ಮುಂಬೈ: ವಾರ್ಷಿಕ ಪಾಮ್ಡ್ ಲೈಟ್ & ಸೌಂಡ್ ಅವಾರ್ಡ್ ಸಮಾರಂಭದಲ್ಲಿ ಮಂಗಳೂರಿನ ಹೆಮ್ಮೆಯ ಲೈಟಿಂಗ್ ಉತ್ಪಾದನಾ ಸಂಸ್ಥೆಯಾದ ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ದೇಶದ ಅತ್ಯುತ್ತಮ “ಲೈಟಿಂಗ್ ಟೆಕ್ನಾಲಜಿ ಇನೋವೇಷನ್ ಅವಾರ್ಡ್”ನ್ನು ತನ್ನದಾಗಿಸಿಕೊಂಡಿದೆ.ಭಾರತದ ಅತಿದೊಡ್ಡ ಸೌಂಡ್ ಮತ್ತು ಲೈಟಿಂಗ್ ಎಕ್ಸ್ ಪೋಗೆ ಖ್ಯಾತಿ ಪಡೆದ ಈ ಮಹತ್ವದ ಕಾರ್ಯಕ್ರಮವು ಗೋರೆಗಾಂವಿನ ನೆಸ್ಕೋ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದಿದ್ದು, 300ಕ್ಕೂ ಹೆಚ್ಚು ಕಂಪನಿಗಳು ಇದರಲ್ಲಿ ಭಾಗವಹಿಸಿದ್ದವು. 50,000ಕ್ಕೂ ಅಧಿಕ ವೃತ್ತಿಪರರು ಈ ಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಮುಂಬೈನ ಪ್ರಸಿದ್ಧ ಸಹಾರಾ ಸ್ಟಾರ್ ಹೋಟೆಲ್‌ನಲ್ಲಿ ಜರುಗಿತು.ದೇಶದ ವಿವಿಧ ಪ್ರಮುಖ ಕಂಪನಿಗಳ ನಡುವಿನ ತೀವ್ರ ಸ್ಪರ್ಧೆಯಲ್ಲಿ, “ಮೇಕ್ ಇನ್ ಇಂಡಿಯಾ” ಪರಿಕಲ್ಪನೆಯಡಿ ತನ್ನ ವಿಶಿಷ್ಟ ಉತ್ಪಾದನಾ ಸಾಮರ್ಥ್ಯ, ತಂತ್ರಜ್ಞಾನ ನವೀನತೆ ಹಾಗೂ ಗುಣಮಟ್ಟದ ಉತ್ಪನ್ನಗಳಿಗಾಗಿ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಈ ಗೌರವಕ್ಕೆ ಪಾತ್ರವಾಯಿತು.
ಉನ್ನತ ಮಟ್ಟದ ವಿಶೇಷ ಲೈಟಿಂಗ್ ವ್ಯವಸ್ಥೆಗಳ ತಯಾರಿಕೆಯಲ್ಲಿ ವೇಗವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಲೆಕ್ಸಾ ಲೈಟಿಂಗ್ , ರಾಷ್ಟ್ರಪತಿ ಭವನ, ವಿಧಾನ ಸೌಧ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್, ಅಯೋಧ್ಯ ಧಾಮ ಸೇರಿದಂತೆ ಭಾರತ ಹಾಗೂ ವಿದೇಶಗಳ ಅನೇಕ ಪ್ರತಿಷ್ಠಿತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ರೊನಾಲ್ಡ್ಅ ಸಿಲ್ವನ್ ಡಿಸೋಜಾ ರವರು, “ಪ್ರತಿ ಗ್ರಾಮದಲ್ಲೂ ಕೈಗಾರಿಕೆಗಳು ಬೆಳೆಯುವಾಗ ಮಾತ್ರ ಭಾರತ ನಿಜವಾದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ” ಎಂದು ಮಹಾತ್ಮ ಗಾಂಧಿ ಉಲ್ಕೆಕಿಸಿದ್ದರು ಇದರಿಂದ ಪ್ರೇರಿತವಾಗಿ ಲೆಕ್ಸಾ ಲೈಟಿಂಗ್ ಸಂಸ್ಥೆಯನ್ನು ಮಂಗಳೂರಿನಲ್ಲಿ ಅತ್ಯಂತ ಸರಳತೆಯಿಂದ ಸ್ಥಾಪಿಸಲಾಯಿತು ಎಂದು ಹೇಳಿದರು.
ಕೇವಲ ಎಂಟು ವರ್ಷಗಳ ಅವಧಿಯಲ್ಲಿ, ಸಂಸ್ಥೆ ಗ್ರಾಮೀಣ ಭಾಗದ 350ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದು, 800ಕ್ಕೂ ಹೆಚ್ಚು ಪ್ರತಿಷ್ಠಿತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅವುಗಳಲ್ಲಿ ಮೂರು ಪ್ರಮುಖ ಯೋಜನೆಗಳನ್ನು ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಂದ ಹನ್ನೆರಡಕ್ಕೂ ಹೆಚ್ಚು ಯೋಜನೆಗಳು ಉದ್ಘಾಟಿಸಲ್ಪಟ್ಟಿವೆ ಎಂದು ಅವರು ತಿಳಿಸಿದರು.ಇದಲ್ಲದೆ, ಲೆಕ್ಸಾ ಲೈಟಿಂಗ್ ಸಂಸ್ಥೆಯ 85ರಿಂದ 90 ಶೇಕಡಾ ಉತ್ಪನ್ನಗಳು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗುತ್ತಿದ್ದು, “ಮೇಕ್ ಇನ್ ಇಂಡಿಯಾ” ಪರಿಕಲ್ಪನೆಯನ್ನು ನಿಜಾರ್ಥದಲ್ಲಿ ಸಾಕಾರಗೊಳಿಸುತ್ತಿದೆ. ಶೀಘ್ರದಲ್ಲೇ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಬ್ರ್ಯಾಂಡ್ ಗುರುತನ್ನು ಮೂಡಿಸುವ ವಿಶ್ವಾಸವೂ ವ್ಯಕ್ತಪಡಿಸಿದರು. ಇದಕ್ಜೆ ಕಾರಣೀಕರ್ತರಾದ ಎಲ್ಲಾ ಸಿಬ್ಬಂದಿ ವರ್ಗದವರನ್ನು ಶ್ಲ್ಯಾಘಿಸಿದರು.ಮಂಗಳೂರಿನಿಂದ ಆರಂಭಗೊಂಡ ಸಂಸ್ಥೆಯೊಂದು ಇಂದು ದೇಶವ್ಯಾಪಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಕರಾವಳಿ ಕರ್ನಾಟಕಕ್ಕೂ, ದೇಶಕ್ಕೂ ಹೆಮ್ಮೆಯ ವಿಚಾರವಾಗಿದೆ.
