27 C
ಮಂಗಳೂರು
July 6, 2026
Uncategorizedಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶವಾಣಿಜ್ಯ

ಅಹಮದಾಬಾದ್-ಮಂಗಳೂರು ಜಂಕ್ಷನ್-ಅಹಮದಾಬಾದ್ ರೈಲುಯಾನ‘ವೀಕ್ಲಿ ಟ್ರೈನ್ ಆನ್ ಡಿಮ್ಯಾಂಡ್’ ವಿಶೇಷ ರೈಲು ಸಂಚಾರ ಅವಧಿ ವಿಸ್ತಾರ;

ವರದಿ /ಚಿತ್ರ:ರೋನ್ಸ್ ಬಂಟ್ವಾಳ

ಮುಂಬಯಿ, ಜು.29: ಮಂಗಳೂರು (ಕರ್ನಾಟಕ) ಮತ್ತು ಅಹಮದಾಬಾದ್ (ಗುಜರಾತ್) ರೈಲು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪಶ್ಚಿಮ ರೈಲ್ವೇ ಇಲಾಖೆಯು ತನ್ನ ಒಡೆತನದ ರೈಲು ಸಂಖ್ಯೆ ೦೯೪೨೪ ಮತ್ತು ೦೯೪೨೩ ಯಾನಗಳನ್ನು ಅಹಮದಾಬಾದ್-ಮಂಗಳೂರು ಜಂಕ್ಷನ್-ಅಹಮದಾಬಾದ್ (ಎಡಿಐ-ಎಂಎಜೆಎನ್-ಎಡಿಐ) ‘ವೀಕ್ಲಿ ಟ್ರೈನ್ ಆನ್ ಡಿಮ್ಯಾಂಡ್’ ವಿಶೇಷ ರೈಲು ಸಂಚಾರ ಅವಧಿಯನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಚಾಲ್ತಿಯಲ್ಲಿರುವ ಸಂಯೋಜನೆ ಮತ್ತು ವೇಳಾಪಟ್ಟಿಯಂತೆಯೇ ಈ ರೈಲುಗಳು ಸಂಚರಿಸಲಿವೆ. ಈ ಹಿಂದೆ ಓಡುತ್ತಿದ್ದ ರೈಲು ಸಂಖ್ಯೆ ೦೯೪೨೪ ಇದರ ಕೊನೆಯ ಸಂಚಾರ ಕಳೆದ ಮೇ.೨೯ಕ್ಕೆ ನಿಗದಿಯಾಗಿತ್ತು. ಆದರೆ ಇದನ್ನು ಮತ್ತೆ ವಿಸ್ತರಿಸಲಾಗಿ ನವೀಕರಿಸಲಾದ ರೈಲು ಪ್ರಯಾಣದ ವಿವರಗಳನ್ನು ಇಲಾಖೆ ಪ್ರಕಟಿಸಿದೆ.ರ

ರೈಲು ಸಂಖ್ಯೆ ೦೯೪೨೪ (ಅಹಮದಾಬಾದ್ – ಮಂಗಳೂರು ಜಂಕ್ಷನ್) ಪ್ರತಿ ಶುಕ್ರವಾರದಂತೆ ಜುಲೈ.೦೩ ರಿಂದ ಜುಲೈ.೩೧ರ ವರೆಗೆ ಒಟ್ಟು ೫ ಟ್ರಿಪ್‌ಗಳ ಅವಧಿಗೆ ವಿಸ್ತರಿಸಲಾಗಿದೆ. ಅಂತೆಯೇ ರೈಲು ಸಂಖ್ಯೆ ೦೯೪೨೩ (ಮಂಗಳೂರು ಜಂಕ್ಷನ್ – ಅಹಮದಾಬಾದ್) ಪ್ರತಿ ಶನಿವಾರದಂತೆ ಜುಲೈ.೦೪ ರಿಂದ ಆಗಸ್ಟ್ ೦೧ರ ವರೆಗೆ ಒಟ್ಟು ೫ ಟ್ರಿಪ್‌ಗಳ ಅವಧಿಗೆ ವಿಸ್ತರಿಸಿದೆ.ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ವಲಯದಲ್ಲಿ ಪರಿಷ್ಕೃತ ವೇಳಾಪಟ್ಟಿ ನೀಡಿದ್ದು, ಅಹಮದಾಬಾದ್‌ನಿಂದ ರೋಹಾ ನಡುವೆ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ರೋಹಾದಿಂದ ಮಂಗಳೂರು ಜಂಕ್ಷನ್ ನಡುವಿನ ಉಭಯ ದಿಕ್ಕುಗಳ ನಿಲ್ದಾಣಗಳಲ್ಲಿ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ.

