28.5 C
ಮಂಗಳೂರು
September 4, 2026
Uncategorizedಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಧಾರ್ಮಿಕ ಕ್ಷೇತ್ರ ಸಂದರ್ಶನಉಳಿ ಗೋಶಾಲೆಗೆ ಸಮಿತಿಯ ವತಿಯಿಂದ ಗೋಗ್ರಾಸ ಕಾಣಿಕೆ ಸಮರ್ಪಣೆ;

ವರದಿ /ಚಿತ್ರ: ಈ ಮೀಡಿಯಾ

ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ವತಿಯಿಂದ ಮಳೆಗಾಲದಲ್ಲಿ ಒಂದು ದಿನ ಧಾರ್ಮಿಕ ಕ್ಷೇತ್ರ ಸಂದರ್ಶನ ಕಾರ್ಯಕ್ರಮವು ಸಮಿತಿಯ ಅಧ್ಯಕ್ಷರಾದ ಕೀಳಂಜೆ ಶ್ರೀಕೃಷ್ಣರಾಜ ಭಟ್ ಅವರ ನೇತೃತ್ವದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಮತ್ತು ಯಶಸ್ವಿಯಾಗಿ ನೆರವೇರಿತು.

ಪೂರ್ವ ಅಧ್ಯಕ್ಷ ಶ್ರೀನಿವಾಸ ಬಲ್ಲಾಳ, ಉಪಾಧ್ಯಕ್ಷ ರಂಗನಾಥ ಸಾಮಗ, ಕಾರ್ಯದರ್ಶಿ ನಾಗರಾಜ ಭಟ್, ಇತರ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ಚಂದ್ರಕಾಂತ್ ಕೆಎನ್. ಶ್ರೀಪತಿ ಭಟ್, ವೇದವ್ಯಾಸ ಆಚಾರ್, ರಾಜಶೇಖರ ಭಟ್, ಮಹಿಳಾ ಪದಾಧಿಕಾರಿಗಳಾದ ವಸುಧಾ ಭಟ್, ಶ್ಯಾಮಲಾ ರಾವ್, ರೂಪ ಭಟ್, ಕವಿತಾ ಆಚಾರ್ಯ, ಪ್ರಿಯಾಂವದ ಹಾಗೂಸಮಿತಿಯ ಇತರ ಸದಸ್ಯರು ಮತ್ತು ಕುಟುಂಬಸ್ಥರು ಸೇರಿ ಒಟ್ಟು 50 ಮಂದಿ ಈ ಯಾತ್ರೆಯಲ್ಲಿ ಭಾಗವಹಿಸಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ದೇವಾಲಯಗಳನ್ನು ಸಂದರ್ಶಿಸಿದರು.

ಸಂದರ್ಶಿಸಿದ ಪ್ರಮುಖ ಕ್ಷೇತ್ರಗಳು:ಎಲ್ಲೂರು ಶ್ರೀ ವಿಶ್ವನಾಥ ದೇವಸ್ಥಾನ, ಕುಂಜೂರು ದುರ್ಗಾದೇವಿ ದೇವಸ್ಥಾನ, ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮೂಡುಬಿದ್ರೆ ಜೈನ ಬಸದಿ, ಸೂರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ, ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ನರಹರಿ ಬೆಟ್ಟ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೊದಲಾದವು.ಕಾರ್ಯಕ್ರಮದ ಅಂಗವಾಗಿ ಸಮಿತಿಯ ಗೋಸೇವೆಯ eve ಗೋಶಾಲೆಗೆ ವತಿಯಿಂದ ಗೋಗ್ರಾಸ ಕಾಣಿಕೆಯನ್ನು ಸಲ್ಲಿಸಲಾಯಿತು. ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಸದಸ್ಯರು ಮಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಅಧ್ಯಕ್ಷ ಶ್ರೀಕೃಷ್ಣರಾಜ ಭಟ್ ಅವರು ಅಭಿನಂದಿಸಿದರು.ಮುಂದೆಯೂ ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ತಿಳಿಸಿದರು. ಅವರು

Related posts

ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ : ಕಿಶೋರ್ ಪೂಜಾರಿ ಸೇರಿ ಇಬ್ಬರು ಆರೋಪಿಗಳ ಬಂಧನ, ಎರ್ಮಾಳು ಕಿಶೋರ್ ಪೂಜಾರಿ ಮತ್ತು ಕುತ್ಯಾರು ನಿವಾಸಿ ಸದಾನಂದ ದೇವಾಡಿಗ ಬಂಧಿತರು: ಕನ್ನಡಕಿಶೋ‌ರ್ ಪೂಜಾರಿಸದಾನಂದ ದೇವಾಡಿಗ ;

Voiceoftulunadu

ಆಕಾಶ್ ಎಜುಕೇಷನಲ್ ಸರ್ವೀಸಸ್ ನಿಂದ ಅತಿದೊಡ್ಡ ಪ್ರತಿಭಾನ್ವೇಷಣೆ :ಪರೀಕ್ಷೆ ಕಳೆದ 16 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಪರೀಕ್ಷೆ ;

Voiceoftulunadu

ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,500 ಹಣ ಪಡೆಯಲು ‘ಗರ್ಭಕಂಠ ಕ್ಯಾನ್ಸರ್ ಲಸಿಕೆ’ ಪಡೆಯುವುದು ಕಡ್ಡಾಯ! ;

Voiceoftulunadu

Leave a Comment