ವರದಿ /ಚಿತ್ರ :ಈ ಮೀಡಿಯಾ
ಪಡುಬಿದ್ರಿ: ಕಾಪು ಬಿಜೆಪಿ ಮಂಡಲದಮುಖಂಡ ಶರಣ್ ಕುಮಾರ್ ಮಟ್ಟು ಅವರೇ, ಧರ್ಮದ ಹೆಸರಿನಲ್ಲಿ ಇತರರಿಗೆ ನೀತಿ-ನೈತಿಕತೆಯ ಪಾಠ ಹೇಳುವ ಮೊದಲು, ನಿಮ್ಮ ಪಕ್ಷದೊಳಗೆ ಜನರ ಮುಂದೆ ಉದ್ಭವಿಸಿರುವ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಬೋಧ ಚಂದ್ರ ಹೆಜಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀರಾಮನ ಆದರ್ಶಗಳು ಸತ್ಯ, ಧರ್ಮ, ನ್ಯಾಯ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದ್ದು, ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಪ್ರಯತ್ನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನತೆಇತರರಿಗೆ ಧರ್ಮದ ಪಾಠ ಹೇಳುವ ಮೊದಲು ತಮ್ಮ ಪಕ್ಷದೊಳಗಿನ ಪ್ರಶ್ನೆಗಳಿಗೂ ಉತ್ತರಿಸುವ ನೈತಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು.ಜನರ
ಜನರ ಧಾರ್ಮಿಕ ಭಾವನೆಗಳನ್ನು ರಾಜಕೀಯ ಉದ್ದೇಶಗಳಿಗೆ ಯಾವುದೇ ಬಳಸಿಕೊಳ್ಳುವ ಪ್ರಯತ್ನವನ್ನು ಜನತೆ ಸೂಕ್ತವಾಗಿ ಮೌಲ್ಯಮಾಪನ ಮಾಡುತ್ತಾರೆ.ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಇಂತಹ ದ್ವಂದ್ವ Дез ಹಾಗೂ ಜನರನ್ನು ದಿಕ್ಕು ತಪ್ಪಿಸುವ ರಾಜಕೀಯವನ್ನು ತೀವ್ರವಾಗಿ ಖಂಡಿಸುತ್ತದೆ. ಸತ್ಯ, ನ್ಯಾಯ ಮತ್ತು ಪಾರದರ್ಶಕ ಆಡಳಿತದ ಪರವಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದೂ ಪ್ರಭೋದ್ ಹೇಳಿದ್ದಾರೆ.
