September 5, 2026
Uncategorizedಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಎರ್ಮಾಳು ಬಡಾ ಕಂಬಳ ಗದ್ದೆಯಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮ: ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ತುಳು ಚಲನಚಿತ್ರ ನಟ ಭೋಜರಾಜ ವಾಮಂಜೂರು;

ವರದಿ/ ಚಿತ್ರ: ಈ ಮೀಡಿಯಾ

ಪಡುಬಿದ್ರಿ : ಬಿಲ್ಲವರ ಯೂನಿಯನ್(ರಿ.) ಕುಬೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳು ಬಡಾ, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ, ಬೈದಶ್ರೀ ಮಹಿಳಾ ಮಂಡಳಿ ಎರ್ಮಾಳು ಬಡಾ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ತೆಂಕ-ಬಡಾ ಜೋಡುಕರೆ ಕಂಬಳ ಗದ್ದೆ ಎರ್ಮಾಳಿನಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮ ಭಾನುವಾರ ಜರಗಿತು.ಕಾರ್ಯಕ್ರಮವನ್ನು ಖ್ಯಾತ ತುಳು ಚಲನಚಿತ್ರ ನಟ ಭೋಜರಾಜ ವಾಮಂಜೂರು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಗ್ರಾಮೀಣ ಬದುಕಿನ ಅರಿವು ಯುವ ಮನಸ್ಸುಗಳಲ್ಲಿ ಮೂಡಲು ಕಂಡಡೊಂಜಿ ದಿನದಂತಹ ಕಾರ್ಯಕ್ರಮಗಳು ಅನಿವಾರ್ಯ.ತುಳುನಾಡಿನ ಕಂಬಳ, ದೈವಾರಾಧನೆ ಹಿರಿಯರ ಮುತಾಲಿಕೆಯಿಂದ ಅದನ್ನು ಮುಂದುವರಿಯುತ್ತಿದೆ. ಅನುಸರಿಸಿ ಕಾಪಾಡೋಣ ಎಂದರು.ಈ ಸಂದರ್ಭ ಯಕ್ಷಗಾನದ ತುಳು ಹಾಡನ್ನು ಹಾಡುವ ಮೂಲಕ ರಂಜಿಸಿದರು.

ತುಳುನಾಡಿನ “ನವರಸರಾಜೆ ತುಳು ಚಲನಚಿತ್ರ ನಟ ಭೋಜರಾಜ್ ವಾಮಂಜೂರು” ದಂಪತಿಯನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎರ್ಮಾಳು ಬಡಾ ಕುಬೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಕರು, ಎರ್ಮಾಳು ಬಡಾ ಬಿಲ್ಲವ ಯೂನಿಯನ್ ಅಧ್ಯಕ್ಷ ಸುಖೇಶ್ ಕುಮಾರ್, ನಂದಿಕೇಶ್ವರ ದೇವಳದಅರ್ಚಕ ಬಾಲಕೃಷ್ಣ ಭಟ್, ಉಚ್ಚಿಲ ಬಿಲ್ಲವ ಸಂಘದ ಅಧ್ಯಕ್ಷ ಯು. ಸದಾಶಿವ ಪೂಜಾರಿ, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ ಅಧ್ಯಕ್ಷ ಸತೀಶ್ ಪೂಜಾರಿ ಮೂಡಬೆಟ್ಟು, ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಸಬಿತ ಸೋಮನಾಥ, ಗುರಿಕಾರ ಶಂಕರ ಪೂಜಾರಿ ಎರ್ಮಾಳು, ಕರುಣಾಕರ ಕೋಟ್ಯಾನ್ ಉಚ್ಚಿಲ ಉಪಸ್ಥಿತರಿದ್ದರು.

ಶಕುಂತಳ ಮತು ತಂಡದ ಸದಸ್ಯರು ಪ್ರಾರ್ಥಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು. ಸತೀಶ್ ಪೂಜಾರಿ ವಂದಿಸಿದರು.ಗ್ರಾಮಸ್ಥರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನೀಡಿದರು.

Related posts

ಕಾಪು ಹೊಸ ಶ್ರೀ ಮಾರಿಗುಡಿಗೆ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರ ಭೇಟಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿದ ಮಾರಿಗುಡಿಯ ಅರ್ಚಕ ಶ್ರೀನಿವಾಸ ಕಾಪು;

Voiceoftulunadu

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅಂತರರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ಆಯ್ಕೆ: ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಮಹಾಸಂಕಲ್ಪ;

Voiceoftulunadu

ಡಾ. ಜಿ.ಪರಮೇಶ್ವರ್ ಅವರು ತಮ್ಮ ವ್ಯಕ್ತಿತ್ವದಿಂದ ಶ್ರೀಮಂತರು : ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ;

Voiceoftulunadu

Leave a Comment