September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೈಮ್/ಅವಘಡಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಬ್ರೇಕಿಂಗ್ ನ್ಯೂಸ್ರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ತುಳುನಾಡ ಸಾಂಸ್ಕೃತಿಕ ಪತ್ರಿಕೋದ್ಯಮದ ವಿಶಿಷ್ಟ ಧ್ವನಿ ಪರಮಾನಂದ ಸಾಲ್ಯಾನ್ ಇನ್ನಿಲ್ಲ;

ವರದಿ/ಚಿತ್ರ: ಜಿತೇಂದ್ರ ಕುಂದೇಶ್ವರ (ಕುಂದೇಶ್ವರ ಬುಲೆಟಿನ್)

ಮಂಗಳೂರು /ಉಡುಪಿ : ಕರಾವಳಿಯ ಪತ್ರಿಕೋದ್ಯಮ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ದಶಕಗಳ ಕಾಲ , ಮೌಲ್ಯಯುತ ಧ್ವನಿಯಾಗಿ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ, ಸಂಪಾದಕ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು (65) ಅವರ ನಿಧನ ರಾಗಿದ್ದಾರೆ.

‘ಮುಂಗಾರು’ ಹಾಗೂ ‘ಹೊಸದಿಗಂತ’ದಂತಹ ಪ್ರಮುಖ ದಿನಪತ್ರಿಕೆಗಳಲ್ಲಿ ನಿಷ್ಠಾವಂತ ವರದಿಗಾರಿಕೆ ನಡೆಸಿದ್ದ ಅವರು, ‘ಅಜೇಯ’ ಮಾಸಪತ್ರಿಕೆಯ ಸಂಪಾದಕರಾಗಿ ಮೌಲ್ಯಭರಿತ ಪತ್ರಿಕೋದ್ಯಮವನ್ನು ಮುನ್ನಡೆಸಿದರು. ಮಾಧ್ಯಮ ಲೋಕದಷ್ಟೇ ಆಳವಾಗಿ ಅವರು ರಂಗಭೂಮಿಯನ್ನೂ ಪ್ರೀತಿಸಿದ್ದರು.

ಕರಾವಳಿಯಾದ್ಯಂತ ಧೂಳೆಬ್ಬಿಸಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಐತಿಹಾಸಿಕ ‘ಶಿವದೂತ ಗುಳಿಗ’ ತುಳು ನಾಟಕದ ಸಂಭಾಷಣೆಗಾರರಾಗಿ (Dialogue Writer) ಅವರು ಅಪಾರ ಜನಪ್ರಿಯತೆ ಗಳಿಸಿದ್ದರು.

‘ರಂಗಸುದರ್ಶನ ಸಸಿಹಿತ್ಲು’ ಸಂಸ್ಥೆಯನ್ನು ಕಟ್ಟಿ, ಯುವ ಪ್ರತಿಭೆಗಳಿಗೆ ಆಸರೆಯಾಗಿದ್ದ ಸಮರ್ಥ ರಂಗ ನಿರ್ದೇಶಕರೂ ಹೌದು.ಅಕ್ಷರ ಮತ್ತು ರಂಗಕಲೆಯ ಜೊತೆಗೆ ಧಾರ್ಮಿಕ ವಲಯದಲ್ಲೂ ತೊಡಗಿಸಿಕೊಂಡಿದ್ದ ಸಾಲ್ಯಾನ್, ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿ ಹಾಗೂ ಶ್ರೀ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಲ್ಲಿ ಸಕ್ರಿಯರಾಗಿ ದೈವಾರಾಧನೆಯ ಹಿನ್ನೆಲೆಯನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ತಲುಪಿಸಲು ಶ್ರಮಿಸಿದ್ದರು. ಪತ್ನಿ ಹಾಗೂ ಪುತ್ರನನ್ನು ಅಗಲಿರುವ ಈ ಅಪರೂಪದ ಲೇಖನಿ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಗಳು.

Related posts

ಉಡುಪಿ ಮಲಬಾರ್ ಗೋಲ್ಡ್‌ನಿಂದ ರಕ್ತದಾನ ಶಿಬಿರ– ರಕ್ತದಾನಿಗಳಿಗೆ ಸನ್ಮಾನಕಾರ್ಯಕ್ರಮ ಉದ್ಘಾಟಿಸಿದ ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್;

Voiceoftulunadu

ಮೂಲ್ಕಿಯಲ್ಲಿ ಕೋಸ್ಟಲ್ ಫಿಲಂ ಅವಾಡ್ಸ್೯ 2026 ಗೆ ಚಾಲನೆ ; ತುಳು ಸಿನಿಮಾ ಬೆಳವಣಿಗೆಗೆ ಕೋಸ್ಟಲ್ ಅವಾಡ್೯ ಪ್ರೇರಣೆ:

voiceoftulunadu

ಕಟಪಾಡಿ ಮೀನು ಮಾರುಕಟ್ಟೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭೇಟಿ; ಕುಂದು ಕೊರತೆಯ ಬಗ್ಗೆ ಮೀನುಗಾರ ಮಹಿಳೆಯರೊಂದಿಗೆ ಚರ್ಚೆ:

Voiceoftulunadu

Leave a Comment