28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ : ಡಾ. ದೇವಿಪ್ರಸಾದ್‌ ಶೆಟ್ಟಿ ಬೆಳಪು,ಬೆಳಪು ವ್ಯವಸಾಯ ಸಹಕಾರಿ ಸಂಘದ ಮಹಾಸಭೆ;

ವರದಿ/ ಚಿತ್ರ :ಈ ಮೀಡಿಯಾ

ಬೆಳಪು : ಬೆಳಪು ವ್ಯವಸಾಯ ಸಹಕಾರಿ ಸಂಘವು 2025-26 ನೇ ಸಾಲಿನಲ್ಲಿ ಗಣನೀಯ ಅಭಿವೃದ್ಧಿ ಪಥದಲ್ಲಿದ್ದು, ಈ ಮೊದಲಿಗಿಂತ ಮೂರು ಪಟ್ಟು ಹೆಚ್ಚಿನ ಪ್ರಗತಿಯನ್ನು ದಾಖಲಿಸಿ ಗ್ರಾಮೀಣ ಪ್ರದೇಶದಲ್ಲಿ ಉನ್ನತವಾದ ಸಾಧನೆಯನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ, ಬೆಳಪು ಹೇಳಿದ್ದಾರೆ.ಅವರು ಶನಿವಾರ ಉಚ್ಚಿಲ ಶಾಖೆಯ ವಿವಿಧೋದ್ದೇಶ ಸಹಕಾರಿ ಮಹಲ್ ನಲ್ಲಿ ನಡೆದ ಬೆಳಪು ವ್ಯವಸಾಯ ಸಹಕಾರಿ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ವರ್ಷ 8.55 ಕೋಟಿ ಸಾರ್ವಕಾಲಿಕ ಲಾಭ ಗಳಿಸಿದ್ದು ವಾರ್ಷಿಕಬೆಳಪು ಲಾಭ ರೂ. 2,24,78,306 ಆಗಿರುತ್ತದೆ. ಸದಸ್ಯರಿಗೆ 8.14 ಡಿವಿಡೆಂಡ್ ನೀಡಲಾಗುವುದು. ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ ಎಂದರು.ಮಹಾಸಭೆಯಲ್ಲಿ ವಿವಿಧ ಕ್ಷೇತ್ರದ ಸಾಧಕರುಗಳಾದ ಸಂತೋಷ್ ಜೆ. ಶೆಟ್ಟಿ ಬರ್ಪಾಣಿ, ಶಕುಂತಳಾ ಶೆಟ್ಟಿ ಕುಂಜೂರು, ವಾಸುದೇವ ಆಚಾರ್ಯ, ಜಲಾಲುದ್ದೀನ್, ಕುಂಜ ಶ್ರೀಧರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಸಾಧಕರುಗಳನ್ನು ಗುರುತಿಸಿ ಅಭಿನಂದಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆ ನಾ ರೋ ಗ್ಯ ದಿಂದಿರುವವರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದದ್ಯುಮಣಿ ಆರ್ ಭಟ್ ಉಚ್ಚಿಲ, ನಿರ್ದೇಶಕರುಗಳಾದ ಪಾಂಡು ಶೆಟ್ಟಿ ಎಲ್ಲೂರು, ಆಲಿಯಬ್ಬ ಉಚ್ಚಿಲ, ಸೈಮನ್ ಡಿಸೋಜ ಮಾಣಿಯೂರು, ಪಾಂಡು ಶೇರಿಗಾರ ಪಣಿಯೂರು, ಗೋಪಾಲ ಪೂಜಾರಿ ಬೆಳಪು, ಸಾಧು ಶೆಟ್ಟಿ ಕುಂಜೂರು, ಅನಿತಾ ಆನಂದ, ಮೀನ ಪೂಜಾರ್ತಿ, ವಿಮಲ ಅಂಚನ್, ಸುಂದರಿ ಕುಲಾಲ್ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಗೋಪಾಲ್ ಬಲ್ಲಾಳ್ ಕೆ. ಇದ್ದರು.

ಸತೀಶ್ ಶೆಟ್ಟಿಗುಡ್ಡೆಚ್ಚಿ ಸ್ವಾಗತಿಸಿ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನ ಆಯ ವ್ಯಯ, ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ಸುಜಾತ ವಂದಿಸಿದರು.

Related posts

ಆಟಿ ಅಮಾವಾಸ್ಯೆ: ನರಹರಿ ದೇವಸ್ಥಾನಕ್ಕೆ ಮಾಜಿ ಸಚಿವರಾದ ರಮನಾಥ ರೈ ಭೇಟಿ ;

Voiceoftulunadu

ಕೃತಕ ಬುದ್ಧಿಮತ್ತೆ (AI): ನಮ್ಮ ಮನೆಯ ಹೊಸ ಬುದ್ಧಿವಂತ ಸಹಾಯಕ : (ಡಾ.) ತೇಜಸ್ವಿನಿ ಎಚ್‌ ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯವರಿಂದ ವಿಶೇಷ ಲೇಖನ ;

Voiceoftulunadu

ಕುಂತಳನಗರ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ :ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಅ. 9 ರಂದು ಎಂಆರ್ ಜಿ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ;

Voiceoftulunadu

Leave a Comment