September 4, 2026
Uncategorizedಆರೋಗ್ಯಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಫುಡ್ ಕಾರ್ನರ್ರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ರಿಲೈನ್ಸ್ ಸ್ಮಾರ್ಟ್ ಬಜಾರ್ ವತಿಯಿಂದ ಆಯೋಜಿಸಲಾದ ‘ಆಟಿಡೊಂಜಿ ದಿನ’ ಕಾರ್ಯಕ್ರಮ.ಸ್ಥಳೀಯ ಆಹಾರ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ ರಿಲೈನ್ಸ್ ಸ್ಮಾರ್ಟ್ ಬಜಾರ್: ಜನಾರ್ದನ್ ಕೊಡವೂರು;

ವರದಿ /ಚಿತ್ರ :ಈ ಮೀಡಿಯಾ

ಉಡುಪಿ, ಆ.7 : ಸ್ಥಳೀಯ ಆಹಾರ ಸಂಸ್ಕೃತಿಯನ್ನು ಉಳಿಸಿಬೆಳೆಸುವ ಉದ್ದೇಶದಿಂದ ರಿಲೈನ್ಸ್ ಸ್ಮಾರ್ಟ್ ಬಜಾರ್ ವತಿಯಿಂದ ಆಯೋಜಿಸಲಾದ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಪತ್ರಕರ್ತ ಜನಾರ್ಧನ ಕೊಡವೂರು ಅಭಿಪ್ರಾಯಪಟ್ಟರು.

ಗುರುವಾರ ಉಡುಪಿಯ ರಿಲೈನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ನಡೆದ ಆಟಿಡೊಂಜಿ ದಿನದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ನಗರ ಕೇಂದ್ರಿತ ವಾಣಿಜ್ಯ ಸಂಸ್ಥೆಯೊಂದು ತುಳುನಾಡಿನ ಸಾಂಪ್ರದಾಯಿಕ ಆಚರಣೆಗೆ ಆದ್ಯತೆ ನೀಡಿರುವುದು ಸಂತಸದ ವಿಷಯ.ಒಂದೇ ಸೂರಿನಡಿ ಸ್ಥಳೀಯ 43 ಬಗೆಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳಿಗೆ ಅವಕಾಶ ಕಲ್ಪಿಸಿರುವುದು ವಿಶೇಷ. ಅಲ್ಲದೆ,ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಸ್ಮರಣಿಕೆ ಹಾಗೂ ಬಹುಮಾನಗಳನ್ನು ನೀಡಿ, ಮಹಿಳೆಯರ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆ ಒದಗಿಸಿರುವುದು ಪ್ರಶಂಸನೀಯ ಕಾರ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಂಜನಿ ವಸಂತ್ ಹಾಗೂ ಸಹನಾ ಬಲ್ಲಾಳ್ ಸಹಕರಿಸಿದರು.ರಿಲೈನ್ಸ್ ಸ್ಮಾರ್ಟ್ ಬಜಾರ್ ಮುಖ್ಯಸ್ಥ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿ, ಅಗೋಸ್ಟ್ 12 ರಿಂದ 16ರವರೆಗೆ “ಪುಲ್ ಪೈಸಾ ವಸೂಲ್ ಸೇಲ್ ” ಪ್ರಾರಂಭವಾಗುವುದು ಎಂದರು.ಜ್ಯೋತಿ ಶೇಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲ : ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಮಾಜಿ ಉಪಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ.”ಆಟಿಡೊಂಜಿ ದಿನ” ;

Voiceoftulunadu

ಕೊಳಲಗಿರಿ “ಹಡಿಲು ಭೂಮಿ ಕೃಷಿ”ಗೆ ಚಾಲನೆ : “ಕೆಸರ್ಡ್ ಒಂಜಿ ದಿನ” ಸಂಭ್ರಮ;

Voiceoftulunadu

ಮಂಗಳೂರಿನ ಮಹೇಶ್ ಮೋಟರ್ಸ್ ಮಹೇಶ್ ಶೇಕ ವಿಧಿವಶ;

Voiceoftulunadu

Leave a Comment