September 6, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಗೋಕುಲ ಸಂಕುಲದಲ್ಲಿನ ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಆಚರಿಸಲ್ಪಟ್ಟ ಶ್ರೀಕೃಷ್ಣ ಜನ್ಮಾಷ್ಟಮಿ : ಶ್ರೀಕೃಷ್ಣನ ಅನುಗ್ರಹ ಪರಮ ಪುಣ್ಯದಾಯಕವಾದುದು : ಪುತ್ತಿಗೆ ಸುಗುಣೇಂದ್ರ ತೀರ್ಥರು ;

ವರದಿ/ ಚಿತ್ರ : ರೋನ್ಸ್ ಬಂಟ್ವಾಳ್

ಮುಂಬಯಿ : ಸಯಾನ್ ಪೂರ್ವದನಲ್ಲಿನ ಗೋಕುಲ ಸಂಕುಲದಲ್ಲಿ ಪ್ರತಿಷ್ಠಾಪಿತ ನೂತನ ಶಿಲಾಮಯ ಶ್ರೀ ಗೋಪಾಲಕೃಷ್ಣನ ಸನ್ನಿಧಾನದಲ್ಲಿ ಇಂದಿಲ್ಲಿ ಶನಿವಾರ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್‌ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ-ಗೋಕುಲ) ಸಂಭ್ರಮ ಸಡಗರದೊಂದಿಗೆ ವಿಟ್ಲ್ಲ ಪಿಂಡಿ, ಕೃಷ್ಣ ಲಿಲೋತ್ಸವ ನೆರವೇರಿಸಿ ಸಾಂಪ್ರದಾಯಿಕ ಮತ್ತು ಶ್ರದ್ಧಾಪೂರ್ವಕವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿತು.

ಇಂದಿಲ್ಲಿ ಶನಿವಾರ ಪೂರ್ವಾಹ್ನ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ (ಉಡುಪಿ ಶ್ರೀ ಪುತ್ತಿಗೆ ಮಠ) ಇದರ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಅಪರಾಹ್ನ ಗೋಕುಲಕ್ಕೆ ಚಿತ್ತೈಸಿ ಸನ್ನಿಧಾನದಲ್ಲಿನ ಗೋಪಾಲಕೃಷ್ಣ ದೇವರ ದರ್ಶನ ಪಡೆದು ಆರತಿ ನೆರವೇರಿಸಿ ನೆರೆದ ಭಕ್ತಾದಿಗಳನ್ನು ಹರಸಿದರು.ಸಂಸ್ಕೃತ ಭಾಷೆಯು ದೇವಭಾಷೆ ಮತ್ತು ಅಂತರ್‌ದೇಶಿಯ ಭಾಷೆಯಾಗಿದೆ. ಆದ್ದರಿಂದ ದೇವರನ್ನು ಸಮೀಪಿಸು ವ ಭಾಷೆ ಎಂದೆಣಿಸಿ ದೇವಪೂಜಾ ಸರ್ವಶ್ರೇಷ್ಠ ಭಾಷೆಯಾಗಿದೆ. ಸಂಸ್ಕೃತಿಯು ಮಹಿಮಯುತವಾಗಿದ್ದು ಇದರ ಅಭ್ಯಾಸ, ಅಧ್ಯಯನವಾಗಲಿ.

