28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಮಹಾರಾಷ್ಟ್ರ ವಿಧಾನ ಪರಿಷತ್ತ್‌ನ ಉಪ ಸಭಾಪತಿ ಸಚಿನ್ ಭಾವು ಅಹಿರೆ ಅವರನ್ನು ಅಭಿನಂದಿಸಿದ ಎನ್‌ಸಿಪಿ ಧುರೀಣ ಲಕ್ಷ ಣ ಪೂಜಾರಿ ಚಿತ್ರಾಪು ;

ವರದಿ/ ಚಿತ್ರ :ರೋನ್ಸ್ ಬಂಟ್ವಾಳ್

ಮುಂಬಯಿ, ಜು.23: ಮಹಾರಾಷ್ಟ್ರ ವಿಧಾನ ಪರಿಷತ್ತ್‌ಗೆ ನೂತನವಾಗಿ ಚುನಾಯಿತರಾದ ಉಪ ಸಭಾಪತಿ ಸಚಿನ್ ಭಾವು ಅಹಿರೆ ಅವರನ್ನು ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ, ಮುಂಬಯಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್‌ಚಂದ್ರ ಪವಾರ್), ಎನ್‌ಸಿಪಿ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ಮvತ್ತು ಬೃಹನ್ಮುಂಬಯಿ ಮಹಾನಗರ ಪಾಲಿಕಾ ಪರಿಮಂಡಳದ ೩ಕೆ ಪೂರ್ವ ಸಮಿತಿ ಸದಸ್ಯ, ಮುಂಬಯಿ ವಾಯುವ್ಯ ಜಿಲ್ಲಾ ಎನ್‌ಸಿಪಿ (ಎಸ್‌ಪಿ) ಉಪಾಧ್ಯಕ್ಷ ನಿರಂಜನ್ ಲಕ್ಷ್ಮಣ್ ಪೂಜಾರಿ, ಮುಂಬಯಿ ಎನ್‌ಸಿಪಿ (ಎಸ್‌ಪಿ) ಯುವ ಅಧ್ಯಕ್ಷ ಅಮೋಲ್ ಮೆಥ್ಲೆ ಉಪಸ್ಥಿತರಿದ್ದು ಅಭಿನಂದಿಸಿದರು.

ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಲಕ್ಷ ಣ್ ಪೂಜಾರಿ, ತಮ್ಮ ರಾಜಕೀಯ ಪಯಣದುದ್ದಕ್ಕೂ, ಸ್ಥಿರತೆ, ಜನರೊಂದಿಗೆ ಬಲವಾದ ಸಂಪರ್ಕ, ಅಧ್ಯಯನಶೀಲ ನಾಯಕತ್ವ ಮತ್ತು ಸಾಮಾನ್ಯ ಜನರು ಎದುರಿಸುವ ಸಮಸ್ಯೆಗಳ ಬಗೆಗಿನ ಸಂವೇದನಾಶೀಲತೆಯ ಮೂಲಕ ಸಚಿನ್ ಅಹಿರೇ ಅವರು ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಕಂಡುಕೊಂಡಿದ್ದಾರೆ.

ಮಹಾರಾಷ್ಟ್ರ ವಿಧಾನ ಪರಿಷತ್ತ್‌ನ ಉಪಸಭಾಪತಿಯಂತಹ ಪ್ರತಿಷ್ಠಿತ ಹುದ್ದೆಯ ಮೂಲಕ ಅವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತಾರೆ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಾರೆ ಎಂಬ ದೃಢ ವಿಶ್ವಾಸ ನಮಗಿದೆ.ಸಚಿನ್ ಅವರಿಗೆ ಅವರ ಮುಂದಿನ ಕಾರ್ಯಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುವೆ. ಅವರ ನಾಯಕತ್ವವು ಇನ್ನಷ್ಟು ಉಜ್ವಲವಾಗಿ ಬೆಳಗಲಿ ಹಾಗೂ ಅವರ ಈ ಸಮಾಜ ಸೇವೆಯು ಅಭೂತಪೂರ್ವ ಯಶಸ್ಸನ್ನು ಕಾಣಲಿ ಎಂದು ಪ್ರಾಥಿಸುತ್ತೇನೆ ಎಂದರು.

Related posts

ಉದ್ಯಾವರ ಪಾಪನಾಶಿನಿ ಸೇತುವೆಯಿಂದ ಹಾರಿ ಯುವಕ ಆತ್ಮಹತ್ಯೆ ಮಂಗಳವಾರ ಸಂಜೆ ಮೃತದೇಹ ಪತ್ತೆ;

Voiceoftulunadu

ಪ್ರಿಯದರ್ಶಿನಿ ಸೊಸೈಟಿಯ ಸಾಧನೆ ಮಾದರಿಯಾಗಿದೆ, ಗ್ರಾಹಕರ ವಿಶ್ವಾಸಗಳಿಸಿದೆ : ಯು.ಟಿ.ಖಾದರ್

voiceoftulunadu

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲ : ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಮಾಜಿ ಉಪಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ.”ಆಟಿಡೊಂಜಿ ದಿನ” ;

Voiceoftulunadu

Leave a Comment