September 6, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬೆಳಪು ಶಾಲೆಯಲ್ಲಿ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಣೆ : ನಿವೃತ್ತ ಮುಖ್ಯೋಪಾಧ್ಯಾಯ ಆದಂ ದವಳಗಿ ಸಹಿತ, ಎಲ್ಲಾ ಶಿಕ್ಷಕ ವೃಂದದವರಿಗೆ ಸನ್ಮಾನ ;

ವರದಿ/ ಚಿತ್ರ: ಈ ಮೀಡಿಯಾ

ಬೆಳಪು: ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾರು ಮತ್ತು ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಮಲ್ಲಾರು ಇಲ್ಲಿಯ ಶಾಲಾ ಎಸ್ಟಿಎಂಸಿ ಹಾಗೂ ಶಾಲಾಭಿಮಾನಿಗಳಿಂದ ವಿನೂತನ ರೀತಿಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ಶಿಕ್ಷಕರಿಗೆ ಬಹುಮಾನ ನೀಡಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯ ಆದಂ ದವಳಗಿ ಅವರನ್ನು ಮತ್ತು ಎಲ್ಲಾ ಶಿಕ್ಷಕ ವೃಂದದವರನ್ನು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಟಿಎಂಸಿ ಅಧ್ಯಕ್ಷ ಫಾರೂಕ್, ನಿವೃತ್ತ ಮುಖ್ಯೋಪಾಧ್ಯಾಯ ಆದಂ ದವಳಗಿ, ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಶ್ಯಾಮಲತಾ, ಮೌಲಾನ ಆಜಾದ್ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾ, ಶಹನವಾಜ್, ನೂರುದ್ದೀನ್ ಸಾಹೇಬ್. ಮಹೇಶ್ ಬೆಳಪು ಅಕ್ಟರ್ ಆಲಿ, ರಾಜೇಂದ್ರ ಬೆಳಪು, ಆರಿಫ್, ಆಸಿಫ್, ಗಪೂ‌ರ್, ಶಿಕ್ಷಕರು ಪೋಷಕರು, ಶಾಲಾ ಅಭಿಮಾನಿಗಳು ಉಪಸ್ಥಿತರಿದ್ದರು.

Related posts

ಮೂಡುಬಿದಿರೆ: ಫ್ರೆಂಡ್ಸ್ ಇಲೆವೆನ್ ಬೆದ್ರ ಸಂಘಟನೆಯ ನೂತನ ಸಾರಥಿಗಳಾಗಿ ರಘುವೀರ್ ದೇವಾಡಿಗ ಮತ್ತು ಅಶ್ವಿನ್ ಜೆ. ಪಿರೇರಾ ಆಯ್ಕೆ ;

Voiceoftulunadu

ಅಡ್ಯಾರ್‌ನಲ್ಲಿ ೧೧ನೇ ವರ್ಷದ ಪಟ್ಲ ಸಂಭ್ರಮ ೨೦೨೬, ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ, ಪೊಲ್ಯರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ

Voiceoftulunadu

ಕೃತಕ ಬುದ್ಧಿಮತ್ತೆ (AI): ವೈದ್ಯರಿಗೆ ನೆರವಾಗುತ್ತಿರುವ ಬುದ್ಧಿವಂತ ಸಹಾಯಕಬಂಟಕಲ್ ಕಾಲೇಜಿನ ಕೃತಕ ಬುದ್ಧಿಮತ್ತೆ ಯಂತ್ರ ಅಧ್ಯಯನ ವಿಭಾಗ ಪ್ರೊ.ಡಾ. ವಂದನಾ ಭಟ್ ಲೇಖನ ;

Voiceoftulunadu

Leave a Comment