September 5, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಬಜ್ಪೆ ಕಿನ್ನಿಪದವಿನಲ್ಲಿ ಆಪಾಯದಂಚಿನಲ್ಲಿ ಮನೆಗಳು, ಭೇಟಿ ನೀಡಿ ಪರಿಶೀಲನೆ ನಡೆಸಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸದಸ್ಯರು : ತುರ್ತು ಕ್ರಮಕ್ಕೆ ಆಗ್ರಹ;

ವರದಿ /ಚಿತ್ರ:ರೋಶನ್ ನೆಲ್ಲಿಗುಡ್ಡೆ

ಮೂಲ್ಕಿ:ಇಲ್ಲಿನ ಬಜಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಿನ್ನಿಪದವು ಪರಿಶಿಷ್ನ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿರುವ ಕೆಲವು ಮನೆಗಳು ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾಗಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಅಪಾಯ ಎದುರಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಅಲ್ಲಿರುವ ಕುಟುಂಬಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಹಾನಿಗೊಳಗಾದ ಮನೆಗಳ ದುರಸ್ತಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದೆ.

ಈ ಬಗ್ಗೆ ವೇದಿಕೆಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಬಜ್ಪೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಂತ್ರಸ್ತ ಕುಟುಂಬಗಳಿಗೆ ತುರ್ತು ನೆರವು ಒದಗಿಸಿ, ಮನೆಗಳ ದುರಸ್ತಿ ಕಾರ್ಯವನ್ನು ಆದ್ಯತೆಯ ಮೇರೆಗೆ ಆರಂಭಿಸುವಂತೆ ಮನವಿ ಮಾಡಿದ್ದಾರೆ.ನಿವಾಸಿಗಳಾದ ಮಹೇಶ್, ದಿವ್ಯ, ಪುಷ್ಪ ಹಾಗೂ ಹೊನ್ನಯ್ಯ ಅವರ ಮನೆಗಳು ದುಸ್ಥಿತಿಯಲ್ಲಿದ್ದು ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಶೀಟ್‌ನ ಹೊದಿಕೆಯನ್ನು ಹಾಕಲಾಗಿದೆ.

ಮನೆಯ ಮೇಲ್ಛಾವಣಿಗಳು ಶೀಥಿಲಾವಸ್ಥೆಯಲ್ಲಿದೆ, ಶೀಘ್ರವಾಗಿ ಇದರ ಬಗ್ಗೆ ಅಗತ್ಯ ನೆರವು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವೇದಿಕೆಯು ಆಗ್ರಹಿಸಿದೆ. ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, ದಲಿತ ಸಂಘದ ವಸಂತ್, ನಿಸಾರ್ ಕರಾವಳಿ, ಖಾದರ್ ಜರಿ, ನಜೀರ್ ಕಿನ್ನಿಪದವು, ಹಫೀಜ್ ಕೊಳಂಬೆ ಹಾಗೂ ನಾಗರಿಕರು ಇದ್ದರು.

Related posts

ಸ್ವಿಟ್ಸರ್ಲೆಂಡ್ ನ ಪ್ರತಿಷ್ಠಿತ ಡನ್ಸರ್ ಬಿಸಿನೆಸ್ ಸ್ಕೂಲ್ ನಿಂದ ಹೇಮಾವತಿ ವೀ.ಹೆಗ್ಗಡೆಗೆ ಗೌರವ ಡಾಕ್ಟರೇಟ್ ಪ್ರದಾನ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯಮಟ್ಟದ ಪುನಶ್ವೇತನಾ ಕಾರ್ಯಾಗಾರದಲ್ಲಿ ಪದವಿ ಪ್ರದಾನ;

Voiceoftulunadu

ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರದ 84ನೇ ವಾರ್ಷಿಕೋತ್ಸವ ಹಾಗೂ 34ನೇ ಕೊಂಕಣಿ ಮಾನ್ಯತಾ ದಿನಾಚರಣೆ ;

Voiceoftulunadu

ಅಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬೈ (ಎಬಿಸಿಎ)ನೂತನ ಅಧ್ಯಕ್ಷರಾಗಿ ಸಿಎ ಜಗದೀಶ್ ಬಿ. ಶೆಟ್ಟಿ ಸುರತ್ಕಲ್ ಆಯ್ಕೆ:

Voiceoftulunadu

Leave a Comment