28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅವಳಿ ಮಕ್ಕಳ ಅಪೂರ್ವ ಸಾಧನೆ: ದಾಖಲೆ ಪುಸ್ತಕ ಸೇರಿದ ಪುಟ್ಟ ಪ್ರತಿಭೆಗಳು ;

ವರದಿ/ ಚಿತ್ರ :ದಿತೇಶ್ ಮಂಗಳೂರು

ಮಂಗಳೂರು: ವಾಮಂಜೂರಿನ ರಿಫ್ಟಿಕ್ ಅಮೀನ್, ಕೇವಲ 4 ವರ್ಷ 11 ತಿಂಗಳ ವಯಸ್ಸಿನಲ್ಲೇ ಐದು ಸಂಪೂರ್ಣ ಸ್ತೋತ್ರಗಳನ್ನು 14 ನಿಮಿಷ 41 ಸೆಕೆಂಡ್‌ಗಳಲ್ಲಿ ಪಠಿಸುವ ಮೂಲಕ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ರಿದ್ದಿಕ್ ಅವರು ಶ್ರೀಹರಿ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕಂ, ಮಹಿಷಾಸುರ ಮರ್ದಿನಿ ಸ್ತೋತ್ರ, ರಾಮಾಷ್ಟಕಂ ಹಾಗೂ ಹನುಮಾನ್ ಚಾಲೀಸಾವನ್ನು ನಿರರ್ಗಳವಾಗಿ ಪಠಿಸಿದ್ದಾರೆ. ಪ್ರಸ್ತುತ ಅವರು ವಾಮಂಜೂರಿನ ಚೈತನ್ಯ ಶಾಲೆಯಲ್ಲಿ ಎಲ್‌ಜಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಅವಳಿ ಸಹೋ ದರಿ ರಿಧಿಮಾ ಅಮೀನ್ ಕೂಡ ವಿಶೇಷ ಸಾಧನೆ ಮಾಡಿದ್ದಾರೆ.

2025ರ ಡಿಸೆಂಬರ್ 10ರಂದು 4 ವರ್ಷ 5 ತಿಂಗಳ ವಯಸ್ಸಿನಲ್ಲಿ ಕೇವಲ 2 ನಿಮಿಷ 7 ಸೆಕೆಂಡ್‌ಗಳಲ್ಲಿ ಸಂಪೂರ್ಣ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಸ್ಮರಣಶಕ್ತಿ ಹೊಂದಿರುವ ಈ ಅವಳಿ ಮಕ್ಕಳು ಮಂತ್ರ ಹಾಗೂ ಸ್ತೋತ್ರ ಗಳನ್ನು ವೇಗವಾಗಿ ಮತ್ತು ನಿಖರ ವಾಗಿ ಪಠಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇವರ ಸಾಧನೆಗೆ ಚೈತನ್ಯ ಇನ್‌ಸ್ಟಿಟ್ಯೂಷನ್ಸ್ ವಾಮಂಜೂರು ಹಾಗೂ ಚೈತನ್ಯ ಪ್ರಿಸ್ಕೂಲ್‌ನ ಸಂಸ್ಥಾ ಪಕಿ ಮತ್ತು ಪ್ರಾಂಶುಪಾಲೆ ವಿಜೇತ ಅಮೀನ್ ಅವರ ಪ್ರೋತ್ಸಾಹವೂ ಪ್ರಮುಖ ಕಾರಣವಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಮಕ್ಕಳು ವಾಮಂಜೂರಿನ ಆನೆಗುಂಡಿ ನಿವಾಸಿ ಸುಂದರ ಸಾಲಿ ಯಾನ್ ಅವರ ಮೊಮ್ಮಕ್ಕಳು, ರಾಧಿಕಾ ಮೇಸ್ತ ಹಾಗೂ ದೇವದಾಸ್ ದಂಪತಿ ಮಕ್ಕಳು. ಅವಳಿ ಮಕ್ಕಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪ ಡಿಸಿದ್ದಾರೆ.

Related posts

ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್, ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿವಕುಮಾರ್ ಘೋಷಣೆ

Voiceoftulunadu

ವಾಟ್ಸಾಪ್‌ನಿಂದ ಬಿಗ್ ಅಪ್‌ಡೇಟ್: ಇನ್ಮುಂದೆ ಚಾಟ್ ಮಾಡಲು ನಿಮ್ಮ ಫೋನ್ ನಂಬರ್ ನೀಡಬೇಕಾಗಿಲ್ಲ!

Voiceoftulunadu

ಮೂಲ್ಕಿ ಬಳಿಯ ಕೆರೆಕಾಡಿನ ನವೀಕರಣಗೊಂಡಿದ್ದ ಸಾರ್ವಜನಿಕ ಹಿಂದೂ ರುದ್ರಭೂಮಿಯ ಅನಾವರಣವನ್ನು ನೆರವೇರಿಸಿದ ಶಾಸಕ ಉಮಾನಾಥ ಕೋಟ್ಯಾನ್ ;

voiceoftulunadu

Leave a Comment