July 7, 2026
Uncategorizedಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯಸ್ಥಳೀಯ/ಪ್ರಾದೇಶಿಕ ಸುದ್ದಿ

ಎಸ್ ಬಿ ಐ ಉಡುಪಿಯ ಪ್ರಾದೇಶಿಕ ವ್ಯವಹಾರ ಕಚೇರಿ ಸಂಭ್ರಮದ ಸ್ಟೇಟ್ ಬ್ಯಾಂಕ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾದೇಶಿಕ ವ್ಯವಸ್ಥಾಪಕರಾದ ಬಿ ಪ್ರಕಾಶ್ ಅಡಿಗ;

ವರದಿ/ ಚಿತ್ರ:ಈ ಮೀಡಿಯಾ

ಉಡುಪಿ : ಭಾರತೀಯ ಸ್ಟೇಟ್ ಬ್ಯಾಂಕ್ಷಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿಯಲ್ಲಿ ಸ್ಟೇಟ್ ಬ್ಯಾಂಕ್ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಭಾರತದ ಅತಿ ದೊಡ್ಡ ಬ್ಯಾಂಕ್ಷ 200+ ವರ್ಷಗಳ ಪರಂಪರೆಯನ್ನು ಸ್ಮರಿಸಲಾಯಿತು.ಪ್ರಾದೇಶಿಕ ವ್ಯವಸ್ಥಾಪಕರಾದ ಬಿ ಪ್ರಕಾಶ್ ಅಡಿಗವರು ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು ಹಾಗೂ ಉಡುಪಿ ಜಿಲ್ಲೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ವ್ಯವಸ್ಥಾಪಕರಾದ ಅನಿಲ್ ಕುಮಾರ್, ಅಬಲಾಲ್ ದಾಸ್, ಅಕ್ಷಯ್ ಭಾಗವತ್, ಗೋವಿಂದ ಜೇನಾ, ಜಗದೀಶ್ ಕಾಮತ್, ಉಡುಪಿ ಶಾಖೆಯವಿನೋದ್ ಕುಮಾರ್ ಸಿಂಗ್, ಬ್ಯಾಂಕಿನ ನಿವೃತ್ತ ಹಿರಿಯ ಅಧಿಕಾರಿಗಳಾದ ಮಧುಸೂದನ ಭಟ್, ಸುಕುಮಾ‌ರ್, ವಿಟ್ಟಲ್ ಶೆಟ್ಟಿಗಾರ್, ರಾಘವೇಂದ್ರ ಆಚಾ‌ರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರು ಹಾಗೂ ಉಡುಪಿಯ ಖ್ಯಾತ ಚಾರ್ಟಡ್್ರ అకౌంటింటో ఆద ಅಮ್ಮುಂಜೆ ವೆಂಕಟೇಶ ನಾಯಕ್ ಮತ್ತು ಖ್ಯಾತ ವೈದ್ಯರಾದ ಗಾಂಧಿ ಆಸ್ಪತ್ರೆಯ ಡಾ. ವ್ಯಾಸರಾಜ ತಂತ್ರಿಯವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ಅಡಿಗ, 1806ರಲ್ಲಿ ಬ್ಯಾಂಕ್ ಆಫ್ ಕಲ್ಕತ್ತಾ ಆಗಿ ಆರಂಭವಾಗಿ 1955ರಲ್ಲಿ ಎಸ್ಪಿಐ ಆದ ನಮ್ಮ ಬ್ಯಾಂಕ್ ಪ್ರತಿಯೊಬ್ಬ ಭಾರತೀಯನ ಬ್ಯಾಂಕರ್ ಆಗಿದೆ.ಉಡುಪಿಯಲ್ಲಿ ನಮ್ಮ33 +ಶಾಖೆಗಳು ರೈತರು, ಮೀನುಗಾರರು, ಎಂಎಸ್‌ಎಂಇಗಳು, ಹಾಗೂ ಮಹಿಳಾ ವಿದ್ಯಾರ್ಥಿಗಳು ಸ್ವಸಹಾಯ ಗುಂಪುಗಳು ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ.

ಸ್ಟೇಟ್ ಬ್ಯಾಂಕ್ ದಿನದಂದು ಸೇವೆ, ಪಾರದರ್ಶಕತೆ, ನೈತಿಕತೆ, ಸೌಜನ್ಯ ಮತ್ತು ಸುಸ್ಥಿರತೆ ಎಂಬ ಎಸ್ಬಿಐ ಮೌಲ್ಯಗಳಿಗೆ ನಾವು ಪುನಃ ಬದ್ಧರಾಗೋಣ”ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸಿಬ್ಬಂದಿಗಳಿಗೆ ಗೌರವ, ಗ್ರಾಹಕ ಸೇವಾ ಶ್ರೇಷ್ಠತೆಯ ಪ್ರತಿಜ್ಞೆ, ಹಾಗೂ ಕೇಕ್ ಕತ್ತರಿಸುವ ಸಮಾರಂಭ ನಡೆಯಿತು.ಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿಯ ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್ ಅವರು ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಮನಿಷಾ ಕಾರ್ಯಕ್ರಮ ನಿರ್ವಹಿಸಿದರು.

Related posts

ಕಾಪು ಶ್ರೀ ಹೊಸ ಮಾರಿಗುಡಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ;ಪ್ರಾಧಿಕಾರದ ಅಧ್ಯಕ್ಷರಿಗೆ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿಯಿಂದ  ಗೌರವ:

voiceoftulunadu

ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಸಮಾನ ಮನಸ್ಕ ತಂಡ ಉಡುಪಿ ಸಹಯೋಗದ ಕಾರ್ಯಕ್ರಮ;

Voiceoftulunadu

ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ಮಹಾಸಭೆ : ಕೇಂದ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ;

Voiceoftulunadu

Leave a Comment