September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪುತ್ತೂರಿನ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ವನಮಹೋತ್ಸವ ;

ಪುತ್ತೂರು: ಮುಂಡೂರು ಗ್ರಾಮದ ಪಜಿಮಣ್ಣು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮೂಡಂಬೈಲು ಕತ್ತಾರ್ ಉದ್ಯಮಿ ಮೂಡಂಬೈಲು ಡಾ. ರವಿ ಶೆಟ್ಟಿ ನೇಸರ ಕಂಪ ಇವರ ಪ್ರಾಯೋಜಕತ್ವದಲ್ಲಿ ಹಾಗೂ ರೋಟರ್ಯ್ಯಾಕ್ಟ್ ಕ್ಲಬ್ ಪುತ್ತೂರು ಇವರ ಸಹಭಾಗಿತ್ವದೊಂದಿಗೆ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮವು ಆ.9ರಂದು ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕಣ್ಣಾರಾಯ ಬನೇರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕತ್ತಾರ್ ಉದ್ಯಮಿ ಡಾ. ರವಿ ಶೆಟ್ಟಿನೇಸರ, ಕಂಪ, ಮುಂಡೂರುಸ.ಹಿ.ಪ್ರಾ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ರಾಮಚಂದ್ರ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಸಭಾಪತಿ ಶ್ರೀಧರ ಆಚಾರ್ಯ ಶುಭಹಾರೈಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಧನಂಜಯ ಕುಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉದಯ ಕುಮಾರ್ ಚಂದನ ಪಜಿಮಣ್ಣು ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ವಠಾರದಲ್ಲಿ ವಿವಿಧ ಜಾತಿಯ ಹಣ್ಣುಗಳಸಸಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿದವರಿಗೆ ಸಸಿ ವಿತರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗೇಶ ಕುದ್ರೆತ್ತಾಯ, ಪ್ರಬಂಧಕರಾದ ಪ್ರಸಾದ ಬೈಪಾಡಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪದ್ಮಯ್ಯ ನಾಯ್ಕ ಬಂಡಿಕಾನ, ಪದ್ಮಯ್ಯ ಗೌಡ ಗುತ್ತಿನಪಾಲು, ಮಾಜಿ ಸದಸ್ಯರಾದ ರಾಮಣ್ಣ ಗೌಡ ತೌಡಿಂಜ, ಸದಾಶಿವ ಗೌಡ ಕೊಡಂಕಿರಿ, ಪ್ರಮುಖರಾದ ಸುಧೀರ್ ಶೆಟ್ಟಿ ನೇಸರ ಕಂಪ, ಪ್ರಸಾದ ರೈ ಕೊಡಂಕಿರಿ, ಶ್ರೀರಂಗ ಶಾಸ್ತ್ರಿ ಮಣಿಲ, ಪದ್ಮನಾಭ ಎ ಅಜಲಾಡಿ, ಜಯಾನಂದ ಗೌಡ ಅಂಬಟ, ಮನೀಷಾ ಪಜಿಮಣ್ಣು, ಶಿವಕುಮಾರ್ ಅಂಬಟ, ಬಾಲಕೃಷ್ಣ ಗೌಡ ಪಜಿಮಣ್ಣು, ಮಾಧವ ಸಾಲಿಯಾನ್ ಕುರೆಮಜಲು, ಸೇಸಪ್ಪ ಶೆಟ್ಟಿ ಪೊನೋನಿ, ರೇವತಿ ಕಲ್ಲಗುಡ್ಡೆ, ಚಂದ್ರಕಲಾ ಮುಂಡೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಪದಾಧಿಕಾರಿಗಳಾದ ಸುಬ್ರಮಣಿ, ಸುಕನ್ಯಾ, ಸುಶಾಂತ್, ಆದಿತ್ಯ ರಾವ್, ಶಶಿಧರ್, ನವೀನ್ ಚಂದ್ರ ಸಹಿತ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಮೂವರ ಜೀವ ಉಳಿಸಿದ ವಿಟ್ಲ ಎಸ್‌ಐ;

Voiceoftulunadu

ಆ.09: ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದಲ್ಲಿತುಳುನಾಡಿನ ಮರೆಯಾಗುತ್ತಿರುವ ಸಂಸ್ಕೃತಿ-ಸಂಪ್ರದಾಯದ ವಿಚಾರ ಸಂಕಿರಣ ;

Voiceoftulunadu

ಬಿ.ಸಿ.ರೋಡು: ಯುವ ಗಾಣಿಗ ಸಂಘ ದಿಂದ ‘ಕೆಸರ್ ಡ್ ಒಂಜಿ ದಿನ’, ಶಾಸಕ ಮೆಚ್ಚುಗೆ ;

Voiceoftulunadu

Leave a Comment