28.5 C
ಮಂಗಳೂರು
September 4, 2026
ಜಿಲ್ಲಾ ಸುದ್ದಿವಾಣಿಜ್ಯಸ್ಥಳೀಯ/ಪ್ರಾದೇಶಿಕ ಸುದ್ದಿ

ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ :ಪ್ರಭಾಕರ ಪ್ರಭು;

ವರದಿ /ಚಿತ್ರ:ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ :ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ರಾಜ್ಯ ಸರಕಾರದ ಸಹಭಾಗಿತ್ವದ ಮಹತ್ವಾಕಾಂಕ್ಷೆ ಯೋಜನೆಯಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು 2026-27 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಸಂಬಂದಿಸಿದಂತೆ ತೋಟಗಾರಿಕೆ ಇಲಾಖೆ ಜಾರಿಗೊಳಿಸಿದ್ದು , ಅಡಿಕೆ ,ಕರಿಮೆಣಸು , ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆವಿಮೆ ಮಾಡಲು ಪ್ರಿಮಿಯಂ ಪಾವತಿಸಲು ಪ್ರಾರಂಭವಾಗಿದ್ದು , ಬೆಳೆಸಾಲ ಪಡೆದಿರುವ ರೈತರು ತಾವು ಬೆಳೆ ಸಾಲ ಪಡೆದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಂಪರ್ಕ ಮಾಡಿ ನೋಂದಾವಣೆ ಮಾಡಿಸಿ ಪ್ರಿಮಿಯಂ ಮೊತ್ತ ಪಾವತಿಸಬಹುದಾಗಿದೆ .

ಬೆಳೆ ಸಾಲ ಹೊಂದಿಲ್ಲದ ರೈತರು ಸಹ ಈ ಯೋಜನೆಯಡಿಯಲ್ಲಿ ಪ್ರಿಮಿಯಂ ಮೊತ್ತ ಪಾವತಿಸಿ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆ ಮೂಲಕ ರೈತರಿಗೆ ವಿನಂತಿ ಮಾಡಿದ್ದಾರೆ.Advertisementರೈತರು ತಾವು ಬೆಳೆದ ಬೆಳೆಗಳನ್ನು ಬೆಳೆ ಸಮೀಕ್ಷೆ ಮಾಡಿಸಬೇಕು ಹಾಗೂ ಫಾರ್ಮರ್ ಐಡಿ ಹೊಂದಿರಬೇಕು ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಎಕರೆ ಒಂದಕ್ಕೆ ರೂ 2591/- ಮತ್ತು ಕರಿಮೆಣಸು ಎಕರೆ ಒಂದಕ್ಕೆ ರೂ 951/- ವಿಮೆ ಕಂತು ಪಾವತಿಸಬೇಕಾಗುತ್ತದೆ

ಯೋಜನೆಯ ನೋಂದಾವಣಿಗೆ ಜುಲೈ 31 ಕೊನೆಯ ದಿನಾಂಕವಾಗಿದ್ದುAdvertisement, ಬೆಳೆಸಾಲ ಪಡೆದಿರುವ ಎಲ್ಲಾ ರೈತ ಬಾಂದವರು ಜಮೀನಿನ ಆರ್.ಟಿ.ಸಿ ಯೊಂದಿಗೆ ಆಧಾರ್ ಕಾರ್ಡ್ , ಬ್ಯಾಂಕ್ ಪುಸ್ತಕ ಹಾಗೂ ನಾಮಿನಿಯ ಆಧಾರ್ ನೊಂದಿಗೆ ನಿಗದಿತ ಅವಧಿಯೊಳಗೆ ತಮ್ಮ ಕಾರ್ಯ ವ್ಯಾಪ್ತಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಛೇರಿಗಳನ್ನು ಸಂಪರ್ಕಿಸಿ ಬೆಳೆವಿಮೆ ಯೋಜನೆ ಪ್ರಯೋಜನ ಪಡೆಯಬೇಕೆಂದು ರೈತರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವಾಹನದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕೊಕೈನ್ ಸಾಗಾಟ ಪತ್ತೆ : ಬೆಂಗಳೂರು ಕೆಂಗೇರಿ ಮೂಲದ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್‌ ಪೊಲೀಸ್‌ ವಶ ;

Voiceoftulunadu

ಉಡುಪಿಯ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೇವಸ್ಥಾನ ಕುಂಜಿಬೆಟ್ಟು ಇಲ್ಲಿ ಆಗಸ್ಟ್ 17 ರಂದು ಸೋಣ ತಿಂಗಳ ” ಹೂವಿನ ಪೂಜೆ ” ಹಾಗೂ ದೈವಗಳ ದರ್ಶನ ಸೇವೆ:

Voiceoftulunadu

ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಶನ್ನೂತನ ಅಧ್ಯಕ್ಷರಾಗಿ ಅಡ್ವೊಕೇಟ್ ಶೇಖರ್ ಎಸ್.ಭಂಡಾರಿ ಆಯ್ಕೆ

Voiceoftulunadu

Leave a Comment