ವರದಿ/ ಚಿತ್ರ: ಈ ಮೀಡಿಯಾ
ಕಿನ್ನಿಗೋಳಿ: ಪ್ರವಾದಿ ಮುಹಮ್ಮದ್(.) ಅವರ ಉತ್ತಮ ಗುಣ ನಡತೆಯನ್ನು ಕಂಡು ಜನರು ಆ ಕಾಲಘಟ್ಟದಲ್ಲಿ ಆಕರ್ಷಿತರಾಗಿದ್ದರು. ಇಸ್ಲಾಮಿನೆಡೆಗೆ ಇಂದು ಜಾಲತಾಣದಲ್ಲಿ ಧರ್ಮ ಸಂದೇಶಗಳನ್ನು ನೆಚ್ಚಿಕೊಳ್ಳುವವರಿಗೆ ಈ ವಿಚಾರ ತಿಳಿದಿರಬೇಕಿದೆ ಎಂದು ಸೈಯದ್ ಅಬ್ದುಲ್ ರಹ್ಮಾನ್ ಮಸೂದ್ ಅಲ್ ಬುಖಾರಿ ಕೂರತ್ ತಂಬಳ್ ತಿಳಿಸಿದರು.
ಅವರು ಇಲ್ಲಿನ ಮುಹಮ್ಮದೀಯ ಮದ್ರಸ ಗೋಳಿಜೋರದಲ್ಲಿ ಆಯೋಜಿಸಿದ ‘ಮೀಲಾದ್ ಫೆಸ್ಟ್ 2026’ ನಲ್ಲಿ ಮಾತನಾಡಿದರು.ಪ್ರವಾದಿವರ್ಯರ ಜೀವನವೇ ನಮಗೆ ಮಾದರಿ, ಅವರು ಕಲಿಸಿಕೊಟ್ಟ ಧಾರ್ಮಿಕ ಬೋಧನೆಯನ್ನು ಯಾವಅಪಪ್ರಚಾರಗಳು ನಡೆಸಿದರೂ, ನಮ್ಮ ವಿದ್ವಾಂಸರು ಹೇಳಿಯೇ ತೀರುತ್ತಾರೆ. ಧರ್ಮ ಸಂದೇಶಗಳನ್ನು ಅಪಪ್ರಚಾರಕ್ಕೆ ಮಣಿದು ನಿಲ್ಲಿಸಲಾಗದು. ಧಾರ್ಮಿಕ ವಿದ್ವಾಂಸರು ನೀಡುವ ಬೋಧನೆಯನ್ನು ಪಾಲಿಸಲೇಬೇಕೆಂಬ ಒತ್ತಾಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಪುನರೂರು ಮುಹಮ್ಮದೀಯ ಜುಮಾ ಮಸೀದಿ ಖತೀಬ್ ಮೊಹಮ್ಮದ್ ಅಶ್ರಫ್ ಸಅದಿ ದುನಾದೊಂದಿಗೆ ಉದ್ಘಾಟಿಸಿದರು.ಅಧ್ಯಕ್ಷ ಫಾರೂಕ್ ಪುನರೂರು ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭ ಸೈಯದ್ ಅಬ್ದುಲ್ ರಹ್ಮಾನ್ ಮಸೂದ್ ಅಲ್ ಬುಖಾರಿ ಕೂರತ್ ಅವರನ್ನು ಜಮಾಅತ್ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಜಿಎಂ ಪುನರೂರು ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಮಿಲನ್, ಉಪಾಧ್ಯಕ್ಷ ಉಮರ್ ಅಸಾದಿ, ಪ್ರಧಾನ ಕಾರ್ಯದರ್ಶಿ ಅಫ್ತಾಬ್ ಮಿಲನ್, ಅಮೀರ್ ಗೋಳಿಜೋರ, ಉದ್ಯಮಿ ಶಂಸುದ್ದೀನ್ ಕಲ್ಕರೆ, ಹಿದಾಯತುಲ್ಲ, ಎಂಜೆಎಂ ಕಿನ್ನಿಗೋಳಿ ಅಧ್ಯಕ್ಷ ರಫೀಕ್ ಫ್ಲವರ್, ಖತೀಬ್ ಮೊಹಮ್ಮದ್ ನೌಶಾದ್ ಅಝರಿ ಅಲ್ ಫುರ್ಖಾನಿ, ಕೆಜೆಎಂ ಗುತ್ತಕಾಡು ಖತೀಬ್ ಉಮರುಲ್ ಫಾರೂಕ್ ಸಖಾಫಿ, ಹಾಜಿ ಟಿಹೆಚ್ ಮಯ್ಯದ್ದಿ, ಎಂವೈಎಂಎ ಅಧ್ಯಕ್ಷ ಮೊಹಮ್ಮದ್ ಅಲಿ ಗೋಳಿಜೋರ, ಸಿದ್ದೀಕ್ ಪುನರೂರು ಮತ್ತಿತ್ತರರು ಉಪಸ್ಥಿತರಿದ್ದರು.
