September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಮುಖ್ಯಮಂತ್ರಿಯವರಿಂದ ಕಂಬಳಕ್ಕೆ ವಾರ್ಷಿಕ 5 ಕೋಟಿ ಅನುದಾನದ ಭರವಸೆ: ರಾಜ್ಯ ಕಂಬಳ ಅಸೋಸಿಯೇಶನ್‌ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ ಮಾಹಿತಿ ;

ವರದಿ/ ಚಿತ್ರ: ಈ ಮೀಡಿಯಾ

ಉಡುಪಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ಮಂದಿ ವೀಕ್ಷಿಸುವ ಕಂಬಳ ಇದೀಗ ರಾಜ್ಯ ಕ್ರೀಡೆಯಾಗಿದ್ದು, ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಉತ್ತೇಜನಕ್ಕೆ ಕಂಬಳ ಕ್ರೀಡೆಯು ಪ್ರಾಮುಖ್ಯತೆ ಪಡೆದಿದೆ.ಕಂಬಳಕ್ಕೆ ನೂರಾರು ವರ್ಷದ ಇತಿಹಾಸವಿದ್ದು, ಇದೀಗ ರಾಜ್ಯ ಸರಕಾರ ಕಂಬಳಕ್ಕೆ ರಾಜ್ಯ ಮಾನ್ಯತೆ ನೀಡಿದ್ದು, ಮಾನ್ಯ ಮುಖ್ಯಮಂತ್ರಿ ಡಿ ಕೆ.ಶಿವಕುಮಾರವರು ಕಂಬಳ ಆಯೋಜನೆಗೆ ಪ್ರತಿವರ್ಷ ಬಜೆಟ್ನಲ್ಲಿ 5 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆಂದು ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಸಂಪುಟ ಸಭೆಯಲ್ಲಿ ಪ್ರಥಮ ಕಂಬಳಕ್ಕೆ ವಿಶೇಷ ಸಹಕಾರ ಹಾಗೂ ರಾಜ್ಯ ಕಂಬಳ ಅಸೋಸಿಯೇಶನ್ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಕಂಬಳವನ್ನು ಮೈಸೂರು ದಸರಾದಲ್ಲಿ ನಡೆಸುವ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದು ಕೆ.ಎಮ್.ಎಫ್ ಪ್ರಾಯೋಜಕತ್ವದಲ್ಲಿ ಕಂಬಳ ನಡೆಸಿ ರೈತರಿಗೆ ಪ್ರೋತ್ಸಾಹ ಮತ್ತು ಪ್ರಚಾರ ನೀಡುವ ಯೋಜನೆ ರೂಪಿಸಲಾಗುವುದೆಂದರು.

ಕಂಬಳಕ್ಕೆ ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಮೂಲಕ ದೊರಕುವ ಸವಲತ್ತುಗಳನ್ನುಸರಕಾರ ಭವನ ಜಾಗ ಮಂಜೂರಾತಿ, ತರಬೇತು ಒದಗಿಸುವಂತೆ, ಕಂಬಳ ನಿರ್ಮಾಣಕ್ಕೆ ಸರಕಾರಿ ಕೇಂದ್ರ ಸ್ಥಾಪನೆಗೆ ಕ್ರೀಡಾ ಇಲಾಖೆ ಸಹಭಾಗಿತ್ವ ಹಾಗೂ ರಾಜ್ಯ ಕಂಬಳ ಅಸೋಸಿಯೇಶನ್ ವಿಶೇಷ ಸ್ಥಾನಮಾನ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.

ಕಂಬಳಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ್ದಾರೆಂದು ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

Related posts

ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಇವರಿಂದ ಬಂಟಕಲ್ಲು ಶಾಲೆಗೆ ತರಕಾರಿ, ಜೀನಸು ಸಾಮಾಗ್ರಿ ಕೊಡುಗೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲಯನ್ಸ್ ಅಧ್ಯಕ್ಷೆ ಸಿಂಥಿಯಾ ಡಿ’ಸೋಜ ;

Voiceoftulunadu

ಸಯಾನ್‌ನ ಗೋಕುಲದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದ ಬಿಎಸ್‌ಕೆಬಿಎ : ಡಾ| ವೈ.ವಿ.ಮಧುಸೂದನ್ ರಾವ್ ಅವರಿಗೆ ಗೋಕುಲ ಕಲಾಶ್ರೀ ಪ್ರಶಸ್ತಿ ಪ್ರದಾನ ;

Voiceoftulunadu

ವಿಟ್ಲಪಿಂಡಿ ಪ್ರಯುಕ್ತ ರಾಜ್ಯಮಟ್ಟದ ರೀಲ್ಸ್ ಸ್ಪರ್ಧೆ : ವಿಜೇತರಿಗೆ ಆಕರ್ಷಕ ನಗದು ಬಹುಮಾನ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ;

Voiceoftulunadu

Leave a Comment