ಬೆಂಗಳೂರು: ರಾಜ್ಯ ವಿಪ್ರ ಫೋಟೋ, ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ರಮೇಶ್ ಬಿ.ಕೆ ಸರ್ವ ಸಮ್ಮತಿಯಿಂದ ಆಯ್ಕೆಆಗಿದ್ದಾರೆ. ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಎ ಕೆ ಬಿ ಎಂ ಎಸ್ ನಲ್ಲಿ ನಡೆಯಿತು. 2026-27ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಚುನಾವಣೆಯು ಬಾಬು ಜಿ ಎಸ್ ಚುನಾವಣಾ ಅಧಿಕಾರಿ ಸಮ್ಮುಖದಲ್ಲಿಜರಗಿತು.

ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಬಿ.ಕೆ. ಅವರು ಚುನಾವಣೆಯಲ್ಲಿ ಆಯ್ಕೆಯಾದರು. ಉಪಾಧ್ಯಕ್ಷ ರಾಗಿ ಎಸ್ ರಘು, ಕಾರ್ಯದರ್ಶಿಯಾಗಿ ಪ್ರದೀಪ್ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿಯಾಗಿ ಸುಧೀರ್ ಹೆಬ್ಬಾರ್, ಕೋಶಾಧಿಕಾರಿಯಾಗಿ ಪ್ರಸನ್ನ ಕುಲಕರ್ಣಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಆರ್. ಜಿ.ಭಟ್, ಪ್ರಸನ್ನ ಎನ್ ಎಸ್, ಕಾಶಿ ಸುಬ್ರಮಣ್ಯ, ಚಂದ್ರಶೇಖರ ಎಸ್ ಆರ್, ಜೂಪಿಟರ್ ಮಂಜುನಾಥ್, ರಮೇಶ್ ಭಟ್, ಸತ್ಯಪ್ರಕಾಶ್, ರಾಘವೇಂದ್ರ ರಾವ್, ಶ್ರೀನಿವಾಸ್ ವೈಕೆ, ಆರ್ ಕೃಷ್ಣ, ಲಕ್ಷ್ಮಿಕಾಂತ್ ಆರ್ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ವಿಪ್ರ ಛಾಯಾಗ್ರಹಾಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್ ರಘುನಾಥ್ ಅವರು ವಿತರಿಸಿದರು. ಅಧ್ಯಕ್ಷ ರಮೇಶ್ ಬಿ.ಕೆ. ಅವರು ಮಾತನಾಡಿ, ರಾಜ್ಯಾದ್ಯಂತ ಇರುವ ಎಲ್ಲಾ ವಿಪ್ರ ಛಾಯಾಗ್ರಹಕರುಗಳು ಹಾಗೂ ವೀಡಿಯೋಗ್ರಾಫರ್ ಗಳು ಸದಸ್ಯರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
