September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಪಂಚವರ್ಣ ಆಸಾಡಿ ಒಡ್ಸ್‌ : ಸಾಧಕ ಮಹಿಳಾ ಪುರಸ್ಕಾರಕ್ಕೆ ರೇಡಿಯೋ ಕುಂದಾಪ್ರದ ಜ್ಯೋತಿ ಸಾಲಿಗ್ರಾಮ ಆಯ್ಕೆಅಗಸ್ಟ್ ೯ ರಂದು ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮ;

ವರದಿ /ಚಿತ್ರ: ಈ ಮೀಡಿಯಾ

ಕೋಟ: ಕೋಟ ಪಂಚವರ್ಣ ಮಹಿಳಾ ಮಂಡಲಸಾದರಪಡಿಸುವ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ಐದನೇ ವರ್ಷದ “ಅಸಾಡಿ ಒಡ್” ಸಾಧಕ ಪುರಸ್ಕಾರಕ್ಕೆ ರೇಡಿಯೋ ಕುಂದಾಪ್ರ ಮೂಲಕ ಜನಜನಿತರಾದ ನಿರೂಪಕಿ ಜ್ಯೋತಿ ಸಾಲಿಗ್ರಾಮ ಆಯ್ಕೆ ಗೊಂಡಿದ್ದಾರೆ.

ಅಗಸ್ಟ್ 9 ರ ಭಾನುವಾರ ಬೆಳಿಗ್ಗೆ 9 ರಿಂದ ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ನಡೆಯಲಿರುವ “ಕುಂದಾಪ್ರ ಕನ್ನಡ ದಿನ’ದ ಅಂಗವಾಗಿ ಹಮ್ಮಿಕೊಳ್ಳಲಿರುವ “ಅಸಾಡಿ ಒಡ್” ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು.ವಿಶೇಷ ಆಹ್ವಾನಿತರಾಗಿ ಕುಂದಗನ್ನಡ ರಾಯಬಾರಿ ಮನು ಹಂದಾಡಿ (ಮನೋಹರ್ ಶೆಟ್ಟಿ) ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮೀಣ ತಿನಿಸುಗಳು, ಪರಿಕರ ಪ್ರದರ್ಶನ, ಸ್ಪರ್ಧೆ ಸ್ನೇಹಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.ಸ್ನೇಹಕೂಟ ಮಣೂರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕನ್ನಡ ಸೇವಾ ಸಂಘ ಪಾವಾಯಿ ವತಿಯಿಂದ ಪಸ್ಪೋಲಿ ಮುನ್ಸಿಪಲ್ ಕನ್ನಡ ಶಾಲೆಯ ರಜತ ಮಹೋತ್ಸವ ಸಂಭ್ರಮಾಚರಣೆ;

Voiceoftulunadu

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ವಿಗ್ರಹ ರಚನಾ ಕಾರ್ಯಕ್ಕೆ ಮುಹೂರ್ತ: ಕುಬೇರಾ ತಂಡಕ್ಕೆ ಶಾರದಾ ಮಾತೆ, ನವ ದುರ್ಗೆಯರ ವಿಗ್ರಹ ನಿರ್ಮಾಣಕ್ಕೆ ವೀಳ್ಯ ;

Voiceoftulunadu

ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿಯವರಿಗೆ ಕೊ. ಅ. ಉಡುಪ ಪ್ರಶಸ್ತಿ;

Voiceoftulunadu

Leave a Comment