಕ್ಷೇತ್ರಕ್ಕೆ ಹೆನ್ರಿ ಡಿ’ಸೋಜಾ ಜೀವಾಳವಾಗಿರುವರು : ಜೋಕಿಂ ಸ್ಟಾ ನಿ ಆಲ್ವಾರಿಸ್ ;

Voiceoftulunadu

Leave a Comment