ವರದಿ /ಚಿತ್ರ: ಇ ಮೀಡಿಯಾ
ಉಡುಪಿ: ರಿಲಯನ್ಸ್ ಸಮೂಹ ಸಂಸ್ಥೆಗಳ ಹಾಗೂ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಅನಂತ್ ಅಂಬಾನಿಯವರು ಭಾನುವಾರ ಸಂಜೆ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದ ಅನಂತ್ ಅಂಬಾನಿ, ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು.ಶೀರೂರು ಮಠಾಧೀಶರು ಅನಂತ್ ಅಂಬಾನಿಯವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಶಿರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪಂಡಿತ್ ಚಂದ್ರಶೇಖರ ಶರ್ಮ, ಕರ್ನಾಟಕದ ರಿಲಯನ್ಸ್ ಜಿಯೋ ವ್ಯವಸ್ಥಾಪಕ ಧನಂಜಯ ಆರ್, ಶಿವನಂದನ ಯು ಎಸ್, ಮಾಧವ ಶಾನುಭಾಗ್, ಮುಂಬಯಿ ಉದ್ಯಮಿಗಳಾದ ಜಯಪ್ರಕಾಶ್ ಶೆಟ್ಟಿ, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
