ಹಳೆಯಂಗಡಿ /ಮೂಲ್ಕಿ : ದಿನಾಂಕ 26-12-2026 ರಂದು ಜರಗುವ ಮುಲ್ಕಿ ಸೀಮೆ ಅರಸು ಕಂಬಳದ ಕುರಿತು ಸಮಿತಿಯ ಸಭೆಯು ದಿನಾಂಕ 6-9-2026 ರ ಆದಿತ್ಯವಾರ ಸಂಜೆ 4 ಗಂಟೆಗೆ ಕೋಸ್ಟಲ್ ಸಭಾಂಗಣ ಹಳೆಯಂಗಡಿಯಲ್ಲಿ ಜರಗಿತು.
ಈ ವರ್ಷದ ಮುಲ್ಕಿ ಸೀಮೆ ಅರಸು ಕಂಬಳವು ರಾಜ್ಯ ಹಾಗೂ ಜಿಲ್ಲಾ ಕಂಬಳ ಸಮಿತಿಯ ಮಾರ್ಗದರ್ಶನದಲ್ಲಿ ,ಅರಸರಾದ ದುಗ್ಗಣ್ಣ ಸಾವಂತರ ಮುಂದಾಳತ್ವದಲ್ಲಿ ,ಮುಲ್ಕಿ ಸೀಮೆ ಅರಸು ಕಂಬಳದ ಅಧ್ಯಕ್ಷರಾದ ಕೊಲ್ನಾಡ್ ಗುತ್ತು ಕಿರಣ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಹಾಗೂ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಊರ ಪರ ಊರ ಹಾಗೂ ಕಂಬಳ ಅಭಿಮಾನಿಗಳು ಹಾಗೂ ದಾನಿಗಳ ಸಹಕಾರದಿಂದ ವಿಜೃಂಭಣೆಯಿಂದ ನಡೆಸುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು
