September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಿಶೇಷ ಅಂಕಣಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ: ಬೊಬ್ಬರ್ಯ, ಕಾಂತೇರಿ, ಜುಮಾದಿ, ಕಲ್ಕುಡ ಹಾಗೂ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ವೈಭವದ ವಾರ್ಷಿಕ ನೇಮೋತ್ಸವ

ವರದಿ /ಚಿತ್ರ:ವಿನೋದ್ ಶೆಟ್ಟಿ ಉಡುಪಿ

ಉಡುಪಿ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಉಡುಪಿ ನಗರದ ತೆಂಕಪೇಟೆಯ ವುಡ್‌ಲ್ಯಾಂಡ್ ಹೋಟೆಲ್ ಸಮೀಪದ ಬೊಬ್ಬರ್ಯ, ಕಾಂತೇರಿ, ಜುಮಾದಿ, ಕಲ್ಕುಡ ಹಾಗೂ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಸಂಭ್ರಮದಿಂದ ಜರುಗಿತು.

ಮೂರು ದಿನಗಳ ದೈವಾರಾಧನಾ ವೈಭವ
1. ಜೂನ್ 05, 2026: ಬೊಬ್ಬರ್ಯ ದೈವದ ನೇಮೋತ್ಸವ ಭಕ್ತಿ ಸಂಭ್ರಮದಿಂದ ನಡೆಯಿತು.
2. ಜೂನ್ 06, 2026: ಕಾಂತೇರಿ ಜುಮಾದಿ ಹಾಗೂ ಪಿಲಿ ಚಂಡಿ ದೈವ ಮತ್ತು ಪಂಜುರ್ಲಿ ದೈವದ ನೇಮ ಭಕ್ತರ ಸಮ್ಮುಖದಲ್ಲಿ ಜರುಗಿತು.
3. ಜೂನ್ 07, 2026: ಕಲ್ಕುಡ ದೈವ ಮತ್ತು ಕೊರಗಜ್ಜ ದೈವ ಪರಿವಾರ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಗ್ರಾಮಸ್ಥರು, ಹೊರದೇಶ-ಹೊರರಾಜ್ಯದ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು.

ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ
ಜೂನ್ 7ರಂದು ಸಂಜೆ 5 ಗಂಟೆಗೆ 7ನೇ ವರ್ಷದ ‘ವಿಶೇಷ ಗೌರವ ಸನ್ಮಾನ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಸನ್ಮಾನಿತರು:
ನಿಟ್ಟೂರು ಮಹಾಬಲ ಶೆಟ್ಟಿ (ದೈವರಾಧನೆ ಕ್ಷೇತ್ರ ಮದಿಪು), ಕೃಷ್ಣ ಪೂಜಾರಿ ಅಂಚಾರು (ಕೊಂಬು ವಾದನ ಹಾಗೂ ಸಮಾಜಸೇವೆ), ಉದಯ ಮೆಂಡನ್ (ಬ್ಯಾಂಡ್ ವಾದನ ಹಾಗೂ ದೈವರಾಧನೆ), ಶಕುಂತಳಾ ಸುಕೇಶ್ (ಸಮಾಜಸೇವೆ), ಆಶಾ ಚಂದ್ರಶೇಖರ್ (ಕ್ರೀಡಾ ಕ್ಷೇತ್ರ), ಸುಕನ್ಯ ಶೆಟ್ಟಿ (ಸಮಾಜಸೇವೆ), ಶ್ಯಾಮ ಪಾಣ್ಣಾರ್ (ದೈವ ನರ್ತಕರು, ದೈವರಾಧನೆ), ಸುಂದರ ಪೂಜಾರಿ ಅಂಚಾರು (ಗರಡಿ ಅರ್ಚಕರು, ದೈವರಾಧನೆ) ಹಾಗೂ ಕೃಷ್ಣ ಮಡಿವಾಳ (ದೈವರಾಧನೆ ಕ್ಷೇತ್ರ).

ಗಣ್ಯರ ಉಪಸ್ಥಿತಿ
ದೈವಸ್ಥಾನದ ಶೆಟ್ಟಿ ಬಾಲೆ ಹಾಗೂ ಬೊಬ್ಬರ್ಯ ಸೇವಾ ಸಮಿತಿಯ ಸ್ಥಾಪಕ ಗೌರವಾಧ್ಯಕ್ಷ ವಿನೋದ್ ಶೆಟ್ಟಿ, ಅನಂತೇಶ್ವರ ದೇವಸ್ಥಾನ ಹಾಗೂ ಚಂದ್ರಮೌಳೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು, ಪ್ರಮುಖ ಅತಿಥಿಗಳಾದ ಶೇಖರ್ ಜತ್ತನ್, ಬಾಲಕೃಷ್ಣ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಸುಧಾಕರ್ ಶೆಟ್ಟಿ, ಮಹಾಬಲ ಶೆಟ್ಟಿ ನಿಟ್ಟೂರ್, ಲೋಯಿತ್ ವರದರಾಜ್ ಕಾಮತ್, ಸುರೇಶ್ ಶೆಟ್ಟಿ ಮೂಡು ಬೆಟ್ಟು, ಸುಲೋಚನ ಶೆಟ್ಟಿ, ಶ್ರೀಮತಿ ರಮಣಿ ದಿನೇಶ್ ಪೂಜಾರಿ, ವಿಜಯ ಶೆಟ್ಟಿ, ವಿಜಯ ಮಡಿವಾಳ, ಸುಮಿತ ಶೆಟ್ಟಿ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.

Related posts

ಜೈನಕಾಶಿ ಮೂಡಬಿದಿರೆ ಇದರ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಯೋಗ ಪ್ರಾತ್ಯಕ್ಷಿಕೆಯೋಗಾಸನಗೈದ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ  ;

Voiceoftulunadu

ಮೂಲ್ಕಿ ಬಳಿಯ ಕೆರೆಕಾಡು ಅಕ್ಷಯ ಮಹಿಳಾ ಮಂಡಳಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಧವ ಶೆಟ್ಟಿಗಾರ್ ದಂಪತಿಯನ್ನು ಸನ್ಮಾನ : ತುಳುನಾಡಿನ ಆಹಾರ ಪದ್ಧತಿ ಶ್ರೇಷ್ಟ , ಅಮೂಲ್ಯ ಶೆಟ್ಟಿ ಕಟೀಲು;

Voiceoftulunadu

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಹಣದ ದುರ್ಬಳಕೆ: ಕಾಪುವಿನಲ್ಲಿ ಕಾಂಗ್ರೆಸ್ ಜಾಥಾ, ಪ್ರತಿಭಟನಾ ಸಭೆಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆ;

Voiceoftulunadu

Leave a Comment