September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಸ್ಥಳೀಯ/ಪ್ರಾದೇಶಿಕ ಸುದ್ದಿ

ಮುದರಂಗಡಿ ಜನನಿ ಮಹಾಸಂಘದ ಆಯೋಜನೆಯಲ್ಲಿ ಅಪ್ಪಂದಿರ ದಿನ ಆಚರಣೆ : ಮೂವರು ಹಿರಿಯರಿಗೆ ಪೇಟ ತೊಡಿಸಿ, ಗೌರವ ಸಲ್ಲಿಸಿ ಅಪ್ಪಂದಿರ ದಿನ ಆಚರಣೆ;

ವರದಿ ಚಿತ್ರ ಇ ಮೀಡಿಯಾ

ಮುದರಂಗಡಿ: ಜನನಿ ಮಹಾಸಂಘ ಮುದರಂಗಡಿ ವತಿಯಿಂದ ಮುದರಂಗಡಿ ಚರ್ಚ್ ವ್ಯಾಪ್ತಿಯಲ್ಲಿ ಅಪ್ಪಂದಿರ ದಿನವನ್ನು ಆಚರಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಪೂಜ್ಯ ಧರ್ಮಗುರು ರೆಜಿನಾಲ್ಡ್ ಪಿಂಟೊರವರು ಮುದರಂಗಡಿ ಚರ್ಚ್ ಧರ್ಮಗುರು ಪೂಜ್ಯ ವಿನ್ಸೆಂಟ್ ಕುವೆಲ್ಲೊರವರೊಂದಿಗೆ ಕೃತಜ್ಞತಾ ಬಲಿಪೂಜೆಯನ್ನು ನೆರವೇರಿಸಿ, ಎಲ್ಲಾ ಅಪ್ಪಂದಿರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ರೆಜಿನಾಲ್ಡ್ ಪಿಂಟೋರವರು ಪ್ರಕೃತಿ, ಹೊಂಗಿರಣ, ಸ್ಪರ್ಶ ಮತ್ತು ಸ್ಪಂದನ ಪುರುಷರ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಮತ್ತು ನೂತನವಾಗಿ ಪುರುಷರಿಂದಲೇ ರಚಿಸಲ್ಪಟ್ಟ ಸಂಚಲನ ಮಹಾ ಸಂಘಮುದರಂಗಡಿಯ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಸಭಾಧಕ್ಷತೆಯನ್ನು ವಹಿಸಿದ ಸ್ಥಳೀಯ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ನ ಧರ್ಮಗುರು ಪೂಜ್ಯ ವಿನ್ಸೆಂಟ್ ಕುವೆಲ್ಲೊರವರು ಮೂವರು ಹಿರಿಯರಿಗೆ ಪೇಟ ತೊಡಿಸಿ ಗೌರವ ಸಲ್ಲಿಸಿ ಅಪ್ಪಂದಿರ ದಿನವನ್ನು ಉದ್ಘಾಟಿಸಿ ಸಂದೇಶ ನೀಡಿದರು.ಕುಟುಂಬ ಮುಖ್ಯ ಅತಿಥಿಯಾಗಿ ಉಡುಪಿ ಧರ್ಮಪ್ರಾಂತ್ಯದ ಆಯೋಗದ ಸಂಚಾಲಕರಾದ ಲೆಸ್ಲಿ ಅರೋಜಾ ತೊಟ್ಟಂರವರು ಕುಟುಂಬ ನಿರ್ವಹಣೆಯಲ್ಲಿ ಅಪ್ಪಂದಿರ ಪಾತ್ರ ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಅವರ ಜವಾಬ್ದಾರಿ ಬಗ್ಗೆ ಮಾಹಿತಿಯುಕ್ತ ಸಂದೇಶ ನೀಡಿದರು.