ಶ್ರೀಕೃಷ್ಣನ ಭಗವಾದ್ಗೀತೆ ಅರಿತ ಭಕ್ತರೇ ಸರ್ವಶ್ರೇಷ್ಠರಾರಾಗಿರುತ್ತಾರೆ. ಇಂತಹ ಕೃಷ್ಣನು ಮುಂಬಯಿ ಕೇಂದ್ರಿತ ಸಯನ್‌ನ ಗೋಕುಲದಲ್ಲಿ ನೆಲೆಯಾಗಿ ಈ ಸಡಗರಕ್ಕೆ ನಾಂದಿಯಾಗಿದ್ದು ಇದು ನೆರೆದ ಸದ್ಭಕ್ತರ ಭಾಗ್ಯವಾಗಿದೆ ಎಂದು ಯತಿಕುಲ ಚಕ್ರವರ್ತಿ ಪುತ್ತಿಗೆಶ್ರೀ ಸುಗುಣೇಂದ್ರ ತೀರ್ಥರು ನುಡಿದರು.ಬಿಎಸ್‌ಕೆಬಿಎ ಅಧ್ಯಕ್ಷೆ ಶೈಲಿನಿ ಎ.ರಾವ್ ಮತ್ತು ಡಾ| ಅರುಣ್ ರಾವ್ ದಂಪತಿ ಪದಾಧಿಕಾರಿಗಳನ್ನೊಳಗೊಂಡು ಶ್ರೀಗಳವರನ್ನು ಕುಂಭಪೂರ್ಣ ಸ್ವಾಗತಗೈದು ಗೋಕುಲ ಸನ್ನಿಧಿಗೆ ಬರಮಾಡಿ ಕೊಂಡು ಶ್ರೀಗಳವರ ಪಾದಪೂಜೆ ನೆರವೇರಿಸಿದರು.

ಬಿಎಸ್‌ಕೆಬಿಎ ಮಾಜಿ ಉಪಾಧ್ಯಕ್ಷ ವಾಮನ ಹೊಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅನಂತ ಪದ್ಮನಾಭನ್ ಕೆ.ಪೊತಿ ಕೃತಜ್ಞತೆ ಸಲ್ಲಿಸಿದರು.ಬಿಎಸ್‌ಕೆಬಿಎ ಅಧ್ಯಕ್ಷೆ ಶೈಲಿನಿ ಎ.ರಾವ್, ನಿಕಟಪೂರ್ವ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷ ಕೆ.ರಾಜಾರಾಮ್ ಆಚಾರ್ಯ (ಆಶ್ರಯ, ಹಿರಿಯ ಆರೈಕೆ ಕೇಂದ್ರ ಸಮಿತಿ ಕಾರ್ಯಧ್ಯಕ್ಷ), ಗೌರವ ಕಾರ್ಯದರ್ಶಿ ಅನಂತ ಪದ್ಮನಾಭನ್ ಕೆ.ಪೊತಿ, ಗೌರವ ಕೋಶಾಧಿಕಾರಿ ಗಣೇಶ್ ಭಟ್ (ಸಂರಕ್ಷಕ ನಿರ್ವಹಣಾ ಸಮಿತಿ ಸಂಚಾಲಕ), ಗೌರವ ಜೊತೆ ಕಾರ್ಯದರ್ಶಿಗಳಾದ ಪ್ರಶಾಂತ್ ಆರ್.ಹೆರ್ಲೆ (ಆಶ್ರಯ ಜೊತೆ ಕಾರ್ಯದರ್ಶಿ) ಮತ್ತು ನ್ಯಾಯವಾದಿ ಎಲ್ಲೂರು ಗುರುರಾಜ್ ಭಟ್, ಮಹಿಳಾ ವಿಭಾಗದ ಸಂಚಾಲಕಿ ಸ್ಮೀತಾ ಎ.ಭಟ್, ಯುವ ವಿಭಾಗದ ಸಂಚಾಲಕಿ ಕು| ಶ್ರೀಲಕ್ಷಿ ಎಸ್. ಉಡುಪ, ಗೋಕುಲ ಭಜನಾ ಮಂಡಳಿ ಸಮಿತಿ ಮತ್ತು ಮಾಧ್ಯಮ ಸಂಚಾಲಕಿ ಐ.ಕೆ. ಪ್ರೇಮಾ ಸುಬ್ರಹ್ಮಣ್ಯ ರಾವ್, ಆಹಾರ ಸಮಿತಿ ಹಾಗೂ ಗೋಕುಲ ಸಾಂಸ್ಕೃತಿಕ ತರಬೇತಿ ಕೇಂದ್ರ ಸಮಿತಿ ಸಂಚಾಲಕಿ ಡಾ| ಸಹನಾ ಎ.ಪೊತಿ, ಗೋಕುಲ ಕಲಾವೃಂದದ ಸಂಚಾಲಕಿ ನ್ಯಾಯವಾದಿ ಗೀತಾ ಎಲ್.ಭಟ್, ವಿದ್ಯಾನಿಧಿ ಮತ್ತು ಶಾಲಾ ದತ್ತು ಸಮಿತಿ ಸಂಚಾಲಕಿ ವಿದ್ಯಾ ರಾವ್ ಖಾರ್, ವಲಯ ಚಟುವಟಿಕೆಗಳ ಸಮಿತಿ ಹಾಗೂ ಆಶ್ರಯ ಸಮಿತಿ ಸಂಚಾಲಕಿ ಚಂದ್ರಾವತಿ ಕೆ.ರಾವ್, ಗ್ರಂಥಾಲಯ ಮತ್ತು ದಾಖಲೆ ಸಂಗ್ರಹಣಾ ಸಮಿತಿ ಸಂಚಾಲಕ ಕೆ.ಸುಬ್ಬಣ್ಣ ರಾವ್, ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಸಮಿತಿ ಸಂಚಾಲಕ ಕಾರ್ತಿಕ್ ಎಸ್.ಉಡುಪ, ಸದಸ್ಯತ್ವ ಸಮಿತಿ ಸಂಚಾಲಕ ಚಂದ್ರಶೇಖರ ಭಟ್, ವಿಶೇಷ ಆಮಂತ್ರಿತ ಸದಸ್ಯರಾದ ರಾಮಪ್ರಸಾದ್ ರಾವ್, ಜಗದೀಶ್ ಜಿ.ಆಚಾರ್ಯ ಹಾಗೂ ಪುರೋಹಿತ ಗುರುಪ್ರಸಾದ್ ಭಟ್ (ಘನ್ಸೋಲಿ), ಗೋಪಾಲ ಎಸ್.ರಾವ್, ಗೋಪಾಲ ಕೃಷ್ಣ ಟ್ರಸ್ಟ್‌ನ ಗೌರವ ಟ್ರಸ್ಟಿಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಜೆ.ಸಿ ಕುಮಾರ್, ಆರ್.ಎಲ್ ಭಟ್ ಜೆರಿಮೆರಿ ಸೇರಿದಂತೆ ಉಭಯ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರನೇಕರು, ವಾರ್ಷಿಕ ಅಷ್ಟಮಿ ಉತ್ಸವದಲ್ಲಿ ಪಾಲ್ಗೊಂಡಿದ್ದು, ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಶ್ರೀಗೋಪಾಲಕೃಷ್ಣ ದೇವರ ದರ್ಶನ ಪಡೆದ ವಿಶೇಷ ಪೂಜೆಗೈದರು.

