27 C
ಮಂಗಳೂರು
July 6, 2026
ಕಲೆ/ಸಾಹಿತ್ಯಜಿಲ್ಲಾ ಸುದ್ದಿಸಿನಿಮಾಸ್ಥಳೀಯ/ಪ್ರಾದೇಶಿಕ ಸುದ್ದಿ

ಮೂಲ್ಕಿಯಲ್ಲಿ ಕೋಸ್ಟಲ್ ಫಿಲಂ ಅವಾಡ್ಸ್೯ 2026 ಗೆ ಚಾಲನೆ ; ತುಳು ಸಿನಿಮಾ ಬೆಳವಣಿಗೆಗೆ ಕೋಸ್ಟಲ್ ಅವಾಡ್೯ ಪ್ರೇರಣೆ:

ಮೂಲ್ಕಿ : ತುಳು ಸಿನಿಮಾ ಬೆಳವಣಿಗೆಗೆ ಕೋಸ್ಟಲ್ ಫಿಲಂ ಅವಾಡ್೯ ಪ್ರೇರಣೆಯಾಗಿದೆ.ಸತತ 5ನೇ ಬಾರಿಗೆ ಸ್ಯಾಂಡಿಸ್ ಕಂಪನಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸುತ್ತಿದೆ ಇದಕ್ಕೆ ಎಲ್ಲರ ಪ್ರೋತ್ಸಾಹ ಸಿಗಲಿ ಎಂದು ಪ್ರಸಿದ್ಧ ಮಾನವ ಸಂಪನ್ಮೂಲ ತರಬೇತಿದಾರ ಶ್ರೀ ನಾಥ ಶೆಟ್ಟಿ ಹೇಳಿದರು.ಅವರು ಮೇ 24 ರಂದು ಭಾನುವಾರ ಮೂಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್ ಕೋಲ್ನಾಡ್ ನಲ್ಲಿ ಸಂದೇಶ ರಾಜ್ ಬಂಗೇರ ಇವರ ಸಾರಥ್ಯದ ಸ್ಯಾಂಡಿಸ್ ಕಂಪನಿ ಹಾಗೂ ಸಿನಿ ಗ್ಯಾಲಕ್ಸಿ ಅಸ್ತ್ರ ಗ್ರೂಪ್ ನ ಸಹಕಾರದಲ್ಲಿ 5ನೇ ವರ್ಷದ ಕೋಸ್ಟಲ್ ಫಿಲ್ಡ್ ಅವಾಡ್ಸ್ ೯ 2026 ನ್ನು ಉದ್ಘಾಟಿಸಿ ಮಾತನಾಡಿದರು.ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಅಸ್ರ್ರ ಸಂಸ್ಥೆಯ ಲಂಚುಲಾಲ್ ಎ.ಎಸ್ ಮಾತನಾಡಿದರು.ಸತೀಶ್ ಪೂಜಾರಿ, ನೀಲಯ್ಯ ಅಗರಿ, ಶಶಿಧರ್ ಕೊಡಿಕಲ್ ಬಾಳ ಜಗನ್ನಾಥ ಶೆಟ್ಟಿ, ನಂದೀಶ್ಸದಾನಂದ ಪೂಜಾರಿ, ಎಂ.ಎಸ್.ಕೋಟ್ಯಾನ್, ಪಮ್ಮಿ ಕೊಡಿಯಾಲ್ ಬೈಲ್, ಧನ್ ರಾಜ್ ಮಂಗಳೂರು, ರಾಘವೇಂದ್ರ ರಾವ್., ಕೆಂಚನೂರು ಸೋಮನಾಥ ಶೆಟ್ಟಿ, ಸಚಿನ್ ಎ.ಎಸ್., ಮನೋಜ್ ಶೆಟ್ಟಿ ದುಬೈ, ರವಿ ರೈ ಕಳಸ, ಆರ್.ಕೆ.ಬಂಗೇರ, ಮನೋಹರ್ ಶೆಟ್ಟಿ ನಂದಳಿಕೆ , ದೇವೇಂದ್ರ ಪೂಜಾರಿ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು.ಸಂಘಟಕ ಸಂದೇಶ್ ರಾಜ್ ಬಂಗೇರ ಅತಿಥಿಗಳನ್ನು ಗೌರವಿಸಿದರು.ಶರ್ಮಿಳಾ ಅಮೀನ್ ಮತ್ತು ವಿನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ತುಳು ಚಿತ್ರರಂಗದ ದಿಗ್ಗಜ ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ಹಿರಿಯ ಮತ್ತು ಕಿರಿಯ ನಟ ನಟಿಯರು ಮತ್ತು ಇನ್ನಿತರ ಗಣ್ಯರು ಭಾಗವಹಿಸಿದ್ದರು. ತುಳು ಚಿತ್ರರಂಗದ ನಟ ನಟಿಯರಿಂದ, ಮತ್ತು ಸಿಸಿಲಿಂಗ್ ಗಾಯ್ಸ್ ತಂಡದಿಂದ ಅದ್ಭುತ ನೃತ್ಯ, ರಸಮಂಜರಿ ಹಾಗೂ ಕಾಮಿಡಿ ಕಾರ್ಯಕ್ರಮ ನಡೆಯಿತು. 2025 ರಲ್ಲಿ ತೆರೆಕಂಡಿರುವ ಒಟ್ಟು 8 ಸಿನಿಮಾಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಲೈಫ್ ಟೈಮ್ ಅಚೀವೆಂಟ್ ಅವಾರ್ಡ್ ಹಾಗೂ ವರ್ಸಟೈಲ್ ಆಕ್ಟರ್ ಅವಾಡ್೯ ಸೇರಿ ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು.

Related posts

ಅಹಮದಾಬಾದಿನಲ್ಲಿ ಪ್ರಿಯತಮನಿಗಾಗಿ 1.66 ಕೋಟಿ ಚಿನ್ನ ಕದ್ದು ಪರಾರಿಯಾದ ಹರ್ಷಿದಾ ಶೆಟ್ಟಿ ಇಬ್ಬರ ಬಂಧನ:

voiceoftulunadu

ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್:

voiceoftulunadu

ಸಾಂತಕ್ರೂಜ್ ; ಪ್ರಭಾತ್ ಕಾಲೊನಿ ಪ್ರೀಮಿಯರ್ ಲೀಗ್-2026 ಕ್ರಿಕೆಟ್ ಟೂರ್ನಮೆಂಟ್ಸಮಾಜ ಸೇವಕ ಶೇಖರ ಜೆ.ಸಾಲಿಯಾನ್‌ಗೆ ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರಧಾನ:

voiceoftulunadu

Leave a Comment