ಈ ಕಾರ್ಯಕ್ರಮದಲ್ಲಿ 96 ಪುರುಷರು ಹಾಗೂ 98 ಮಹಿಳೆಯರು ಉಪಸ್ಥಿತರಿದ್ದರು.

ಸಂದರ್ಭ ಚರ್ಚ್ ಪಾಲನಾಮಂಡಳಿಯ ಉಪಾಧ್ಯಕ್ಷೆ ಶ್ರೀಮತಿ ಲೂಸಿ ಡಿಸೋಜಾ, ಕಾರ್ಯದರ್ಶಿ ಶ್ರೀಮತಿ ವಿಜಯಾ ಮತಾಯಸ್, ಸಂಪದ ಸಂಸ್ಥೆಯ ಕೊ ಆರ್ಡಿನೇಟರ್ ಸ್ಪ್ಯಾನ್ಸಿ ಫೆರ್ನಾಂಡಿಸ್, ಎನಿಮೇಟರ್ ಶ್ರೀಮತಿ ನ್ಯಾನ್ಸಿ ನೊರೋನ್ಹ, ಜನನಿ ಮಹಾಸಂಘದ ಅಧ್ಯಕ್ಷೆ ಶ್ರೀಮತಿ ಪ್ರಮೋದಾ ಮತಾಯಸ್, ಸ್ವಸಹಾಯ ಸಂಘಗಳ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಪಿಂಟೊ, ಪ್ರಕಾಶ್ ಮತಾಯಸ್, ಫೆಲಿಕ್ಸ್ ಡಿಸೋಜಾ, ರೊನಾಲ್ಡ್ ಮತಾಯಸ್, ಸಂಚಲನ ಮಹಾಸಂಘದ ಅಧಕ್ಷರಾದ ಜೆಫ್ರಿ ಡಿಸೋಜಾ, ಕಾರ್ಯದರ್ಶಿ ಫ್ರಾನ್ಸಿಸ್ ಡಿಸೋಜಾ, ಖಜಾಂಚಿ ಸುನಿಲ್ ಡಿಸೋಜಾ ಉಪಸ್ಥಿತರಿದ್ದರು.

ಕಾರ್ಯದರ್ಶಿ ಎವಿನ್ ಡಿಸೋಜಾ ಸ್ವಾಗತಿಸಿದರು. ಶ್ರೀಮತಿ ಅನಿತಾ ವಾಲ್ಟರ್ ಡಿಸೋಜರವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಬರ್ಬೋಜಾ ಕೃತಜ್ಞತೆ ಸಲ್ಲಿಸಿದರು.

Related posts

ಆದಿಉಡುಪಿಯಲ್ಲಿ ಎಂ.ಜಿ. ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಮ್ ಉದ್ಘಾಟನೆ : ಧರ್ಮದರ್ಶಿ ರಮಾನಂದ ಗುರೂಜಿ ದೀಪ ಬೆಳಗಿಸಿ ಉದ್ಘಾಟನೆ;

Voiceoftulunadu

ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಧಾರ್ಮಿಕ ಚಿಂತಕ ಪಂಜ ಭಾಸ್ಕರ ಭಟ್ ಅವರಿಗೆ ವೇದವಿಭೂಷಣ ಪ್ರಶಸ್ತಿ ಪ್ರದಾನ : ಧಾರ್ಮಿಕ ನಂಬಿಕೆಯಿಂದ ಜೀವನ ಪಾವನ : ಚಂದ್ರಶೇಖರ ಸ್ವಾಮೀಜಿ;

Voiceoftulunadu

ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭಅಕಾಡೆಮಿ ಸಾಹಿತ್ಯಕ್ಕೆ ಮೀಸಲಾಗಬೇಡಿ, ಸಂಸ್ಕೃತಿ, ಸಂಸ್ಕಾರ ಪಸರಿಸಿ: ಶಾಸಕ ಉಮಾನಾಥ ಕೋಟ್ಯಾನ್

Voiceoftulunadu

Leave a Comment