27 C
ಮಂಗಳೂರು
July 6, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ

ಬಂಟಕಲ್ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಉದ್ಯೋಗ, ಕೌಶಲ್ಯ ವೃದ್ಧಿಗಾಗಿ ಉಪಾನ್ಯಾಸ ನೀಡಿದ ಪ್ರಾಧ್ಯಾಪಕಿ ಡಾ. ನೇಹಾ ಲಖೋಟಿಯ;

ವರದಿ/ ಚಿತ್ರ: ಈ ಮೀಡಿಯಾ

ಬಂಟಕಲ್ : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂ ಬಿ ಎ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯ ವೃದ್ಧಿಗಾಗಿ ಉಪನ್ಯಾಸ ಕಾಲೇಜಿನಲ್ಲಿ ಆಯೋಜಿಸಲಾಯಿತು.

ಕಾರ್ಯಾಗಾರವನ್ನು ಪ್ರಾಧ್ಯಾಪಕಿ ಡಾ. ನೇಹಾ ಲಖೋಟಿಯಾರವರು ನಡೆಸಿಕೊಟ್ಟರು.ವಿದ್ಯಾರ್ಥಿಗಳಲ್ಲಿ ಉದ್ಯೋಗ ಸಂದರ್ಶನವನ್ನು ಬಲಪಡಿಸುವುದು, ವೃತ್ತಿಪರ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವುದು ಹಾಗೂಉದ್ಯೋಗ ಸಂದರ್ಶನದ ಸಂದರ್ಭದಲ್ಲಿ ಹೇಗೆ ಆತ್ಮ ವಿಶ್ವಾಸದಿಂದ ಸಂದರ್ಶನವನ್ನು ಎದುರಿಸುವುದು ಎಂಬ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು.

ಅಲ್ಲದೆ, ಸಂದರ್ಶನಗಳ ವಿವಿಧ ವಿಧಗಳು, ಕಂಪನಿಯ ಬಗ್ಗೆ ಪೂರ್ವ ಮಾಹಿತಿ ಸಂಗ್ರಹಿಸುವುದು, ಬಯೋಡೇಟ ಸಿದ್ಧ ಪಡಿಸುವುದು, ಕೇಳಿದ ಪ್ರಶ್ನೆಗಳಿಗೆ ಪರಿಣಾಮಕಾರಿಯಾಗಿ ಹೇಗೆ ಉತ್ತರಿಸುವುದು ಎಂಬುದರ ಬಗ್ಗೆ ವಿವರಿಸಿದರು.

ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ನೇಮಕಾತಿದಾರರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಂವಹನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಹಾಗೂ ವೃತ್ತಿಪರ ನಡವಳಿಕೆಯನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ.

Related posts

ಅಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬೈ (ಎಬಿಸಿಎ)ನೂತನ ಅಧ್ಯಕ್ಷರಾಗಿ ಸಿಎ ಜಗದೀಶ್ ಬಿ. ಶೆಟ್ಟಿ ಸುರತ್ಕಲ್ ಆಯ್ಕೆ:

Voiceoftulunadu

ತುಳುನಾಡಿನ ಪ್ರಸಿದ್ಧ ದೈವ ನರ್ತಕ ಕುಕ್ಕೆಹಳ್ಳಿ ಸೋಮು ಪಾಣಾರ ದೈವಾದೀನ : ಜೂನ್.9ರಂದು ಕುಕ್ಕೆಹಳ್ಳಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರದ್ಧಾಂಜಲಿ ಸಭೆ ;

Voiceoftulunadu

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರಿಂದ ಬೆಳ್ತಂಗಡಿಯಲ್ಲಿನ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನಾ ಸಮಾರಂಭ:

Voiceoftulunadu

Leave a Comment