ರೈಲು ಸಂಖ್ಯೆ ೦೯೪೨೪ (ಅಹಮದಾಬಾದ್-ಮಂಗಳೂರು ಜಂಕ್ಷನ್) ಪ್ರತೀ ಶುಕ್ರವಾರ ೦೪.೦೦ ಗಂಟೆಗೆ ಅಹಮದಾಬಾದ್‌ನಿಂದ ಹೊರಟು ನಡಿಯಾದ್ (೦೪:೫೫), ಆನಂದ್ (೦೫:೧೨), ಬರೋಡ (೦೫:೪೫), ಬರೂಚ್ (೦೬:೪೭), ಸೂರತ್ (೦೭:೩೫), ವಾಪಿ (೦೯:೧೦) ಮಾರ್ಗವಾಗಿ ವಸಾಯಿ (೧೧:೧೦) ಮಹಾರಾಷ್ಟ್ರಕ್ಕೆ ಪ್ರವೇಶಿಸಲಿದೆ. ನಂತರ ಭಿವಂಡಿ (೧೧:೪೨), ಶನಿವಾರ ಮುಂಜಾನೆ ಪನ್ವೇಲ್ (೧೨:೫೫), ಪೆಣ್ (೦೧:೪೦), ರೋಹ (೦೨:೨೦), ಮಾನ್ಗಾಂವ್ (೦೨:೪೬), ಖೇಡ್ (೦೪:೧೦), ಚಿಪ್ಲೂಣ್ (೦೪:೫೦), ಸಾವರ್ಡಾ (೦೫:೧೮), ಸಂಗಮೇಶ್ವರ ರೋಡ್ (೦೫:೪೮), ರತ್ನಗಿರಿ (೦೭:೦೦), ರಾಜಾಪುರ ರೋಡ್ (೦೮:೨೦), ವೈಭವ್‌ವಾಡಿ ರೋಡ್ (೦೮:೩೮) , ಕಂಕಾವಲಿ (೦೯:೧೮), ಸಿಂಧುದುರ್ಗ (೦೯:೪೦), ಕುಡಾಲ್ (೦೯:೫೪), ಸಾವಂತವಾಡಿ ರೋಡ್ (೧೦:೧೬) ಮೂಲಕ ಥಿವಿಮ್ (೧೧:೧೮) ಗೋವಾಕ್ಕೆ ಪ್ರವೇಶಿಸಲಿದೆ.ನಂತರ

ನಂತರ ಕರ್ಮಾಲಿ (೧೧:೪೮), ಮಡ್ಗಾಂವ್ ಜಂಕ್ಷನ್ -ಗೋವಾ (೦೧:೦೦), ಕಾಣಕೋಣ (೦೧:೫೦) ಮೂಲಕ ಕಾರವಾರ (೦೨:೨೮) ಕರ್ನಾಟಕಕ್ಕೆ ಪ್ರವೇಶಿಸಲಿದ್ದು, ಮುಂದೆ ಅಂಕೋಲಾ (೦೨:೫೪), ಗೋಕರ್ಣ ರೋಡ್ (೦೩:೦೬), ಕುಮಟಾ (೦೩:೪೦), ಮುರುಡೇಶ್ವರ (೦೪:೪೦), ಭಟ್ಕಳ (೦೫:೧೦), ಮೂಕಾಂಬಿಕಾ ರೋಡ್ ಬೈಂದೂರು(೦೫:೨೪), ಕುಂದಾಪುರ (೦೬:೦೦), ಉಡುಪಿ (೦೬:೩೮), ಮುಲ್ಕಿ (೦೭:೩೦), ಸುರತ್ಕಲ್ (೦೭:೪೬), ತೋಕೂರು (೦೮:೨೦) ಮಾರ್ಗವಾಗಿ ಶನಿವಾರ ರಾತ್ರಿ ೦೯:೦೦ ಗಂಟೆಗೆ ಮಂಗಳೂರು ಜಂಕ್ಷನ್ ತಲುಪುವುದು.

