28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶ

ಸೀತಾರಾಮನ್ ಭೇಟಿ ;ದೇವಳದ ಆವರಣದಲ್ಲಿ ಸಸಿ ನೆಟ್ಟ ಸಚಿವೆ ನಿರ್ಮಲಾ ಸೀತಾರಾಮನ್

ವರದಿ /ಚಿತ್ರ: ಬಾಲಕೃಷ್ಣ ಉಚ್ಚಿಲ

ಉಚ್ಚಿಲ : ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಶನಿವಾರ ಬೆಳಿಗ್ಗೆ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದರು. ದೇವಸ್ಥಾನದ ವತಿಯಿಂದ ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಸಮಿತಿಯ ಮಹಿಳಾ ಸದಸ್ಯರು ಕಳಶ ದೊಂದಿಗೆ ಸಚಿವರನ್ನು ಸ್ವಾಗತಿಸಿದರು.

ದೇವಳದ ಪ್ರಧಾನ ಅರ್ಚಕ ಕೆ. ವಿ. ರಾಘವೇಂದ್ರ ಉಪಾಧ್ಯಾಯರವರು ಶ್ರೀ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿಯವರು ಸಚಿವೆ ನಿರ್ಮಲಾ ಸೀತಾರಾಮನ್ ರವರನ್ನು ದೇವಳದ ವತಿಯಿಂದ ಸನ್ಮಾನಿಸಿದರು.

ನಿರ್ಮಲಾ ಸೀತಾರಾಮನ್‌ ರವರು ದೇವಳದ ಆವರಣದಲ್ಲಿ ಸಸಿಯೊಂದನ್ನು ನೆಟ್ಟು ವನಮಹೋತ್ಸವ ಆಚರಿಸಿದರು.ಈ ಸಂದರ್ಭ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಯಶ್ಪಾಲ್‌ ಸುವರ್ಣ, ಆಡಳಿತ ಮಂಡಳಿ ಸದಸ್ಯರಾದ ನಾರಾಯಣ ಸಿ. ಕರ್ಕೇರ, ಮೋಹನ್ ಬಂಗೇರ ಕಾಪು, ಯಾದವ್ ವಿ.ಕೆ, ಸತೀಶ್ ಸಾಲ್ಯಾನ್, ದಿನೇಶ್ ಎರ್ಮಾಳ್, ಮನೋಜ್ ಕಾಂಚನ್, ಸುಜಿತ್ ಕುಮಾರ್ ಕಾಪು, ಶಾಂಭವಿ ಕುಲಾಲ್, ಸಾವಿತ್ರಿ, ಆಶಾ ಮನೋಹರ್, ಶುಭ ಯೋಗೇಶ್, ದೇವಳದ ಪ್ರಧಾನ ಪ್ರಬಂಧಕ ಸತೀಶ್‌ ಮತ್ತಿತರರು ಉಪಸ್ಥಿತರಿದ್ದರು

Related posts

ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿಯಾಗಬೇಕಾಗಿದೆ : ಡಾ. ಮಾನಸ ಪತ್ರಕರ್ತ ಜನಾರ್ದನ ಕೊಡವೂರು, ಲೇಖಕಿ ಪೂರ್ಣಿಮಾ ಜನಾರ್ದನ್ ದಂಪತಿಗಳಿಗೆ ಸನ್ಮಾನ;

Voiceoftulunadu

ಜಂಕ್ ಫುಡ್ ಮಕ್ಕಳಿಗೆ ಸಿಗದಂತಿರಲಿ ಯುಟಿ ಖಾದರ್ ಅವರ ಕ್ರಮ ಶ್ಲಾಘನೀಯ- ಇನ್ನಷ್ಟು ಪರಿಣಾಮಕಾರಿಯಾಗಬೇಕು;

Voiceoftulunadu

ಮತ್ತ್ವಗಂಧ ಎಕ್ಸ್‌ಪ್ರೆಸ್ ರೈಲು ಮೂಲಕ ಮಂಗಳೂರುಗೆ ಬಂದಿದ್ದ ಅಂಗವಿಕಲ ಅನಾಮಧೇಯ ವ್ಯಕ್ತಿಯ ಶವ ಪತ್ತೆ – ವಾರಸುದಾರರ ಮಾಹಿತಿಗೆ ಮನವಿ;

Voiceoftulunadu

Leave a Comment