ಶುಕ್ರವಾರ ಸಂಜೆಯಿಂದಲೇ ಜನ್ಮಾಷ್ಟಮಿ ಸಡಗರಕ್ಕೆ ಸಿದ್ಧತೆ ನಡೆಸಲಾಗಿ ಡೊಗ್ಗಾಲು ಶ್ರೀ ಕೃಷ್ಣನಿಗೆ ೧೦೮ ರಜತ ಕಲಶಾಭಿಷೇಕ, ಸ್ಯಾಕ್ಸೋಫೋನ್ ವಾದನ, ಹೆಸರಾಂತ ಶಾಸ್ತ್ರೀಯ ಹಾಗೂ ಭಕ್ತಿಗೀತೆ ಗಾಯಕಿಯರಿಂದ ಭಕ್ತಿ ಸಂಗೀತ, ದೇವರನಾಮಗಳ ಕಚೇರಿ, ವಿಷ್ಣು ಸಹಸ್ರ ನಾಮ, ಕೃಷ್ಣಾಷ್ಟೊತ್ತರ ಪಠಣೆ, ನಿಶೀಥಿನಿ ಸಮಯದಿ ಜನ್ಮಾಷ್ಠಮಿ ಪೂಜೆ, ಅರ್ಘ್ಯ ಪ್ರದಾನ ನೆರವೇರಿಸಿ ವಾರ್ಷಿಕ ಜನ್ಮಾಷ್ಟಮಿಗೆ ಮೊದಲ್ಗೊಳ್ಳಲಾಯಿತು.ಇಂದಿಲ್ಲಿ ಶನಿವಾರ ಬೆಳಿಗ್ಗೆಯಿಂದ ಪುನಃ ರಜತ ಕಲಶಾಭಿಷೇಕ, ಮಹಾ ಪೂಜೆ, ನಂತರ ಜನ್ಮಾಷ್ಟಮಿ ಮಹಾ ಅನ್ನ ಪ್ರಸಾದ ನಡೆಸಲಾಯಿತು.

