28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶಿರ್ವ ಹಿಂದೂ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ:ಅಧ್ಯಕ್ಷತೆ ವಹಿಸಿದ ಜನಜಾಗೃತಿ ಸಮಿತಿ :ಉಪಾಧ್ಯಕ್ಷೆ ಬಬಿತಾ ಜಗದೀಶ್ ಅರಸ್ ;

ವರದಿ/ ಚಿತ್ರ: ಈ ಮೀಡಿಯಾ

ಶಿರ್ವ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ಆಶ್ರಯದಲ್ಲಿ ಬೆಳ್ಳಣ್ ಯೋಜನಾಕಚೇರಿ ಸೂಡ ವಲಯ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಶಿರ್ವ ಹಿಂದೂ ಪ್ರೌಢ ಶಾಲೆಯಲ್ಲಿ ಜರುಗಿತು.ಕಾಪು ತಾಲೂಕು ಜನಜಾಗೃತಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಬಬಿತಾ ಜಗದೀಶ್ ಅರಸ್ ಅಧ್ಯಕ್ಷತೆ ವಹಿಸಿದ್ದರು.

ಶಿರ್ವ ಪೊಲೀಸ್ ಠಾಣೆಯ ಎಎಸ್‌ಐ ಮೋಹನ್ ದಾಸ್ ಮತ್ತು ಹೆಡ್ ಕಾನ್ಸೆಬಲ್ ಮಂಜುನಾಥ್ ಅವರು ಮಾದಕ ವ್ಯಸನ, ಅತಿಯಾದ ಮೊಬೈಲ್ ಬಳಕೆಯ ದುಷ್ಪರಿಣಾಮ ಮತ್ತು ಪೊಕ್ಸ್ ಕಾಯಿದೆ ಬಗ್ಗೆ ಮಾಹಿತಿನೀಡಿದರು.

ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಸಂದೇಹಗಳಿಗೆ ಉತ್ತರ ಕಂಡು ಕೊಂಡರು.ಶಿರ್ವ ಪೊಲೀಸ್ ಠಾಣೆಯ ಹೆಡ್ ಕಾನ್ಸೆಬಲ್ ರಾಜೇಶ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ವಸಂತಿ ನಾಯ್ಕ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸೇವಾಪ್ರತಿನಿಧಿ ರಜನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಜೇಸಿಐ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ. ವಲಯ ಹದಿನೈದರ ಅತಿ ಕಿರಿಯ ವಯಸ್ಸಿನ ತರಬೇತುದಾರೆ ;

Voiceoftulunadu

ಮತ್ತ್ವಗಂಧ ಎಕ್ಸ್‌ಪ್ರೆಸ್ ರೈಲು ಮೂಲಕ ಮಂಗಳೂರುಗೆ ಬಂದಿದ್ದ ಅಂಗವಿಕಲ ಅನಾಮಧೇಯ ವ್ಯಕ್ತಿಯ ಶವ ಪತ್ತೆ – ವಾರಸುದಾರರ ಮಾಹಿತಿಗೆ ಮನವಿ;

Voiceoftulunadu

ಸೌದಿ ಅರೇಬಿಯಾ ಬಿಲ್ಲವರ ಅಸೋಸಿಯೇಷನ್ : ಆ.16 ರಂದು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿತರಣೆ :

Voiceoftulunadu

Leave a Comment