28.5 C
ಮಂಗಳೂರು
September 4, 2026
ಜಿಲ್ಲಾ ಸುದ್ದಿರಾಜಕೀಯವಾಣಿಜ್ಯಸ್ಥಳೀಯ/ಪ್ರಾದೇಶಿಕ ಸುದ್ದಿ

ಪ್ರಿಯದರ್ಶಿನಿ ಸೊಸೈಟಿಯ ಸಾಧನೆ ಮಾದರಿಯಾಗಿದೆ, ಗ್ರಾಹಕರ ವಿಶ್ವಾಸಗಳಿಸಿದೆ : ಯು.ಟಿ.ಖಾದರ್


ಮೂಲ್ಕಿ: ಪ್ರಿಯದರ್ಶಿನಿ ಸೊಸೈಟಿಯು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿನ ಸಾಧನೆ ಇತರ ಸೊಸೈಟಿಗೆ ಮಾದರಿಯಾಗಿದೆ, ಸಮಾಜಮುಖಿ ಚಿಂತನೆಯೊಂದಿಗೆ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಿಂತನೆಯೊಂದಿಗೆ ಗ್ರಾಮದ ಪ್ರಗತಿಯಲ್ಲಿ ತನ್ನ ಪಾತ್ರ ನಿರ್ವಹಿಸುತ್ತಿದೆ ಇದರಿಂದ ಗ್ರಾಹಕರ ವಿಶ್ವಾಸಗಳಿಸಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.
ಅವರು ಹಳೆಯಂಗಡಿಯ ಹರಿಓಂ ಕಟ್ಟಡದ ಆವರಣದಲ್ಲಿ ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ೫ನೇ ವರ್ಷದ ಸಂಭ್ರಮಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿ, ಶುಭ ಹಾರೈಸಿದರು.


ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕಾರ್ನಾಡ್ ಇಮ್ಯಾಕ್ಯುಲೇಟ್ ಕನ್ವೆಷೆನ್‌ನ ಚರ್ಚ್‌ನ ಪಾಲನಾ ಸಮಿತಿಯ ಸಂಯೋಜಕ ಪೌಲ್ ರೋಸ್ ಡಿಕೋಸ್ಟ
ಮಾತನಾಡಿದರು.
ಸಿನಿಮಾ ಕ್ಷೇತ್ರದ ಸಾಧಕರಾದ ಅದ್ವಿತಿ ಶೆಟ್ಟಿ, ಗಾನ ಭಟ್, ಶಿಲ್ಪಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಸೌಂದರ್ಯ ಸ್ಪರ್ಧೆಯ ಪೋಸ್ಟರ್‌ನ್ನು ಅನಾವರಣಗೊಳಿಸಲಾಯಿತು. ಸೊಸೈಟಿಯಲ್ಲಿ ಅಳವಡಿಸಲಾದ ನೂತನ ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್ ಅನ್ನು ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊತ್ತೇಸರ ಬಿ. ಸೂರ್ಯಕುಮಾರ್ ಉದ್ಘಾಟಿಸಿದರು.
ಉದ್ಯಮಿ ಹರಿಶ್ಚಂದ್ರ ಕೆ. ಅಮೀನ್, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ವಿಜಯಕುಮಾರ್ ಸನಿಲ್, ನಿರ್ದೇಶಕರಾದ ಉಮಾನಾಥ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ. ಶೆರಿಲ್ ಅಯೋನ, ರೇಖಾ ಶೆಟ್ಟಿ, ಹರೀಶ್ ಎನ್. ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನ್ ದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಭಾನು, ಕರಿಯ ಕಾಡಿಗ ಮತ್ತಿತರರು ಇದ್ದರು.
ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಣಾಧಿಕಾರಿ ಸುದರ್ಶನ್ ವಂದಿಸಿದರು. ಸೊಸೈಟಿಯ ಕಿನ್ನಿಗೋಳಿ ಶಾಖಾ ಪ್ರಬಂಧಕಿ ಅಕ್ಷತಾ ಶೆಟ್ಟಿ ಎಂ. ಹಾಗೂ ಸೌಜನ್ಯಾ ಹೆಗ್ಡೆ, ಲೋಲಾಕ್ಷಿ, ಪ್ರಬಂಧಕ ಮೋಹನ್‌ದಾಸ್ ಪೂಜಾರಿ, ಅಂಜಲಿ ಉಳ್ಳಾಲ್ ನಿರೂಪಿಸಿದರು.
ವಿವಿಧ ಮನರಂಜನಾ ಕಾರ್ಯಕ್ರಮ ಪ್ರದರ್ಶಿಸಲಾಯಿತು.

Related posts

ಹಿಂದೂಗಳ ಧ್ವನಿ ಅಡಗಿಸುವ ಪ್ರಯತ್ನ ಖಂಡನೀಯ : ರಮಿತಾ ಸೂರ್ಯವಂಶಿ : ಪಂಜಿನ ಮೆರವಣಿಗೆಗೆ ಪುನೀತ್ ಅತ್ತಾವರ, ನರಸಿಂಹ ಮಾಣಿಯವರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ ;

Voiceoftulunadu

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಿಡ್ನಿ ಘಟಕದ ಅಧ್ಯಕ್ಷರಾಗಿ ಸುರೇಶ್ ಪೂಂಜ ನೇಮಕ ;

Voiceoftulunadu

ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿಯ5ನೇ ವರ್ಷದ ಸಂಭ್ರಮಾಚರಣೆ .

voiceoftulunadu

Leave a Comment