28.5 C
ಮಂಗಳೂರು
September 4, 2026
Uncategorizedಆರೋಗ್ಯಕೃಷಿ/ಭೌಗೋಳಿಕವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಗುಟ್ಕಾ, ಪಾನ್ ಮಸಾಲಾ, ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಹಿಂಪಡೆತ ತಂಬಾಕು ಬೆಳೆಗಾರರ ಮನವಿ ಹಿನ್ನೆಲೆಯಲ್ಲಿ ಸಿಎಂ ಡಿಕೆಶಿಯವರಿಂದ ಆದೇಶ ಹಿಂಪಡೆಯುವ ಸೂಚನೆ ;

ಬೆಂಗಳೂರು: ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ವಿತರಣೆಯನ್ನು ಸರ್ಕಾರ ನಿಷೇಧ ಹೇರಿತ್ತು, ಅಡಿಕೆ ಬೆಳೆಗಾರರ ಒತ್ತಡಕ್ಕೆ ಸರ್ಕಾರವು ಶೀಘ್ರವೇ ಈ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಸೂಚನೆ ನೀಡಿದೆ.

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಇದ್ದರಿಂದ ಬೆಳೆಗಾರರಿಗೆ ಸಾಕಷ್ಟು ನಷ್ಟವಾಗಲಿದ್ದು, ನಿಷೇದ ಆದೇಶವನ್ನು ವಾಪಸ್ ಪಡೆಯುವಂತೆ ಸಿಎಂ ಡಿಕೆಶಿವಕುಮಾ‌ರ್ ಅವರಿಗೆ ಅಡಿಕೆ ಬೆಳೆಗಾರರ ಮನವಿ ಮಾಡಿಕೊಂಡಿದ್ದರು.

ಬೆಳೆಗಾರರ ಮನವಿ ಸ್ಪಂಧಿಸಿದ ಸರ್ಕಾರ ನಿಷೇದವನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದ್ದು, ಶೀಘ್ರವೇ ಈ ಆದೇಶವನ್ನು ಹಿಂಪಡೆಯುವಂತೆ ಸಿಎಂ ಡಿಕೆ ಶಿವಕುಮಾರ್ ಸೂಚನೆನೀಡಿದರು.

ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿತ್ತು ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಉತ್ಪನ್ನಗಳ ವಿರುದ್ಧ ರಾಜ್ಯಾದ್ಯಂತ ಸಮರ ಸಾರಲಾಗಿದ್ದು, ಇವುಗಳ ಮಾರಾಟ ಮತ್ತು ವಿತರಣೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣ ನಿಷೇಧದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು.ಬೆಳೆಗಾರರ ಮನವಿ ಹಿನ್ನೆಲೆಯಲ್ಲಿ ಸಿಎಂ ಅವರು ಮಹತ್ವದ ಚರ್ಚೆ ನಡೆಸಿ, ಆದೇಶ ಹಿಂಪಡೆಯುವಂತೆ ಸೂಚಿಸಿದ್ದಾರೆ.

Related posts

ಗ್ಯಾನ್ ಜಿ ಪಾಲನ್ ಕೊಡವೂರುರವರಿಗೆ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ಪುರಸ್ಕಾರ: ಪ್ರಶಸ್ತಿ ಪತ್ರ ವಿತರಿಸಿದ ಮಂಗಲಯಾನದ ರೂವಾರಿ ಡಾ. ಸೋಮನಾಥ್;

Voiceoftulunadu

ಬಡಗುಂಡಿಯಲ್ಲಿ ಗೋವಿನ ಅವಶೇಷ, ಕರುವಿನ ಮುಖ, ತ್ಯಾಜ್ಯದ ರಾಶಿ ಪತ್ತೆದ.ಕ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ;

Voiceoftulunadu

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡೊನೊಂದಿಗೆ ಬಿಪಿಎಲ್ ಕಾರ್ಡ್ ಹೊಂದಿರುವ ಹೃದಯ ರೋಗಿಗಳಿಗೆ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಉಚಿತ ಅಂಜಿಯೋಪ್ಲಾಸ್ಟಿ ಚಿಕಿತ್ಸೆ :

voiceoftulunadu

Leave a Comment