September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಕಪಸಮ -ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದಿಂದ ಪತ್ರಕರ್ತರ ದಿನಾಚರಣೆ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀಪ್ರಶಸ್ತಿ ಪ್ರದಾನ;

ವರದಿ /ಚಿತ್ರ: ರೋನ್ಸ್ ಬಂಟ್ವಾಳ್

ಮುಂಬಯಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಮಹಾರಾಷ್ಟ್ರ ಘಟಕದ ಸಹಯೋಗದೊಂದಿಗೆ ಪತ್ರಕರ್ತರ ದಿನಾಚರಣೆ-2026ನ್ನು ಇದೇ ಆ.೦೧ನೇ ಶನಿವಾರ ಪೂರ್ವಾಹ್ನ 11:00 ಗಂಟೆಗೆ ಲೋಟಸ್ ಸಭಾಗೃಹ, ಸಾಲೀಟರಿ ಕಾರ್ಪೋರೆಟ್ ಪಾರ್ಕ್, ಅಂಧೇರಿ ಪೂರ್ವ ಮುಂಬಯಿ ಇಲ್ಲಿ ಆಚರಿಸಲಿದೆ.

ಕಪಸಮ ಸಂಘದ ಅಧ್ಯಕ್ಷೆ ಡಾ| ಜಿ.ಪಿ ಕುಸುವ ಅವರ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಕಪಸಮ ವಾರ್ಷಿಕವಾಗಿ ಕೊಡಮಾಡುವ ಈ ಬಾರಿಯ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2026ನ್ನು ಪ್ರದಾನಿಸಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಉಪಸ್ಥಿತರಿದ್ದು ಎಂಟನೇ ಆವೃತ್ತಿಯ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಯ ಕನ್ನಡ ಮಾಧ್ಯಮ ಲೋಕದ ಪ್ರಮುಖರೂ, ಬೆಂಗಳೂರು ಅಲ್ಲಿನ ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್ ಅವರಿಗೆ ೨೦೨೬ನೇ ಸಾಲಿನ ಪ್ರಶಸ್ತಿಯನ್ನು (ರೂಪಾಯಿ 25,000- ನಗದು, ಪುರಸ್ಕಾರ ಫಲಕ, ಪ್ರಶಸ್ತಿಪತ್ರ, ಶಾಲು, ಫಲಪುಷ್ಫ) ನೀಡಿ ಪ್ರದಾನಿಸಲಾಗುವುದು ಎಂದು ಕಪಸಮ ಕಪಸಮ ಗೌ| ಪ್ರ| ಕಾರ್ಯದರ್ಶಿ ಸವಿತಾ ಸುರೇಶ್ ಶೆಟ್ಟಿ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಶಿವ ಮೂಡಿಗೆರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶ್ರೀ ಜಿ.ಎನ್.ಮೋಹನ್ಜಿ.ಎನ್.ಮೋಹನ್ ಕನ್ನಡ ಮಾಧ್ಯಮ ಲೋಕದ ಪ್ರಮುಖರಲ್ಲೊಬ್ಬರು. ಪತ್ರಿಕೆ, ಎಲೆಕ್ಟ್ರಾನಿಕ್ ಹಾಗೂ ಆನ್‌ಲೈನ್ ಮೂರೂ ಮಾಧ್ಯಮಗಳಲ್ಲಿ ನುರಿತವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕದಲ್ಲಿ ಮೊದಲ ರ್‍ಯಾಂಕ್ ಹಾಗೂ ಎರಡು ಚಿನ್ನದ ಪದಕಗಳೊಂದಿಗೆ ಪದವಿ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.

‘ಪ್ರಜಾವಾಣಿ’ಯ ವರದಿಗಾರರಾಗಿ, ‘ಈಟಿವಿ’ಯ ಸುದ್ದಿ ವಿಭಾಗದ ಮುಖ್ಯಸ್ಥರಾಗಿ, ನಂತರ ‘ಈಟಿವಿ’ ಸುದ್ದಿ ವಾಹಿನಿಯ ಹಿರಿಯ ಸಂಪಾದಕರಾಗಿ, ‘ಸಮಯ’ ಚಾನಲ್ ಹಾಗೂ ‘ಅವಧಿ’ಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿರುವರು. ಸಾಹಿತ್ಯ ಹಾಗೂ ರಂಗಭೂಮಿಗೆ ನೀಡಿದ ಇವರ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಇತ್ಯಾದಿಗಳು ಲಭ್ಯವಾಗಿವೆ.

Related posts

ಟ್ರೇಲರ್‌ನಲ್ಲೇ ಮನರಂಜನೆ ನೀಡಿದ ‘ಪಿಚ್ಚರ್’ ಆಗಸ್ಟ್ 7ರಂದು ತುಳು, ಕನ್ನಡದಲ್ಲಿ ಸಿನಿಮಾ ತೆರೆಗೆ ;

Voiceoftulunadu

ಉಚ್ಚಿಲ : ಕಸಾಪ ದಿಂದ ಪ್ರತಿಭಾ ಪುರಸ್ಕಾರ, ರ‍್ಯಾಂಕ್ ವಿಜೇತರಿಗೆ ಅಭಿನಂದನೆ;

Voiceoftulunadu

ಬೆಂಗಳೂರಿನ ಆರ್ ಟಿ ನಗರದಲ್ಲಿ ಬೇಕರಿಗೆ ಹಲ್ಲೆ, ದಾಂಧಲೆ – ಎಫ್ ಐ ಆರ್ ದಾಖಲು ;

Voiceoftulunadu

Leave a Comment