28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕೃಷಿ/ಭೌಗೋಳಿಕಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಸಾಂಪ್ರದಾಯಿಕ ನಾಟಿ ಮುಂದುವರಿಸುತ್ತಿರುವ ಯುವ ರೈತ ಹರೀಶ್ ಪೂಜಾರಿ ಕಿಶೋ‌ರ್ ಪೂಜಾರಿ : ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಸದಸ್ಯರಿಂದ ಶ್ಲಾಘನೆ;

ವರದಿ/ ಚಿತ್ರ: ಈ ಮೀಡಿಯಾ

ಎಲ್ಲೂರು: ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕೆಳಗಿನ ಮನೆಯ ಯುವ ರೈತ ಹರೀಶ್ ಪೂಜಾರಿ ಮತ್ತು ಕಿಶೋರ್ ಪೂಜಾರಿ ಸಹೋದರರು ಸಾಂಪ್ರದಾಯಿಕ ನಾಟಿ ಕಾರ್ಯವನ್ನು ಮುಂದುವರಿಸುತ್ತಿದ್ದು ಸ್ಥಳೀಯ ಎಲ್ಲಾ ರೈತರಿಗೂ ಮಾದರಿಯಾಗಿದ್ದಾರೆ.

ತಮ್ಮ ಹಿರಿಯರಿಂದ ಬಂದ ಸುಮಾರು 10 ಎಕರೆ ಕೃಷಿ ಭೂಮಿಯನ್ನು ಇವರು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ನಾಟಿ ಮಾಡುತ್ತಿದ್ದು, ಕೃಷಿ ಕಾರ್ಮಿಕರ ಅಭಾವವಿದ್ದರೂ ಹೊರ ಜಿಲ್ಲೆಗಳಿಂದ ಕೃಷಿ ಕಾರ್ಮಿಕರನ್ನು ತರಿಸಿ ನಾಟಿ ಮಾಡುತ್ತಿರುವ ಇವರು ನೆರೆಕೆರೆಯ ರೈತರಿಗೂ ನಾಟಿ ಮಾಡಲು ಸಹಕರಿಸುತ್ತಿದ್ದಾರೆ.

ಸರಕಾರದಿಂದ ಸರಿಯಾದ ಸಮಯಕ್ಕೆ ರಸಗೊಬ್ಬರಗಳು ಸಿಗುತ್ತಿಲ್ಲ ಎಂಬ ನೋವನ್ನು ತೋಡಿಕೊಂಡ ಇವರು, ಸರಕಾರವುರೈತರಿಗೆ ಸಂಪೂರ್ಣ ಸವಲತ್ತನ್ನು ಸಕಾಲದಲ್ಲಿ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.

ಇವರ ಸಾಂಪ್ರದಾಯಿಕ ನಾಟಿ ಪದ್ಧತಿಯನ್ನು ವೀಕ್ಷಿಸಿದ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಕೋಟ್ಯಾನ್ ಉದ್ಯಾವರ, ಕಾಪು ಬ್ಲಾಕ್ ದಕ್ಷಿಣ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷರಾದ ಪಾಂಡು ಶೆಟ್ಟಿ ಎಲ್ಲೂರು, ಸ್ಥಳೀಯ ರೈತರಾದ ಶಶಿ ಶೆಟ್ಟಿ ಬರ್ಪಾಣಿ, ಮಿತ್ರ ಅಂಚನ್ ಗುಂಡಿ ತೋಟ, ಶಂಕರ್ ಪೂಜಾರಿ ಮುಂತಾದವರು ಹರೀಶ್ ಪೂಜಾರಿ ಹಾಗೂ ಕಿಶೋರ್ ಪೂಜಾರಿ ಸಹೋದರ ಕೃಷಿ ಸಾಧನೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ವಾಹನದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕೊಕೈನ್ ಸಾಗಾಟ ಪತ್ತೆ : ಬೆಂಗಳೂರು ಕೆಂಗೇರಿ ಮೂಲದ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್‌ ಪೊಲೀಸ್‌ ವಶ ;

Voiceoftulunadu

ಬಂಟವಾಳ ಬಂಟರ ಸಂಘದ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವಕ್ಕೆ ಚಾಲನೆ:

voiceoftulunadu

ಕಾಪು ರಂಗ ತರಂಗ ಸಂಸ್ಥೆಯ ನೂತನ “ವಿಕ್ರಂ ವೇದ” ನಾಟಕಕ್ಕೆ ಮುಹೂರ್ತ : ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿಯಲ್ಲಿ ನಡೆದ ಮುಹೂರ್ತ ಕಾರ್ಯಕ್ರಮ;

Voiceoftulunadu

Leave a Comment