ರೈಲು ಸಂಖ್ಯೆ ೦೯೪೨೩ (ಮಂಗಳೂರು ಜಂಕ್ಷನ್-ಅಹಮದಾಬಾದ್) ಪ್ರತೀ ಶನಿವಾರ ರಾತ್ರಿ ೧೦.೩೦ ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು ತೋಕೂರು (೧೧:೧೫), ಸುರತ್ಕಲ್ (೧೧:೨೨), ಮುಲ್ಕಿ (೧೧:೩೨), ಉಡುಪಿ (೧೨:೧೦), ಕುಂದಾಪುರ (೧೨:೩೨), ಮೂಕಾಂಬಿಕಾ ರೋಡ್ ಬೈಂದೂರು (೦೧:೦೦), ಭಟ್ಕಳ (೦೧:೧೨), ಮುರುಡೇಶ್ವರ (೦೧:೩೪), ಕುಮಟಾ (೦೨:೧೮), ಗೋಕರ್ಣ ರೋಡ್ (೦೨:೪೪), ಅಂಕೋಲಾ (೦೨:೫೬), ಕಾರವಾರ (೦೩:೩೦), ಕಾಣಕೋಣ (೦೪:೧೦), ಮಡ್ಗಾಂವ್ ಜಂಕ್ಷನ್ – ಗೋವಾ (೦೫:೧೦), ಕರ್ಮಾಲಿ (೦೫:೫೦), ಥಿವಿಮ್ (೦೬:೧೨), ಸಾವಂತವಾಡಿ ರೋಡ್ (೦೬:೪೦), ಕುಡಾಲ್ (೦೭:೧೦), ಸಿಂಧುದುರ್ಗ (೦೭:೨೨), ಕಂಕಾವಲಿ (೦೭:೪೪), ವೈಭವ್‌ವಾಡಿ ರೋಡ್ (೦೮:೨೦), ರಾಜಾಪುರ ರೋಡ್ (೦೮:೪೦), ರತ್ನಗಿರಿ (೧೦:೩೦), ಸಂಗಮೇಶ್ವರ ರೋಡ್ (೧೧:೧೮೦), ಸಾವರ್ಡಾ (೧೧:೪೦), ಚಿಪ್ಲೂಣ್ (೧೨:೧೮), ಖೇಡ್ (೧೨:೫೦), ಮಾನ್ಗಾಂವ್ (೦೨:೪೮), ರೋಹ (೦೩:೪೦), ಪೆಣ್ (೦೪:೧೦), ಪನ್ವೇಲ್ (೦೪:೫೦), ಭಿವಂಡಿ (೦೬:೦೦), ವಸಾಯಿ (೦೬:೩೫), ವಾಪಿ (೦೮:೧೮), ಸೂರತ್ (೦೯:೫೫), ಬರೂಚ್ (೧೦:೪೬), ಬರೋಡ (೧೧:೪೫), ಆನಂದ್ (೧೨:೩೨), ನಡಿಯಾದ್ (೧೨:೪೯) ಮಾರ್ಗವಾಗಿ ಮಾರನೇ ದಿನ ಅಂದರೆ ಶನಿವಾರ ಮುಂಜಾನೆ ೦೨:೧೫ ಗಂಟೆಗೆ ಅಹಮದಾಬಾದ್‌ಗೆ ತಲುಪಲಿದೆ.