ಅಪರಾಹ್ನ ಶ್ರೀ ಕೃಷ್ಣ ಲೀಲೋತ್ಸವದ ಅಂಗವಾಗಿ ಕರಿವೇಶ, ಯಕ್ಷಗಾನ ವೇಷ ಇತ್ಯಾದಿಗಳೊಂದಿಗೆ ವೈಭವದ ಪಲ್ಲಕ್ಕಿ ಉತ್ಸವ, ರಾತ್ರಿ ಮಂಗಳಾರತಿ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಉಪಹಾರ ನಡೆಸಲ್ಪಟ್ಟಿತು. ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ, ಆರ್ಚಕ ಪ್ರಸನ್ನ ಭಟ್, ರಾಮವಿಠಲ ಕಲ್ಲೂರಾಯ ಮತ್ತಿತರ ಪುರೋಹಿತರು ತಮ್ಮ ಪೌರೋಹಿತ್ಯದಲ್ಲಿ ವಿವಿಧ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಬಿ.ಆರ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ (ಉಡುಪಿ) ಪ್ರಾಯೋಜಕತ್ವದಲ್ಲಿ ದಹಿಹಂಡಿ ನಡೆಸಲಾಗಿದ್ದು ಕೃಷ್ಣಭಕ್ತರು ಪಾಲ್ಗೊಂಡು ಅದ್ದೂರಿಯಾಗಿ ಮೊಸರು ಕುಡಿಕೆ (ದಹಿ ಹಂಡಿ) ಸಂಭ್ರಮಿಸಿದರು.ವಕ್ರತುಂಡ ಸಂಗೀತ ಬಳಗವು ಇಂದಿಲ್ಲಿ ಕೊಳಲು ವಾದನ, ಗೋಕುಲ ಭಜನಾ ಮಂಡಳಿಯು ಭಜನೆ, ಆರ್ಟ್ಸ್ ಆಫ್ ಲಿವಿಂಗ್ ಬಳಗವು ಭಕ್ತಿಗೀತೆ ಪ್ರಸ್ತುತ ಪಡಿಸಿದವು. ಗೀತಾ ಎಲ್.ಭಟ್ ನಿರ್ದೇಶನದಲ್ಲಿ ಗೋಕುಲದ ಕಲಾವಿದರು ‘ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶಿಸಿತು. ಈ ಮೂಲಕ ವಾರ್ಷಿಕ ಶ್ರೀಕೃಷ್ಣೋತ್ಸವ ಸಮಾಪ್ತಿ ಗೊಂಡಿತು.

Related posts

ಈ ಸಲನೂ ಕಪ್ ನಮ್ಧೇ! ಗೆದ್ದ RCB ಗೆ ಸಿಕ್ಕ ಬಹುಮಾನ ಎಷ್ಟು?

Voiceoftulunadu

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ : ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ 2 ದಿನಗಳ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗ ಉದ್ಘಾಟಿಸಿದ ಕೇಂದ್ರ ಸಚಿವೆ

voiceoftulunadu

ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಆಶಾಕಿರಣ: ಉಡುಪಿ ಜಿಲ್ಲೆಗೆ 100 ಜ್ಞಾನ ದೀಪ ಶಿಕ್ಷಕರು ಪೂಜ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಹತ್ವಕಾಂಕ್ಷಿ ಜ್ಞಾನ ದೀಪ ಯೋಜನೆ;

Voiceoftulunadu

Leave a Comment