September 4, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಡಗುಂಡಿಯಲ್ಲಿ ಗೋವಿನ ಅವಶೇಷ, ಕರುವಿನ ಮುಖ, ತ್ಯಾಜ್ಯದ ರಾಶಿ ಪತ್ತೆದ.ಕ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ;

ಬಂಟ್ವಾಳ: ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಹೆದ್ದಾರಿ ಬದಿ ಹಾಗೂ ನೀರು ಹರಿಯುವ ತೋಡಿನಲ್ಲಿ ವಧೆಗೈದ ಗೋವಿನ ಅವಶೇಷ, ತ್ಯಾಜ್ಯದ ರಾಶಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದ್ದು, ಈ ಕುರಿತು ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಧೆಗೈದ ಕರುವಿನ ಮುಖ, ಗೋವುಗಳ ಮೂಳೆ ಹಾಗೂ ಶರೀರದ ವಿವಿಧ ಅಂಗಗಳು ಹಾಗೂ ಕೋಳಿಯ ಕಾಲುಗಳ ಸಹಿತ ಸುಮಾರು ಒಂದು ಲೋಡಿನಷ್ಟು ತ್ಯಾಜ್ಯಗಳನ್ನು ಯಾವುದೋ ವಾಹನದಲ್ಲಿ ತಂದು ಮೋರಿಯ ಕೆಳಗೆ ಹರಿಯುವ ನೀರಿಗೆ ಹಾಗೂ ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.

ಮಧ್ಯರಾತ್ರಿ ಈ ಕೃತ್ಯ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಬುಧವಾರ ಬೆಳಿಗ್ಗೆ ತ್ಯಾಜ್ಯದ ರ್ದುವಾಸನೆಗೆ ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ನೀರು ಹರಿಯುವ ತೋಡು ಹಾಗೂ ಅದರ ಪಕ್ಕ ಗೋವಿನ ಹಾಗೂ ಕೋಳಿಯ ತ್ಯಾಜ್ಯಗಳು, ವಧೆಗೈದ ಒಂದು ಕರುವಿನ ಮುಖ ಕಂಡು ಬಂದಿದ್ದು, ಇದರಿಂದಾಗಿ ಸ್ಥಳೀಯರು ಆಕ್ರೋಶಿತರಾಗಿದ್ದಾರೆ.

ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಯಲ್ಲಿ ಗೋವನ್ನು ವಧೆಗೈದು ಅವುಗಳ ತ್ಯಾಜ್ಯವನ್ನು ತಂದುಇಲ್ಲಿ ಎಸೆಯಲಾಗಿದೆ. ಕರುವೊಂದರ ಮುಖ ಪತ್ತೆಯಾಗಿದ್ದು, ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತ್ತು. ಅಕ್ರಮ ಗೋವಧಾ ಕೇಂದ್ರಗಳು ಬಂಟ್ವಾಳದ ವಿವಿದೆಡೆ ನಡೆಯುತ್ತಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಮೃಧು ಧೋರಣೆ ತೋರುತ್ತಿರುವುದು ಇಂತಹ ಕೃತ್ಯಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಾವೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಸದಾನಂದ ನಾವೂರು ಅವರು ಪೊಲೀಸರಿಗೆ ಹಾಗೂ ಗ್ರಾ.ಪಂ. ಪಿಡಿಒಗೂ ಮಾಹಿತಿ ನೀಡಿದಲ್ಲದೆ ವೈಜ್ಞಾನಿಕ ಪರೀಕ್ಷೆಯ ಮೂಲಕ ಅವು ಯಾವ ಪ್ರಾಣಿಯ ಅವಶೇಷಗಳು ಎಂಬುದನ್ನು ಖಚಿತಪಡಿಸಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ.ಪಿಡಿಒ, ಪೊಲೀಸರಿಂದ ಸ್ಥಳ ಭೇಟಿ:ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು, ನಾವೂರು ಗ್ರಾ.ಪಂ.ನ 202 ಹಾಗೂ ಪಶುವೈದ್ಯಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಪಿಡಿಒ ಅವರ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ತನಿಖೆಗೆ ಆಗ್ರಹ:ಬಜರಂಗದಳ ಜಿಲ್ಲಾ ಸಹಾ ಸಂಯೋಜಕ ಸಂತೋಷ್ ಸರಪಾಡಿ ಅವರ ನೇತೃತ್ವದ ನಿಯೋಗ ಬಂಟ್ವಾಳ ಗ್ರಾಮಾಂತರ ಪೊಲೀಸರ ಮೂಲಕ ಜಿಲ್ಲಾ ಎಸ್ಪಿ ಡಾ. ಅರುಣ್ ಅವರಿಗೆ ಮನವಿ ಸಲ್ಲಿಸಿ, ಹರಿಯುವ ನೀರಿಗೆ ಗೋವಿನ ತ್ಯಾಜ್ಯ ಎಸೆದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಮತ್ತು ನೇತ್ರಾವತಿ ನದಿಯ ನೀರನ್ನು ಅಪವಿತ್ರಗೊಳಿಸುವ ಕೃತ್ಯ ನಡೆಸಲಾಗಿದ್ದು, ಇದನ್ನು ವಿ.ಹಿಂ.ಪ, ಬಜರಂಗದಳ ಸಾಧ್ಯವಿಲ್ಲ.

ನೇತ್ರಾವತಿ ನದಿಯ ನೀರು ದೇವಸ್ಥಾನಗಳ ಅಭಿಷೇಕಗಳಿಗೆ ಉಪಯೋಗಿಸಲಾಗುತ್ತಿದ್ದು, ನೀರನ್ನು ಕೂಡ ಅಪವಿತ್ರಗೊಳಿಸುವ ದುರುದ್ದೇಶದಿಂದ ಮತಾಂಧ ಶಕ್ತಿಗಳು ಈ ಕೃತ್ಯವನ್ನು ಎಸಗಿದ್ದಾರೆ. ಸಹಿಸಲು ಈಯಾರೋ ವ್ಯಕ್ತಿಗಳು ನಮ್ಮ ಶ್ರದ್ದಾಬಿಂದುವಾದ ಗೋವನ್ನು ಅಕ್ರಮವಾಗಿ ವಧೆಗೈದು ಅದರ ಮೂಳೆ, ಕಿವಿ, ಕರುಳು, ಕರುವಿನ ಮುಖ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ತಂದು ಎಸೆದಿರುವುದು ಕಂಡುಬಂದಿದ್ದು, ಈ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

Related posts

ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ: ಸೇವಾಪತ್ರ ಅನಾವರಣಗೊಳಿಸಿದ ಅದಮಾರು ಈಶಪ್ರಿಯತೀರ್ಥ ಶ್ರೀಪಾದರು;

Voiceoftulunadu

ಉಡುಪಿಯ ಟೌನ್ ಹಾಲ್ ನಲ್ಲಿ ‘ ಲಯನ್ಸ್ ಇಂಟರ್ನ್ಯಾಷನಲ್ ಹಾಗೂ ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ವತಿಯಿಂದ, 2026-27 ನೇ ಸಾಂಸ್ಥಿಕ ವರ್ಷದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಹಾಗೂ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ;

Voiceoftulunadu

ಮೋಡಗಳು ಕಾಣದಿದ್ದರೆ ಕೇವಲ ಮಳೆಯಷ್ಟೇ ಮರೆಯಾಗುವುದಿಲ್ಲ-ದಿವಾಕರ್ ಶೆಟ್ಟಿ ಅಡ್ಯಾರ್

Voiceoftulunadu

Leave a Comment