27 C
ಮಂಗಳೂರು
July 6, 2026
Uncategorizedಆರೋಗ್ಯಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಪರಿಸರಸ್ನೇಹಿ ವಸ್ತುಗಳ ಮಾರಾಟ ಶಾಪ್ “ವೀಕೆ ಸೊಲ್ಯೂಷನ್ಸ್” ಶುಭಾರಂಭಮಳಿಗೆ ಉದ್ಘಾಟಿಸಿದ ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿ;

ವರದಿ /ಚಿತ್ರ; ಈ ಮೀಡಿಯಾ

ಉಡುಪಿ: ಜೋಳದ ಹಿಟ್ಟು ಮತ್ತು ಮರಗೆಣಸನ್ನು ಉಪಯೋಗಿಸಿ ಮಾಡಲ್ಪಟ್ಟ ಪರಿಸರಸ್ನೇಹಿ ಚೀಲ ಸಹಿತ ಇನ್ನಿತರ ವಸ್ತುಗಳ ಸಗಟು ಮತ್ತು ಬಿಡಿ ಮಾರಾಟ ಮಳಿಗೆ ‘ವೀಕೆ ಸೊಲ್ಯೂಷನ್ಸ್’ ಶುಕ್ರವಾರ ನಗರದ ಕಲ್ಪನಾ ಟಾಕೀಸ್ ಎದುರಿನ ಕಂಫರ್ಟ್ ಟವರ್ನ ಶಾಪ್ ನಂ. 25 ರಲ್ಲಿ ಶುಭಾರಂಭಗೊಂಡಿತು!

ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿಯವರು ಉದ್ಘಾಟಿಸಿ, ದೈನಂದಿನ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಈಗ ಅನಿವಾರ್ಯವಾಗಿದೆ. ಪ್ಲಾಸ್ಟಿಕ್ ಇಲ್ಲದೆ ಜೀವನವಿಲ್ಲ. ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಬಹಳಷ್ಟು ದುಷ್ಪರಿಣಾಮ ಇದ್ದು, 80ರ ದಶಕದ ಅನಂತರ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಮರುಬಳಕೆಗಾಗಿ

ಬಂದ ಪ್ಲಾಸ್ಟಿಕ್ ಅನ್ನು ಈಗ ಬಳಸಿ ಬಿಸಾಡುತ್ತಿದ್ದೇವೆ. ಇದು ಮನುಷ್ಯ, ಪ್ರಾಣಿ, ಪಕ್ಷಿ ಸಹಿತ ಇಡೀ ಪ್ರಕೃತಿಗೆ ಮಾರಕವಾಗುತ್ತಿದೆ. ದೇಶ, ರಾಜ್ಯ, ಸಮಾಜ ಪ್ಲಾಸ್ಟಿಕ್ ಮುಕ್ತವಾಗಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ ಎಂದರು.

ಉಜ್ವಲ್ ಗ್ರೂಪ್ನ ಎಂಡಿ ಅಜೇಯ ಪಿ. ಶೆಟ್ಟಿ ಮಾತನಾಡಿ, ಉದ್ಯಮ ಆರಂಭಿಸುವಾಗ ಶ್ರಮ ತುಂಬಾ ಇರಲಿದೆ. ಮೌಲ್ಯಯುತ ಉತ್ಪನ್ನ ನೀಡುವ ಜತೆಗೆ ಸಂರಕ್ಷಣೆಯ ಸುಸ್ಥಿತರ ಭವಿಷ್ಯದ ಹಿನ್ನೆಲೆಯಲ್ಲಿ ವೀಕೆ ಸೊಲ್ಯೂಷನ್ಸ್ ಕಲ್ಪನೆಗೆ ಶುಭವಾಗಲಿ ಎಂದರು.

ಸಂಸ್ಥೆಯ ಮಾಲಕರಾದ ವಿದ್ಯಾ ಸರಸ್ವತಿ ಮತ್ತು ಕಾರ್ತಿಕ್ ಶಾಸ್ತ್ರೀ ಸಂಸ್ಥೆಯ

ಉದ್ದೇಶವನ್ನು ವಿವರಿಸಿದರು.

ಬಯೋ ಸ್ನೇಹಿ ಅರ್ಥ್ ರ್ಕೇ. ಲಿ. ನ ಎಂಡಿ ಮನೋಹರ ಬಿ. ಎಂ., ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕ ಯು. ವಿಶ್ವನಾಥ ಶೆಣೈ, ಕರ್ನಾಟಕ ಬ್ಯಾಂಕ್ ನ ಎಜಿಎಂ ರಮೇಶ್ ವೈದ್ಯ, ನಿವೃತ್ತ ಪ್ರಾಂಶುಪಾಲ ಪ್ರೊ. ದಯಾನಂದ ಶೆಟ್ಟಿ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಪ್ರಮುಖರಾದ ಸಂಜಯ್ ಕಶ್ಯಪ್, ಜಯಲಕ್ಷ್ಮೀ, ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

Related posts

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರಿಂದ ಬೆಳ್ತಂಗಡಿಯಲ್ಲಿನ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನಾ ಸಮಾರಂಭ:

Voiceoftulunadu

ಎರ್ಮಾಳು ಶ್ರೀನಿಧಿ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ: ಪಡುಬಿದ್ರಿ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ರಾಜಶ್ರೀ ಕಿಣಿ ಉಪಸ್ಥಿತಿ;

Voiceoftulunadu

ಉಡುಪಿ: ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರವಿಶ್ವ ಪತ್ರಿಕಾ ಪುರಸ್ಕಾರ: ಬಾಲಕೃಷ್ಣ ಪೂಜಾರಿ ಉಚ್ಚಿಲ, ಶಶಿಧರ ಮಾಸ್ತಿಬೈಲು, ರಾಮ್ ಅಜೆಕಾರ್;

Voiceoftulunadu

Leave a Comment