September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಜುಲೈ 10, 11 ಆಳ್ವಾಸ್ನಲ್ಲಿ `ಕನ್ನಡ ಗಾನ ಗುಚ್ಛ’ ವೈವಿಧ್ಯಮಯ ಹಾಡುಗಳ ವಿನೂತನ ರಂಗಪ್ರಸ್ತುತಿ: ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಸಂಯೋಜಿಸಲಿರುವ ಗಾನ ಗುಚ್ಛ;

ವರದಿ/ಚಿತ್ರ: ಈ ಮೀಡಿಯಾ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಆಶ್ರಯದಲ್ಲಿ ಜುಲೈ 10 ಮತ್ತು 11 ರಂದು ಸಂಜೆ 6.30ಕ್ಕೆ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ `ಕನ್ನಡ ಗಾನ ಗುಚ್ಛ’ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ಈ ಗಾನ ಗುಚ್ಛವನ್ನು ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಸಂಯೋಜಿಸಿದ್ದಾರೆ.

ಕನ್ನಡದ ವಿವಿಧ ಪ್ರಾಕಾರಗಳ ವೈವಿಧ್ಯಮಯ ಹಾಡುಗಳನ್ನು ರಂಗ ಸಾಧ್ಯತೆಗಳ ಮೂಲಕ ಪ್ರಸ್ತುತಪಡಿಸುವ ಎರಡು ಗಂಟೆಗಳ ವಿಶೇಷ ಕಾರ್ಯಕ್ರಮ ಇದಾಗಿದ್ದು, ತಂಡದಲ್ಲಿಡಾ. ಜೀವನ್ ರಾಂ ಸುಳ್ಯ, ಮಮತಾ ಕಲ್ಮಕಾರು, ಮನುಜ ನೇಹಿಗ ಸುಳ್ಯ, ಸಮನ್ವಿತ ಹುಬ್ಬಳ್ಳಿ, ಸತ್ಯಜಿತ್ ರಾವ್, ಸತೀಶ್ ಸುರತ್ಕಲ್, ಸಂತೋಷ್ ಉಡುಪಿ, ತೇಜಸ್ವಿನಿ ತರೀಕೆರೆ, ನಿಶ್ಮಿತಾ ಬೆಂಗಳೂರು, ವಿಸ್ಮಯ ಪೈ, ಸಿಂಚನಾ ಶೆಟ್ಟಿ ಹಾಗೂ ಕೃಪಾ ನಾಯಕ್ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮ ಇರುವುದಿಲ್ಲ ಮತ್ತು ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.

Related posts

ತುಂಬೆ: ಸೆ 6ರಂದು ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ : ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆ ;

Voiceoftulunadu

ಅನ್ನಬ್ರಹ್ಮ ಸೇವಾ ಸಮಿತಿ ಉಡುಪಿಯಿಂದ ಬಡ ಹೆಣ್ಣುಮಗಳ ಮದುವೆಗೆ ಸೀರೆಗಳ ನೆರವು ;

Voiceoftulunadu

ರಂಗದ ಮೇಲೊಂದು ಹೆಣ್ಣಿನ ಜೀವ: ಕಂತ್ತೂರಿನ ದಯಾನಂದ ಎಂಬ ಕಲಾ ತಪಸ್ವಿ!

Voiceoftulunadu

Leave a Comment