November 5, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ತುಂಬೆ: ಸೆ 6ರಂದು ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ : ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆ ;

ವರದಿ /ಚಿತ್ರ :ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ :ಭಾಗ್ಯೋದಯ ಮಿತ್ರ ಕಲಾ ವೃಂದ (ರಿ.) ತುಂಬೆ ಇದರ ನವೀಕೃತ ಕಟ್ಟಡ “ಭಾಗ್ಯೋದಯ”ದ ಉದ್ಘಾಟನಾ ಸಮಾರಂಭವು ಸೆ 6ರಂದು ಹನುಮ ನಗರ ತುಂಬೆಯಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 6ಕ್ಕೆ ಗಣಹೋಮ ಬಳಿಕ ಭಜನೆ ಹಾಗೂ 9.30ಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.11ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಬಳಿಕ ಪ್ರಸಾದ ವಿತರಣೆ ಸಹಭೋಜನ ನಡೆಯಲಿದೆ.ಅಪರಾಹ್ನ 2ರಿಂದ ಅಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿಕ್ಕಿದೆ, ಸಂಜೆ ಸಮಾರೋಪ ಸಮಾರಂಭ,ಬಹುಮಾನ ವಿತರಣೆ ಜರುಗಲಿದೆ.

ಬಳಿಕ ಸಂಘ ಸದಸ್ಯರಿಂದವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ನಿತಿನ್ ತುಂಬೆ ಸಂಯೋಜನೆಯಲ್ಲಿ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಬಲೇ ತೆಲಿಪುಗ”ಎಂಬ ವಿನೂತನ ಶೈಲಿಯ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಭಾಗ್ಯೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಯೋಗೀಶ್ ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವಾಲಿಬಾಲ್ ಫ್ರೆಂಡ್ಸ್ ಪರ್ಕಳ ತಂಡದ ಲೋಗೊ ಬಿಡುಗಡೆ: ಪರ್ಕಳ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ;

Voiceoftulunadu

ಅಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬೈ (ಎಬಿಸಿಎ)ನೂತನ ಅಧ್ಯಕ್ಷರಾಗಿ ಸಿಎ ಜಗದೀಶ್ ಬಿ. ಶೆಟ್ಟಿ ಸುರತ್ಕಲ್ ಆಯ್ಕೆ:

Voiceoftulunadu

ಮಾಹೆಯಿಂದ 110 ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಅರಿವು, ಆರೈಕೆ ಕುರಿತು ತರಬೇತಿ : ಮಾನಸಿಕ ಕಾಯಿಲೆ ಲಕ್ಷಣ ಗುರುತಿಸಿ ಚಿಕಿತ್ಸೆಗೆ ಶಿಫಾರಸು ತರಲು ತರಬೇತಿ ;

Voiceoftulunadu

Leave a Comment