November 5, 2026
Uncategorizedಆರೋಗ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ನಾಳೆ ಉಡುಪಿಯಲ್ಲಿ ಬೃಹತ್ ರಕ್ತದಾನ ಶಿಬಿರ : ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಕ್ತದಾನವೇ ಜೀವದಾನ ಕಾರ್ಯಕ್ರಮ ;

ವರದಿ /ಚಿತ್ರ: ವಿನೋದ್ ಶೆಟ್ಟಿ ಉಡುಪಿ

ಉಡುಪಿ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ, ಉಡುಪಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ನಾಳೆ *(ಅ.29, ಬುಧವಾರ)* ಅಜ್ಜರಕಾಡು ಟೌನ್ ಹಾಲ್ ನಲ್ಲಿ ಬೃಹತ್ ರಕ್ತದಾನ ಶಿಬಿರ, ಆಹಾರ ಕಿಟ್ ವಿತರಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗ್ಗೆ 10 ಗಂಟೆಗೆ ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ಲಾಕ್ ಅಧ್ಯಕ್ಷ *ರಮೇಶ್ ಕಾಂಚನ್* ಅಧ್ಯಕ್ಷತೆ ವಹಿಸಲಿದ್ದಾರೆ.

ವಿಶೇಷ ಗುರಿ : 300 ಯುನಿಟ್ ರಕ್ತ ಸಂಗ್ರಹ- ಕಳೆದ 4 ವರ್ಷದಲ್ಲಿ 800+ ಯುನಿಟ್ ರಕ್ತದಾನ ಮಾಡಿ ದಾಖಲೆ- 200 ದಿವ್ಯಾಂಗರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ .

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ, ದಿನಕರ ಹೇರೂರು, ಗೋಪಾಲ ಪೂಜಾರಿ, ವಿನಯ್ ಕುಮಾರ್ ಸೊರಕೆ, ಐವನ್ ಡಿಸೋಜಾ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.

ರಕ್ತದಾನ ಮಾಡಿ, ಮಾನವರ ಜೀವ ಉಳಿಸಿ!

Related posts

ಉಡುಪಿ ಶಾಸಕ ಯಶ್ಪಾಲ್ ಸುವರ್ಣರಿಂದ ಅಸಂವಿದಾನಿಕ ಶಬ್ದ ಬಳಕೆ ಬಂಧನಕ್ಕೆ ಆಗ್ರಹ : ಬಂಧನಕ್ಕೆ ಆಗ್ರಹಿಸಿದ ಮುದರಂಗಡಿ ಗ್ರಾಮ ಪಂಚಾತ್ ಮಾಜಿ ಅಧ್ಯಕ್ಷ ಡೇವಿಡ್‌ ಡಿಸೋಜಾ ;

Voiceoftulunadu

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ವಿಗ್ರಹ ರಚನಾ ಕಾರ್ಯಕ್ಕೆ ಮುಹೂರ್ತ: ಕುಬೇರಾ ತಂಡಕ್ಕೆ ಶಾರದಾ ಮಾತೆ, ನವ ದುರ್ಗೆಯರ ವಿಗ್ರಹ ನಿರ್ಮಾಣಕ್ಕೆ ವೀಳ್ಯ ;

Voiceoftulunadu

ಇಂದು ಬಿಡುಗಡೆಯಾಗುತ್ತಿದ್ದಾಳೆ “ಈ ಶತಮಾನದ ಮಾದರಿ ಹೆಣ್ಣು” : ಬಿ ಆರ್ ಫಿಲ್ಮ್ ಐಕಾನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ಕಿರುಚಲನಚಿತ್ರ ;

Voiceoftulunadu

Leave a Comment