ರೈಲ್ವೇ ಯಾತ್ರಿ ಸೇವಾ ಸಂಘ (ರಿ.) ಬೊರಿವಲಿ-ಮುಂಬಯಿ ಸಂಸ್ಥೆಯ ಗೌರವಾಧ್ಯಕ್ಷ ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ, ಗುಜರಾತ್ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷ ದಯಾನಂದ ಬೋಂಟ್ರ, ಸ್ಥಾಪಕ ರೂವಾರಿ ಮೋಹನ್ ಸಿ. ಪೂಜಾರಿ ಅಹ್ಮದಾಬಾದ್,ಅಧ್ಯಕ್ಷ ಹರೀಶ್ ವಿ.ಪೂಜಾರಿ ಮಡ್ಯಾರ್, ತುಳು ಐಸಿರಿ ವಾಪಿ ಇದರ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷ ನವೀನ್ ಶೆಟ್ಟಿ, ಕರ್ನಾಟಕ ಸಮಾಜ ಸೂರತ್ ಮಾಜಿ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಉದ್ಯಮಿ ವೆಂಕಟೇಶ್ ಎಸ್.ಪೂಜಾರಿ ಇರುವೈಲು (ಸಿಲ್ವಾಸ) ಸೇರಿದಂತೆ ಅನೇಕ ಗಣ್ಯರು ಈ ಸೇವೆಯನ್ನು ಸ್ವಾಗತಿಸಿದ್ದಾರೆ. ಪಶ್ಚಿಮ

ರೈಲ್ವೇ ಇಲಾಖೆಯು ಗುಜರಾತ್, ಮಹಾರಾಷ್ಟ್ರ, ಗೋವಾ ಕರ್ನಾಟಕದ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ್ದು ಅಹಮದಾಬಾದ್ – ಮಂಗಳೂರು ಜಂಕ್ಷನ್ ರೈಲುಯಾನ ಮತ್ತೆ ವಿಸ್ತಾರಿಸಿದೆ. ಈ ಸೇವೆಯು ನಾಲ್ಕು ರಾಜ್ಯಗಳ ಪ್ರಯಾಣಿಕರಿಗೆ (ವಿಶೇಷವಾಗಿ ತುಳು-ಕನ್ನಡಿಗರಿಗೆ) ವರವಾಗಲಿದೆ. ತುಳು-ಕನ್ನಡಿಗರಿಗರು ಬರೇ ಒಂದೆರಡು ರೈಲುಗಳನ್ನೇ ಅವಲಂಬಿಸದೆ ಇಂತಹ ಸೇವೆಗಳ ಪ್ರಯೋಜವನ್ನು ಪಡೆಯಬೇಕು. ಆವಾಗಲೇ ರೈಲ್ವೇ ಇಲಾಖೆಯ ಪ್ರಯತ್ನಗಳು ಸಫಲಗೊಂಡು ಇಂತಹ ರೈಲುಯಾನಗಳನ್ನು ಖಾಯಂ ಗೊಳಿಸಲು ಸಾಧ್ಯವಾಗುವುದು ಎಂದು ತಿಳಿಸಿದ್ದಾರೆ.

Related posts

ಬಂಟವಾಳ ಬಂಟರ ಸಂಘದ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವಕ್ಕೆ ಚಾಲನೆ:

voiceoftulunadu

ಪ್ರಧಾನಿ ನರೇಂದ್ರ ಮೋದಿಯವರ 4,399 ದಿನಗಳ ಯಶಸ್ವಿ ಆಡಳಿತ ನಿರ್ವಹಣೆಯ ಹಿನ್ನೆಲೆ; ಬಿಜೆಪಿ ಮಂಗಳೂರು ನಗರ ಮಂಡಲದ ವತಿಯಿಂದ ಶ್ರೀ ಕ್ಷೇತ್ರ ಕದ್ರಿಯಲ್ಲಿ ವಿಶೇಷ ರಂಗ ಪೂಜೆ:

voiceoftulunadu

ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯಲ್ಲಿ 2027 ರ ಫೆ. 23 ರಿಂದ 28 ರ ತನಕ ನವೀಕರಣ ಬ್ರಹ್ಮಕಲಶೋತ್ಸವದೊಂದಿಗೆ ಅತ್ಯಪೂರ್ವ ತೆಪ್ಪೋತ್ಸವ;

Voiceoftulunadu

Leave a Comment