27 C
ಮಂಗಳೂರು
July 6, 2026
ಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸ್ಥಳೀಯ/ಪ್ರಾದೇಶಿಕ ಸುದ್ದಿ

ಮೂಲ್ಕಿಯ ಬಪ್ಪನಾಡಿನಲ್ಲಿ ನಡೆದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಇದರ ಸಂಯೋಜನೆಯಲ್ಲಿ ಅಪ್ಪೆ ಬೇರ್‌ದ ತುಳುನಾಡ್ ರಾಷ್ಟ್ರೀಯ ವಿಚಾರ ಸಂಕೀರಣ; ಜಾತಿ ಕಟ್ಟುವ ಮೊದಲು ಕುಲಕಸುಬು ಇತ್ತು – ಜ್ಯೋತಿ ಚೆಳ್ಯಾರ್:


ಮೂಲ್ಕಿ:ತುಳುನಾಡಿನಲ್ಲಿ ಮೇಲ್ವರ್ಗ, ಕೆಳವರ್ಗ, ಮಧ್ಯಮವರ್ಗ ಎಂಬ ವಿಂಗಡಣೆಯೊಂದಿಗೆ ಸಮಾಜವು ಬೆಳೆಯುತ್ತಿದೆ. ಇಲ್ಲಿ ಜಾತಿ ಕಟ್ಟಿನ ಮೊದಲು ಕುಲಕಸುಬು ಆವರಿಸಿದೆ. ಕೊರಗ ಸಮುದಾಯ ಸುಮಾರು ೫೦ ವರ್ಷದ ಹಿಂದೆ ೨೪ ಸಾವಿರ ಸಂಖ್ಯೆಯಲ್ಲಿದ್ದವರು ಇಂದು ೧೧ ಸಾವಿರಕ್ಕೆ ಇಳಿದಿದ್ದಾರೆ. ಭೂ ಒಡೆತನ, ಅವಕಾಶ ಇಲ್ಲದೇ, ಶಿಕ್ಷಣ ವಂಚಿತರಾಗಿರುವುದರಿಂದ ಕ್ಷಿಣಿಸುತ್ತಿದೆ. ಜಗತ್ತಿನಲ್ಲಿ ತುಳುನಾಡ ಮಣ್ಣಿನ ಋಣದ ಸಂಬಂಧ ಬೇರೆಲ್ಲೂ ಇಲ್ಲ ಇದನ್ನು ತಾಯಿಗೆ ಹೋಲಿಸಿ ಸಂರಕ್ಷಣೆ ನಡೆಯುತ್ತಿದೆ ಎಂದು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಮಾಜಿ ಅಧ್ಯಕ್ಷೆ ಜ್ಯೋತಿ ಚೆಳ್ಯಾರು ಹೇಳಿದರು.
ಅವರು ಮೂಲ್ಕಿಯ ಬಪ್ಪನಾಡಿನಲ್ಲಿ ನಡೆದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಅಪ್ಪೆ ಬೇರ್‌ದ ತುಳುನಾಡ್ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಡಾ.ಸಾಯಿಗೀತಾ ಹೆಗ್ಡೆ ಸಂವಹನಕಾರರಾಗಿದ್ದರು. ಮುಂಬೈ ಕೆ.ಬೊಇ.ಇ.ಎಸ್. ಕಾಲೇಜಿನ ಪ್ರಾಂಶುಪಾಲೆ ಅಮೃತ ಅಜಯ್ ಶೆಟ್ಟಿ, ಜಾನಪದ ಸಂಶೋಧಕರಾದ ಡಾ.ರತಿ ಕೋಡಿಕಲ್, ಶ್ರೀಕಾಂತ್ ಶೆಟ್ಟಿ, ಅರವಿಂದ ಬೆಳ್ಚಾಡ್ ವಿವಿಧ ವಿಷಯದಲ್ಲಿ ಮಾತನಾಡಿದರು.
ಉದ್ಘಾಟನೆ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಮಾತಾನಂದಮಯೀ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾಹಿತಿ ಡಾ.ಇಂದಿರಾ ಹೆಗ್ಗಡೆ ಸರ್ವಾಧ್ಯಕ್ಷರಾಗಿದ್ದರು. ಶಾಸಕ ಉಮಾನಾಥ ಕೋಟ್ಯಾನ್, ಕಟೀಲು ಶ್ರೀಹರಿನಾರಾಯಣದಾಸ ಆಸ್ರಣ್ಣ, ತುಳುವಲ್ಡ್‌ನ ಪ್ರೋ.ಪುರುಷೋತ್ತಮ ಬಲ್ಯಾಯ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಶಿಕಲಾ ಶೆಟ್ಟಿ, ಸಮಿತಿಯ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿದರು.
ಬಪ್ಪನಾಡು ದೇವಳದ ಶ್ವೇತಾ ಪಳ್ಳಿ, ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ಪ್ರಧಾನ ಸಂಚಾಲಕ ಸುನಿಲ್ ಆಳ್ವಾ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್‌ಕುಮಾರ್ ಶೆಟ್ಟಿ, ಮೂಲ್ಕಿ ಘಟಕದ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು. ನಿರ್ದೇಶಕರ ರಾಜೇಶ್ ಆಳ್ವಾ, ಗೀತಾ ಗಣೇಶ್ ಬಂಗೇರ, ಸರೋಜಿನಿ ಸುವರ್ಣ, ಲತಾ ಶೇಕರ್ ಪೂಜಾರಿ ಮತ್ತಿತರರು ಇದ್ದರು.

Related posts

ಪಂಚವರ್ಣ ಆಸಾಡಿ ಒಡ್ಸ್‌ : ಸಾಧಕ ಮಹಿಳಾ ಪುರಸ್ಕಾರಕ್ಕೆ ರೇಡಿಯೋ ಕುಂದಾಪ್ರದ ಜ್ಯೋತಿ ಸಾಲಿಗ್ರಾಮ ಆಯ್ಕೆಅಗಸ್ಟ್ ೯ ರಂದು ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮ;

Voiceoftulunadu

ಇನ್ನು ಮುಂದೆ ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ 10 ಗಂಟೆಯೊಳಗೆ ಹಾಜರಾಗುವಂತೆ ಸಿಎಸ್ ಆದೇಶ

voiceoftulunadu

ಹಿರಿಯ ಶಿಕ್ಷಣತಜ್ಞ, ಕಮಾಂಡರ್ ಡಾ. ಅನಿಲ್ ರಾಣಾ ಅವರಿಗೆ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಯ ಗರಿ :ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ

Voiceoftulunadu

Leave a Comment